ಬೆಂಗಳೂರು: ಅಕ್ಟೋಬರ್ 2ರಂದು ಬಿಡುಗಡೆಯಾಗಿದ್ದ ಕಾಂತಾರ ಚಾಪ್ಟರ್ 1 ಬಾಕ್ಸ್‌ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ.
2022ರಲ್ಲಿ ಬಿಡುಗಡೆಯಾಗಿದ್ದ ಕಾಂತಾರ ರೀತಿಯೇ ಈ ಚಿತ್ರವೂ ಸಹ ದೊಡ್ಡ ಯಶಸ್ಸು ಸಾಧಿಸಿದ್ದು, ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದೆ.
ರಿಷಬ್ ಶೆಟ್ಟಿ ನಾಯಕನಾಗಿ ಹಾಗೂ ನಿರ್ದೇಶಕನಾಗಿ ಗೆದ್ದಿದ್ದು, ಪ್ರೇಕ್ಷಕರಿಂದ ಮತ್ತೊಮ್ಮೆ ಮೆಚ್ಚುಗೆಯ ಮಹಾಪೂರವನ್ನೇ ಪಡೆದುಕೊಂಡಿದ್ದಾರೆ.
ಇನ್ನು ಕಾಂತಾರ ಚಾಪ್ಟರ್ 1 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 800 ಕೋಟಿ ಗಳಿಕೆಯನ್ನು ಮಾಡಿ ಅಬ್ಬರಿಸಿ ಇನ್ನೂ ಸಹ ಹಲವೆಡೆ ವಾರಾಂರತ್ಯದಲ್ಲಿ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿದ್ದು, ಹೀಗಿರುವಾಗಲೇ ಚಿತ್ರದ ಒಟಿಟಿ ಬಿಡುಗಡೆ ಘೋಷಣೆಯಾಗಿದೆ.
ಹೌದು, ನಿನ್ನೆ ( ಅಕ್ಟೋಬರ್ 26 ) ಅಮೆಜಾನ್ ಪ್ರೈಮ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ʼದಂತಕತೆ ಮುಂದುವರಿಯಲಿದೆʼ ಎಂದು ಟ್ವೀಟ್ ಮಾಡಿದ್ದು, ಪರೋಕ್ಷವಾಗಿ ಕಾಂತಾರ ಚಾಪ್ಟರ್ 1ರ ಒಟಿಟಿಯಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ.
ಹೀಗೆ ಕಾಂತಾರ ಒಟಿಟಿ ಕುರಿತ ಪೋಸ್ಟ್ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಬೇಸರ ಹೊರಹಾಕಿದ್ದು, ಇಷ್ಟು ಬೇಗ ಒಟಿಟಿ ಬಿಡುಗಡೆ ಬೇಕಿತ್ತಾ ಎಂದಿದ್ದಾರೆ. ಅಲ್ಲದೇ ಹೀಗೆ ಶೀಘ್ರದಲ್ಲಿಯೇ ಒಟಿಟಿಗೆ ಬರಲಿದೆ ಎನ್ನುವ ಟ್ವೀಟ್ ನೋಡಿ ಚಿತ್ರಮಂದಿರಕ್ಕೆ ಹೋಗಬೇಕು ಎಂದುಕೊಂಡಿದ್ದ ಸಿನಿ ರಸಿಕರು ತಮ್ಮ ಯೋಜನೆಯನ್ನು ಕೈಬಿಡಬಹುದು ಎಂದೂ ಸಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
BREAKING: ಧರ್ಮಸ್ಥಳ ಎಸ್‌ಐಟಿ ವರದಿ ಬರುವ ದಿನಾಂಕ ಘೋಷಿಸಿದ ಗೃಹಸಚಿವ ಪರಮೇಶ್ವರ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


