ಉಪಮುಖ್ಯಮಂತ್ರಿಯಾದ ಬಳಿಕ ಬಿಡುಗಡೆಯಾದ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಮೊದಲ ಚಿತ್ರ ಹರಿಹರ ವೀರಮಲ್ಲು ಬಾಕ್ಸ್ ಆಫೀಸ್ನಲ್ಲಿ ಅಬ್ಬರದ ಆರಂಭ ಪಡೆದುಕೊಂಡಿತ್ತು.
ಮೊದಲ ದಿನ ವಿಶ್ವದಾದ್ಯಂತ 70 ಕೋಟಿ ಗ್ರಾಸ್ನೊಂದಿಗೆ ಅಕೌಂಟ್ ತೆರೆದ ಚಿತ್ರ ಪವನ್ ಕಲ್ಯಾಣ್ ಸಿನಿ ಕೆರಿಯರ್ನಲ್ಲೇ ಬಿಗ್ಗೆಸ್ಟ್ ಓಪನರ್ ಎನಿಸಿಕೊಂಡಿತು. ಆದರೆ ಎರಡನೇ ದಿನ ಚಿತ್ರ ಮಾಡಿದ ಸಂಪಾದನೆ ಚಿತ್ರದ ಅಸಲಿಯತ್ತನ್ನು ಬಿಚ್ಚಿಟ್ಟಿದೆ.
ಮೊದಲ ದಿನ ಅಭಿಮಾನಿಗಳು ಹಾಗೂ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡವರು ತೆರಳಿದ್ದ ಕಾರಣ ಚಿತ್ರ ಒಳ್ಳೆಯ ಗಳಿಕೆ ಮಾಡಿತು. ಆದರೆ ಪ್ರೇಕ್ಷಕ ಮಹಾಪ್ರಭು ದುಡ್ಡು ವ್ಯರ್ಥ ಎಂದು ಮುಖದ ಮೇಲೆ ಬಾರಿಸಿದ ಹಾಗೆ ವಿಮರ್ಶೆಯನ್ನು ನೀಡಿದ ಬೆನ್ನಲ್ಲೇ ಹರಿಹರ ವೀರಮಲ್ಲು ಕಥೆ ಹರೋಹರ ಆಗಿದೆ.
ಹೌದು, ಎರಡನೇ ದಿನ ಹರಿಹರ ವೀರಮಲ್ಲು ವಿಶ್ವದಾದ್ಯಂತ ಸೇರಿ ಕೇವಲ 9.90 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರ ಎರಡು ದಿನಕ್ಕೆ 79 ಕೋಟಿ ಗಳಿಸಿ ಮಕಾಡೆ ಮಲಗಿದೆ.
79 ಕೋಟಿ ಗ್ರಾಸ್ ಕಲೆಕ್ಷನ್ ಆಗಿದ್ದು, ಇದರಲ್ಲಿ ನಿರ್ಮಾಪಕರಿಗೆ ಸಿಗುವ ನೆಟ್ ಕಲೆಕ್ಷನ್ 52.5 ಕೋಟಿ ರೂ ಆಗಿದೆ. ನಿರ್ಮಾಪಕ ನಷ್ಟ ಮಾಡಿಕೊಳ್ಳದೇ ಪಾರಾಗಬೇಕೆಂದರೆ ಚಿತ್ರ 127.50 ಕೋಟಿ ನೆಟ್ ಕಲೆಕ್ಷನ್ ಮಾಡಬೇಕಿದೆ. ಸದ್ಯ 52.5 ಕೋಟಿ ಮಾತ್ರ ಮಾಡಿರುವ ನಿರ್ಮಾಪಕನಿಗೆ ಇನ್ನೂ ಬರೋಬ್ಬರಿ 75 ಕೋಟಿ ಬರುವುದು ಬಾಕಿ ಇದೆ. ಸದ್ಯದ ಪರಿಸ್ಥಿತಿ ನೋಡಿದರೆ 75 ಕೋಟಿ ಬದಲು ಚಿತ್ರ ಇನ್ನೊಂದು 7 ಕೋಟಿ ದುಡಿದರೆ ಹೆಚ್ಚು. ಅಲ್ಲಿಗೆ ಚಿತ್ರ ಒಂದು ದಿನದ ಅಭಿಮಾನಿಗಳ ಜಾತ್ರೆಯಾಗಿ ಅಂತ್ಯವಾಗಿಬಿಟ್ಟಿದೆ.
ಕೊಡಗಿನಲ್ಲಿ ಅಬ್ಬರದ ಮಳೆ: ಕೆಆರ್ಎಸ್ ಒಳಹರಿವಿನಲ್ಲಿ ಭಾರೀ ಏರಿಕೆ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


