ಬೆಂಗಳೂರು: ದೇಶದ ಆರ್ಥಿಕ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಆರ್ಭಟ ಮುಂದುವರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬೆಳ್ಳಿ ಬೆಲೆ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಗ್ರಾಹಕರ ಪಾಲಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಿದೆ. ಹೂಡಿಕೆದಾರರಿಗೆ ಇದು ಸುವರ್ಣಾವಕಾಶವಾದರೂ, ಮಾರುಕಟ್ಟೆಯ ಈ ಅನಿರೀಕ್ಷಿತ ಏರಿಕೆ ಸಾಮಾನ್ಯ ಗ್ರಾಹಕರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ.
ಬೆಳ್ಳಿ ಬೆಲೆ: ಒಂದೇ ದಿನ ₹9,500 ಏರಿಕೆ!
ಬೆಳ್ಳಿಯ ಓಟ ಈ ವರ್ಷ ಅಕ್ಷರಶಃ ಚಿನ್ನವನ್ನೇ ಹಿಂದಿಕ್ಕುವಂತಿದೆ. ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ಕೆಜಿ ಬೆಳ್ಳಿಗೆ ಬರೋಬ್ಬರಿ 9,500 ರೂಪಾಯಿ ಏರಿಕೆಯಾಗಿದ್ದು, ಬೆಲೆಯು ದಾಖಲೆಯ 2.43 ಲಕ್ಷ ರೂಪಾಯಿಗೆ ತಲುಪಿತ್ತು. ಇಂದು (ಶನಿವಾರ, ಡಿ. 27) ಈ ಬೆಲೆ ₹2.5 ಲಕ್ಷದ ಗಡಿ ತಲುಪುವ ಮೂಲಕ ಮಾರುಕಟ್ಟೆಯಲ್ಲಿ ಆಶ್ಚರ್ಯ ಮೂಡಿಸಿದೆ.
ಬೆಳ್ಳಿ ಬೆಲೆಯ ಈ ಬಾರಿಯ ಏರಿಕೆ ಕೇವಲ ಸಾಮಾನ್ಯ ಜಿಗಿತವಲ್ಲ, ಬದಲಿಗೆ ಇದೊಂದು ಐತಿಹಾಸಿಕ ದಾಖಲೆಯಾಗಿದೆ. ವರ್ಷದ ಆರಂಭದಲ್ಲಿ ಕೇವಲ ₹89,700 ರಷ್ಟಿದ್ದ ಒಂದು ಕೆಜಿ ಬೆಳ್ಳಿಯ ದರ, ಇಂದು ಅಕ್ಷರಶಃ ಗಗನಕ್ಕೇರಿದೆ. ಈ ವರ್ಷದಲ್ಲಿ ಬೆಳ್ಳಿಯು ಬರೋಬ್ಬರಿ ಶೇ. 163.5 ರಷ್ಟು ಅತಿಮಾನುಷ ಏರಿಕೆ ಕಂಡಿದ್ದು, ಹೂಡಿಕೆದಾರರಿಗೆ ಪ್ರತಿ ಕೆಜಿಗೆ ಅಂದಾಜು ₹1.46 ಲಕ್ಷದಷ್ಟು ಬಂಪರ್ ಲಾಭ ತಂದುಕೊಟ್ಟಿದೆ. ಈ ಬೆಲೆ ಏರಿಕೆಯ ತೀವ್ರತೆ ಎಷ್ಟಿದೆ ಎಂದರೆ, ದೇಶದ ರಾಜಧಾನಿ ದೆಹಲಿಯಲ್ಲಿ ಕೇವಲ ನಾಲ್ಕು ದಿನಗಳ ಅಲ್ಪಾವಧಿಯಲ್ಲಿ ಬೆಳ್ಳಿಯ ಬೆಲೆ ₹32,250 ರಷ್ಟು ಭಾರಿ ಏರಿಕೆ ಕಂಡು ಮಾರುಕಟ್ಟೆ ತಜ್ಞರನ್ನೇ ಬೆರಗುಗೊಳಿಸಿದೆ.
ಗಣಿಗಾರಿಕೆಯಲ್ಲಿ ಬೆಳ್ಳಿಯ ಲಭ್ಯತೆ ಕಡಿಮೆಯಾಗುತ್ತಿರುವುದು ಬೆಲೆ ಏರಿಕೆಗೆ ಪೆಟ್ಟು ನೀಡಿದೆ.2025ರಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಸ್ತಿಯಾಗಿ ಬೆಳ್ಳಿ ಹೊರಹೊಮ್ಮಿದೆ.ಈ ವಾರಾಂತ್ಯದಲ್ಲಿ ಮದುವೆ ಅಥವಾ ಶುಭ ಕಾರ್ಯಗಳಿಗೆ ಒಡವೆ ಖರೀದಿಸಲು ಯೋಜಿಸಿದ್ದವರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಆದರೆ, ಮೊದಲೇ ಹೂಡಿಕೆ ಮಾಡಿದವರಿಗೆ ಈ ವೀಕೆಂಡ್ ನಿಜಕ್ಕೂ ಬಂಪರ್ ಜಿಗಿತ ನೀಡಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ಬೆಲೆ: ಅಮೂಲ್ಯ ಲೋಹ ಬೆಳ್ಳಿಯ ಬೆಲೆಯು ದೇಶದಾದ್ಯಂತ ಹೊಸ ದಾಖಲೆ ಬರೆದಿದೆ. ಪ್ರಮುಖ ನಗರಗಳಲ್ಲಿ ಬೆಲೆಗಳು ಸರಿಸುಮಾರು ಒಂದೇ ಆಗಿದ್ದರೂ, ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಬೆಲೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದೆ.
ವಿವಿಧ ನಗರಗಳಲ್ಲಿನ ಬೆಳ್ಳಿ ದರ (ಪ್ರತಿ ಕೆಜಿಗೆ):ನಗರಗಳುಬೆಲೆ (ಪ್ರತಿ ಕೆಜಿಗೆ)
ಬೆಂಗಳೂರು₹2,51,000
ದೆಹಲಿ₹2,51,000
ಮುಂಬೈ₹2,51,000
ಕೋಲ್ಕತ್ತಾ₹2,51,000
ಪಾಟ್ನಾ₹2,51,000
ಲಕ್ನೋ₹2,51,000
ಚಂಡೀಗಢ₹2,51,000
ಸೂರತ್₹2,51,000
ಚೆನ್ನೈ₹2,74,000
ಕೇರಳ₹2,74,000
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


