ಬೆಂಗಳೂರು:ಇಂದು ಕಡಿಮೆಯಾಗಬಹುದು, ನಾಳೆ ಇಳಿಕೆಯಾಗಬಹುದು ಎಂದು ಕಾಯುತ್ತಿದ್ದ ಗ್ರಾಹಕರಿಗೆ ಚಿನ್ನದ ಬೆಲೆ ಶಾಕ್ ಮೇಲೆ ಶಾಕ್ ನೀಡುತ್ತಿದೆ ವಾರವಿಡೀ ಏರಿಕೆಯ ಹಾದಿಯಲ್ಲಿರುವ ಬಂಗಾರದ ದರ, ಶನಿವಾರವೂ (ಡಿಸೆಂಬರ್ 27) ಭಾರಿ ಜಿಗಿತ ಕಾಣುವ ಮೂಲಕ ಮಧ್ಯಮ ವರ್ಗದವರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.22 ಕ್ಯಾರಟ್ ಚಿನ್ನ 10 ಗ್ರಾಂಗೆ 720 ರು. ಏರಿ 1,32,200 ರು.ಗೆ ಹಾಗೂ 24 ಕ್ಯಾರಟ್ ಚಿನ್ನ 10 ಗ್ರಾಂಗೆ 800 ರು.ಏರಿ 1,44,200 ರು.ಗೆ ತಲುಪಿದೆ.
ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗುತ್ತಿದ್ದು, ವಿವಿಧ ಗುಣಮಟ್ಟದ ಬಂಗಾರದ ದರಗಳು ಗ್ರಾಹಕರಲ್ಲಿ ತಲ್ಲಣ ಮೂಡಿಸಿವೆ. ಅತಿ ಶುದ್ಧವಾದ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ₹14,122 ಕ್ಕೆ ಏರಿಕೆಯಾಗಿದ್ದರೆ, ಮದುವೆ ಹಾಗೂ ಶುಭ ಕಾರ್ಯಗಳಿಗೆ ಒಡವೆ ತಯಾರಿಸಲು ಬಳಸಲಾಗುವ 22 ಕ್ಯಾರೆಟ್ ಆಭರಣ ಚಿನ್ನದ ದರ ಪ್ರತಿ ಗ್ರಾಂಗೆ ₹12,945 ರಷ್ಟಿದೆ. ಇನ್ನು ಕಡಿಮೆ ಶುದ್ಧತೆಯ 18 ಕ್ಯಾರೆಟ್ ಚಿನ್ನದ ಬೆಲೆಯು ಸಹ ಏರಿಕೆಯ ಹಾದಿಯಲ್ಲೇ ಇದ್ದು, ಪ್ರತಿ ಗ್ರಾಂಗೆ ₹10,592 ಕ್ಕೆ ತಲುಪಿದೆ. ವಾರಾಂತ್ಯದ ಈ ಭಾರಿ ಏರಿಕೆಯು ಹೂಡಿಕೆದಾರರ ಮುಖದಲ್ಲಿ ನಗು ತಂದಿದ್ದರೂ, ಸಾಮಾನ್ಯ ಗ್ರಾಹಕರ ಪಾಲಿಗೆ ಬಂಗಾರ ಕೊಳ್ಳುವುದು ಈಗ ಗಗನಕುಸುಮವಾಗಿ ಪರಿಣಮಿಸಿದೆ.
ಬೆಂಗಳೂರು
24K ಚಿನ್ನ /g ₹14,122 (₹120
22K ಚಿನ್ನ /g ₹12,945
18K ಚಿನ್ನ /g ₹10,592
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ(ಚಿನ್ನದ ಬೆಲೆ (10 ಗ್ರಾಂ) ಚಿನ್ನದ ಬೆಲೆ (10 ಗ್ರಾಂ))
ಬೆಂಗಳೂರು ₹1,41,220
ನಾಗ್ಪುರ ₹1,41,220
ಮುಂಬೈ ₹1,41,220
ಚೆನ್ನೈ ₹1,41,220
ಕೋಲ್ಕತ್ತಾ ₹1,41,220
ಪಾಟ್ನಾ ₹1,41,270
ಸೂರತ್ ₹1,41,270
ಚಂಡೀಗಢ ₹1,41,370
ಲಕ್ನೋ ₹1,41,370
₹2.43 ಲಕ್ಷದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಬೆಳ್ಳಿಯ ನಾಗಾಲೋಟ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


