Wednesday, September 2, 2026
spot_img
More
    spot_img
    HomeLatest newsತೂಕ ಇಳಿಸಲು ಸೂಕ್ತವಾದ ಆಯಿಲ್-ಫ್ರೀ ಪೂರಿ ತಯಾರಿಕೆ ವಿಧಾನ

    ತೂಕ ಇಳಿಸಲು ಸೂಕ್ತವಾದ ಆಯಿಲ್-ಫ್ರೀ ಪೂರಿ ತಯಾರಿಕೆ ವಿಧಾನ

    ಅತ್ಯಂತ ಪ್ರಿಯವಾದ ಉಪಹಾರ ಪದಾರ್ಥಗಳಲ್ಲಿ ಒಂದು ಪೂರಿ.. ಪೂರಿ ಕೇವಲ ಟಿಫನ್ ಮಾತ್ರವಲ್ಲದೇ ಊಟಕ್ಕೂ ಬಳಸಲಾಗುತ್ತದೆ.ಬಹುತೇಕ ಎಲ್ಲಾ ಮಕ್ಕಳು ಬೆಳಗ್ಗೆ ಏನು ಬೇಕು ಎಂದು ಕೇಳಿದ್ರೆ ಪೂರಿನೇ ಬೇಕು ಅಂತಾ ಹೇಳುತ್ತಾರೆ. ಹೋಟೆಲ್‌ಗಳಿಗೆ ಹೋದರೂ ಪೂರಿ ಬೇಕು ಅಂತಾ ಹಟ ಹಿಡಿಯುತ್ತಾರೆ. ಬೆಳಗಿನ ‘ಉಪಾಹಾರಕ್ಕಾಗಿ ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಪೂರಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ತೂಕ ಇಳಿಸಿಕೊಳ್ಳಲು ಬಯಸುವವರು ಮತ್ತು ಹೆಚ್ಚು ಆರೋಗ್ಯ ಪ್ರಜ್ಞೆಯುಳ್ಳವರು ಹೆಚ್ಚು ಪೂರಿಗಳನ್ನು ತಿನ್ನಬಾರದು. ಏಕೆಂದರೆ ಪೂರಿಗಳನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಹೆಚ್ಚಿನ ಎಣ್ಣೆಯಂಶದಿಂದಾಗಿ ಪೂರಿಗಳಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಹೀಗಾಗಿ ಕೆಲವರು ಪೂರಿಗಳಲ್ಲಿ ಎಣ್ಣೆ ಹೆಚ್ಚಿರುವ ಕಾರಣ ತಿನ್ನಲು ಮುಂದಾಗುವುದಿಲ್ಲ. ಆದರೆ, ನಿಮಗೆ ಗೊತ್ತೆ ಸ್ವಲ್ಪವೂ ಎಣ್ಣೆಯಿಲ್ಲದೆ ಪೂರಿಗಳನ್ನು ತಯಾರಿಸಬಹುದು.ಎಣ್ಣೆಯಲ್ಲಿ ಕರಿದ ಪೂರಿಗಳನ್ನು ಸೇವಿಸಿದರೆ ತೂಕ​ ಹೆಚ್ಚಾಗುವ ಭಯ ಕಾಡುತ್ತದೆ. ಆದ್ರೆ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಮತ್ತು ಡಯಟ್ ಮಾಡುತ್ತಿರುವವರಿಗಾಗಿಯೇ ಆಯಿಲ್​ ಫ್ರೀ ಪೂರಿಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಎಣ್ಣೆಯಿಲ್ಲದ ನಯವಾದ ಪೂರಿಗಳನ್ನು ಸವಿಯಬಹುದು. ಎಣ್ಣೆ ಇಲ್ಲದೆ ಪೂರಿ ಮಾಡುವುದು ಹೇಗೆ? ತಯಾರಿಸುವ ವಿಧಾನಗಳ ಕುರಿತು ಅರಿತುಕೊಳ್ಳೋಣ.

    Advertisement

    ಆಯಿಲ್​ ಫ್ರೀ ಪೂರಿಗೆ ಬೇಕಾಗುವ ಪದಾರ್ಥಗಳು:

    ಗೋಧಿ ಹಿಟ್ಟು – ಕಪ್

    ಮೊಸರು – 2 ಟೀಸ್ಪೂನ್

    ಉಪ್ಪು- ರುಚಿಗೆ ತಕ್ಕಷ್ಟು

    ನೀರು – ಅಗತ್ಯಕ್ಕೆ ತಕ್ಕಷ್ಟು

    ಆಯಿಲ್​ ಫ್ರೀ ಪೂರಿ ಮಾಡುವುದು ಹೇಗೆ?

    ಮೊದಲು ಗೋಧಿ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ ಮತ್ತು ಎಲ್ಲಾ ಹಿಟ್ಟು ಮಿಶ್ರಣವಾಗುವಂತೆ ಚೆನ್ನಾಗಿ ಕಲಸಿ. ಹಿಟ್ಟು ತುಂಬಾ ನಯವಾದ ತನಕ ಸಾಧ್ಯವಾದಷ್ಟು ಬೆರೆಸಿಕೊಳ್ಳಿ. ಮತ್ತೆ ಸರಿಯಾಗಿ ಮಿಶ್ರಣ ಮಾಡಿ.ಈಗ ಹಿಟ್ಟಿಗೆ ಅಗತ್ಯವಿದ್ದಷ್ಟು ನೀರನ್ನು ಅಂದ್ರೆ, ಸ್ವಲ್ಪ ಸ್ವಲ್ಪವೇ ಹಾಕಿ ಕಲಸಿಕೊಳ್ಳಬೇಕು.. ನೀವು ಸಿದ್ಧಪಡಿಸುವ ಹಿಟ್ಟನ್ನು ಚಪಾತಿ ಹಿಟ್ಟಿನ ರೀತಿಯಲ್ಲಿ ಕಲಸಿ.ಬೌಲ್ ಅನ್ನು ಮುಚ್ಚಿ ಇಡಬೇಕು, 20 ನಿಮಿಷಗಳ ಕಾಲ ಹಾಗೆ ಇಡಿ.ಬಳಿಕ ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಮತ್ತು ಪೂರಿಗಳಂತೆ ಚಪಾತಿ ಮಣೆಯ ಮೇಲೆ ನಿಮಗೆ ಬೇಕಾದ ಗಾತ್ರದಲ್ಲಿ ರೆಡಿ ಮಾಡಿ.20 ನಿಮಿಷದ ನಂತರ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಅವು ಸ್ವಲ್ಪ ದಪ್ಪಗಿರುವಂತೆ ಚಪಾತಿ ಲಟ್ಟಣಿಗೆಯಿಂದ ಒತ್ತಬೇಕು. ಈ ವೇಳೆ ಸ್ಟವ್‌ನಲ್ಲಿ ಬಾಣಲೆಯಿಟ್ಟು ನೀರು ಹಾಕಿ ಕುದಿಯಲು ಮಾಡಿ. ಕುದಿಯುವ ನೀರಿಗೆ ಒಂದೊಂದಾಗಿ ಪೂರಿಗಳನ್ನು ಹಾಕಿ. ಪೂರಿಯನ್ನು ಸುಮಾರು ಎರಡು ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಅದು ನೀರಿನ ಮೇಲೆ ತೇಲಿದಾಗ, ಅದನ್ನು ಹೊರತೆಗೆಯಿರಿ. ಎಲ್ಲಾ ಪೂರಿಗಳನ್ನು ಒಂದೊಂದಾಗಿ ನೀರಿನಲ್ಲಿ ಕುದಿಸಿ.ನೀರಿನಲ್ಲಿ ಕುದಿಸಿದ ಪೂರಿಗಳ ಮೇಲಿನ ತೇವಾಂಶವನ್ನು ಶುದ್ಧ ಬಟ್ಟೆಯಿಂದ ಒರೆಸಿ ಒಣಗಿಸಿ. ನಂತರ ಏರ್ ಫೈಯರ್ನಲ್ಲಿ ಪೂರಿಗಳನ್ನು ಹಾಕಿ. ಶಾಖವನ್ನು ಸುಮಾರು 180 ಡಿಗ್ರಿಗಳಿಗೆ ಹೊಂದಿಸಿ, ಐದು ನಿಮಿಷಗಳ ಕಾಲ ಇರಿಸಿ. ಒಂದಕ್ಕಿಂತ ಹೆಚ್ಚು ಪೂರಿಗಳನ್ನು ಏರ್ ಫೈಯರ್‌ನಲ್ಲಿ ಒಮ್ಮೆಗೆ ಹಾಕಬಹುದು. ಪೂರಿಯನ್ನು ಏರ್ ಪ್ರೈಯರ್‌ನಲ್ಲಿ 180 ಡಿಗ್ರಿಯಲ್ಲಿ 4 ನಿಮಿಷಗಳ ಕಾಲ ಪ್ರೈ ಮಾಡಿ. ಯಾವುದೇ ಸಂದರ್ಭದಲ್ಲಿ ಅದನ್ನು ಅತಿಯಾಗಿ ಬೇಯಿಸಬಾರದು. ಏ‌ರ್ ಫೈಯರ್‌ನಲ್ಲಿ ಸುಮಾರು 4 ರಿಂದ 5 ನಿಮಿಷಗಳ ನಂತರ, ಪೂರಿಗಳು ಉಬ್ಬುತ್ತವೆ.ಇದು ಎಣ್ಣೆಯ ಒಂದಿಷ್ಟೂ ಅಂಶವಿಲ್ಲದ ಆರೋಗ್ಯಕರ ಆಹಾರ. ಚಿಕ್ಕವರಿಂದ ಹಿಡಿದು ಹಿರಿಯರವರಗೆ, ಅನಾರೋಗ್ಯದಿಂದ ಬಳಲುತ್ತಿರುವವರು ಕೂಡಾ ಇದನ್ನು ಯಾವುದೇ ಹಿಂಜರಿಕೆ ಇಲ್ಲದೆ ತಿನ್ನಬಹುದು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading