ದೊಡ್ಡಬಳ್ಳಾಪುರದ ಕಾಡಿನಲ್ಲಿರುವ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ರೌಡಿಗಳ ಗುಂಪೊಂದು ನಟ ಪ್ರಥಮ್ ಮೇಲೆ ಹಲ್ಲೆ ನಡೆಸಲು ಯತ್ನ ಮಾಡಿದೆ.
ಇನ್ನು ಈ ಘಟನೆ ಜುಲೈ 22ರಂದೇ ಜರುಗಿದ್ದು, ಪ್ರಥಮ್ ಈ ವಿಷಯವನ್ನು ಎಲ್ಲಿಯೂ ಹೇಳಿರಲಿಲ್ಲ. ಆದರೆ ಲಾಯರ್ ಜಗದೀಶ್ ಪ್ರಥಮ್ಗೆ ಕರೆ ಮಾಡಿ ಆ ಕುರಿತು ಮಾತನಾಡಿ ಕಾಲ್ ರೆಕಾರ್ಡಿಂಗ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು.
ತನ್ನ ಮೇಲೆ ಹಲ್ಲೆ ಮಾಡಲು ಬಂದವರು ಮಾರಕಾಸ್ತ್ರಗಳನ್ನು ತೆಗೆದು ಚುಚ್ಚಿ ಹಾಕುತ್ತೇವೆ ಎಂದು ಬೆದರಿಸಿದರು ಎಂದು ಆರೋಪಿಸಿದ ಪ್ರಥಮ್ ಈ ಹಿಂದೆ ದರ್ಶನ್ ವಿರುದ್ಧ ಮಾತನಾಡಿದ್ದಕ್ಕೆ ಈ ಘಟನೆ ನಡೆಯಿತು ಎಂದರು.
ಈ ಕುರಿತು ಸದ್ಯ ಮಾಧ್ಯಮದವರ ಜೊತೆ ಮಾತನಾಡಿದ ಪ್ರಥಮ್ ತಾನು ಯಾರ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ, ಏಕೆಂದರೆ ನನಗೆ ಅವರ ಮೇಲೆ ಗೌರವ ಇದೆ, ಹೆಸರು ತೆಗೆದುಕೊಂಡರೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತೆ, ಬೆಂಕಿ ಹೊತ್ತಿಕೊಳ್ಳುತ್ತೆ ಎಂದಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳ ಹೆಸರು ಹೇಳಿದರೆ ಸುಪ್ರೀಂ ಅಂಗಳದಲ್ಲಿರುವ ಬೇಲ್ ರದ್ದಾಗುವ ಸಾಧ್ಯತೆ ಇದೆ ಎಂದು ಪ್ರಥಮ್ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ.
BIG NEWS: ಆಗಸ್ಟ್ 1ರಿಂದ ಯುಪಿಐನಲ್ಲಿ ಭಾರೀ ಬದಲಾವಣೆ; ಬೇಕಾದಷ್ಟು ಬಾರಿ ಬ್ಯಾಲೆನ್ಸ್ ಚೆಕ್ ಮಾಡಲು ಆಗಲ್ಲ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


