ನವದೆಹಲಿ: ಬಜೆಟ್ ಎಂದರೆ ಆಯವ್ಯಯ ಪತ್ರ. ಆಯ ಎಂದರೆ ಆದಾಯ, ವ್ಯಯ ಎಂದರೆ ಖರ್ಚು. 2025ರ ಕೇಂದ್ರ ಬಜೆಟ್ ಮಂಡನೆಗೆ (Union Budget 2025) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ಫೆ.1 ಶನಿವಾರ 14 ನೇ ಬಜೆಟ್ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಮಂಡಿಸಲಿದ್ದಾರೆ.ಮೊಟ್ಟ ಮೊದಲು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಕೀರ್ತಿ ಇಂದಿರಾಗಾಂಧಿಗೆ ಸಲ್ಲುತ್ತದೆ. ಇವರ ನಂತರ ಭಾರತದ ಬಜೆಟ್ ಮಂಡಿಸಿದ ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್.ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರದ ಅಡಿಯಲ್ಲಿ ಇದು ಸತತ ಮೂರನೇ ಅವಧಿಗೆ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಆಗಿದೆ.ಟ್ಯಾಬ್ ಮೂಲಕ ಸಚಿವರು ಡಿಜಿಟಲ್ ಮಾದರಿಯಲ್ಲಿ ಬಜೆಟ್ ಮಂಡಿಸಲಿದ್ದಾರೆ.2021 ರಿಂದಲೂ ಮುಂದುವರಿಯುತ್ತಿರುವಂತೆ, 2025-26ರ ಕೇಂದ್ರ ಬಜೆಟ್ ಸಂಪೂರ್ಣವಾಗಿ ಕಾಗದರಹಿತ ರೂಪದಲ್ಲಿ ತಲುಪಿಸಲಾಗುತ್ತದೆ,ಈ ಕೇಂದ್ರ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (nda) ಸರ್ಕಾರದ ಸತತ ಮೂರನೇ ಅವಧಿಯಲ್ಲಿ ಎರಡನೇ ಸಂಪೂರ್ಣ ಹಣಕಾಸು ಬಜೆಟ್ ಆಗಿರುತ್ತದೆ.ಈ ಮೂಲಕ ಸತತ 8 ಬಾರಿ ಬಜೆಟ್ ಮಂಡನೆ ಮಾಡಿದ ಶ್ರೇಯಸ್ಸಿಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಲಿದ್ದಾರೆ.
ಬಜೆಟ್ 2025 ದಿನಾಂಕ ಮತ್ತು ಸಮಯ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಕೇಂದ್ರ ಬಜೆಟ್ 2025 ರ ಭಾಷಣವನ್ನು 1 ಫೆಬ್ರವರಿ 2025 ರಂದು ಸಂಸತ್ತಿನಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ (IST) ಮಂಡಿಸಲಿದ್ದಾರೆ.ಅವರ ಭಾಷಣವು ಲೋಕಸಭೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ.2019 ರಿಂದ, ಬಜೆಟ್ ಪೇಪರ್ ಅನ್ನು ಬಹಿ ಖಾತಾ ಎಂದು ಕರೆಯಲಾಗುತ್ತಿದೆ. ಇದು ಸರ್ಕಾರದ ಹಣಕಾಸು, ಖರ್ಚು, ಆದಾಯ ಮತ್ತು ಆರ್ಥಿಕ ನೀತಿಗಳ ಮಾಹಿತಿಯನ್ನು ಒಳಗೊಂಡಿದೆ. ಬಜೆಟ್ ದಾಖಲೆಗಳ ಹಿಂದಿ ಮತ್ತು ಇಂಗ್ಲಿಷ್ ಎರಡೂ ಆವೃತ್ತಿಗಳು ಲಭ್ಯವಿರುತ್ತವೆ.ಬಜೆಟ್ ಎಂಬುದು ಸರ್ಕಾರಗಳ ವಾರ್ಷಿಕ ಲೆಕ್ಕಾಚಾರವಾಗಿದೆ. ಇದು ಸರ್ಕಾರದ ಖರ್ಚು ಮತ್ತು ಆದಾಯದ ಮಾಹಿತಿಯನ್ನು ವಲಯವಾರು ನೀಡುತ್ತದೆ. ಏಪ್ರಿಲ್ 1 ರಿಂದ ಮಾರ್ಚ್ 31ರ ತನಕ ಅನ್ವಯವಾಗುವಂತೆ ಪ್ರತಿವರ್ಷ ಬಜೆಟ್ ಮಂಡನೆ ಮಾಡಲಾಗುತ್ತದೆ.

ಬಜೆಟ್ 2025: ಎಲ್ಲಿ ಮತ್ತು ಯಾವಾಗ ವೀಕ್ಷಿಸಬೇಕು
ಬಜೆಟ್ 2025 ಅನ್ನು ಇಲ್ಲಿ ಲೈವ್ ಆಗಿ ವೀಕ್ಷಿಸಬಹುದು:
ಸಂಸತ್ತಿನ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿ.
ಸರ್ಕಾರದ ಅಧಿಕೃತ YouTube ಚಾನಲ್‌ಗಳು ಮತ್ತು X ಹ್ಯಾಂಡಲ್‌ಗಳು.
ಬಜೆಟ್ ದಾಖಲೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ವೆಬ್ ಪೋರ್ಟಲ್ http://www.indiabudget.gov.in ನಲ್ಲಿ ವೀಕ್ಷಿಸಬಹುದು
ಹಣಕಾಸು ಸಚಿವರಾಗಿದ್ದ RK ಷಣ್ಮುಖಂ ಚೆಟ್ಟಿ ಅವರು 1947ರಲ್ಲಿ ಚೊಚ್ಚಲ ಬಜೆಟ್ ಮಂಡಿಸುವುದರೊಂದಿಗೆ ಭಾರತದ ಬಜೆಟ್ ಮಂಡನೆಗಳ ಪ್ರಯಾಣವನ್ನು ಆರಂಭಿಸಿದರು. ಅಲ್ಲಿಂದ ಈಚೆಗೆ, ಸ್ವಾತಂತ್ರ್ಯದ ನಂತರ ಒಟ್ಟಾರೆ 34 ಹಣಕಾಸು ಮಂತ್ರಿಗಳು ಬಜೆಟ್ ಮಂಡಿಸಿದ್ದಾರೆ.ಭಾರತದ ಮೊದಲ ಬಜೆಟ್ ಅನ್ನು 161 ವರ್ಷಗಳ ಹಿಂದೆ ಅಂದರೆ 1860 ರಲ್ಲಿ ಮಂಡನೆ ಮಾಡಲಾಗಿತ್ತು. ಈ ಮೊದಲ ಬಜೆಟ್ ಮಂಡನೆ ಮಾಡಿದವರು ಸ್ಕಾಟಿಸ್ ಎಕನಾಮಿಸ್ಟ್ ಜೇಮ್ಸ್ ವಿಲ್ಸನ್. ಮೊದಲ ಬಜೆಟ್ ಇಂದ ಇಂದಿನವರೆಗಿನ ಬಜೆಟ್ (Budget) ಮಂಡನೆಯಲ್ಲಿ ಅನೇಕ ಬದಲಾವಣೆಗಳಾಗಿವೆ.
ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ದೇಶದ ಹಣಕಾಸು ಸಚಿವರು ಯಾರು ಯಾರು ಸಂಪೂರ್ಣ ಮಾಹಿತಿ
ದಿ.ಮೊರಾರ್ಜಿ ದೇಸಾಯಿ
ಭಾರತೀಯ ಹಣಕಾಸು ಮಂತ್ರಿಗಳಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿಯವರಿಗೆ ಸಲ್ಲುತ್ತದೆ..ಇವರು ಭಾರತೀಯ ರಾಜಕೀಯದಲ್ಲಿ ಅನುಭವಿ ರಾಜಕಾರಣಿ ಎಂದೇ ಹೆಸರು ಮಾಡಿದ್ದಾರೆ. ದಿ.ಮೊರಾರ್ಜಿ ದೇಸಾಯಿ (Mr. Morarji Desai) ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ 10 ಬಾರಿ ಬಜೆಟ್ ಮಂಡಿಸಿದ್ದಾರೆ. 1950 ರ ದಶಕದಲ್ಲಿ ಹಣಕಾಸು ಸಚಿವರಾಗಿ ತದನಂತರ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ . ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿಯವರಿಗೆ ಸಲ್ಲುತ್ತದೆ
ಪಿ ಚಿದಂಬರಂ
ಪಿ ಚಿದಂಬರಂ (P Chidambaram) ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಒಂಬತ್ತು ಬಜೆಟ್ ಮಂಡನೆಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 1990ರ ದಶಕ ಮತ್ತು 2000ರ ದಶಕದ ಆರಂಭದಲ್ಲಿ ಅವರ ಅಧಿಕಾರಾವಧಿಯಲ್ಲಿ ಸರ್ಕಾರ ಆರ್ಥಿಕ ಸುಧಾರಣೆ, ಹಣಕಾಸಿನ ಬಲವರ್ಧನೆ ಮತ್ತು ಜಾಗತೀಕರಣದ ಆರ್ಥಿಕತೆಯ ಸವಾಲುಗಳನ್ನು ಪರಿಪೂರ್ಣವಾಗಿ ನಿರ್ವಹಿಸಿತ್ತು.
ಪ್ರಣಬ್ ಮುಖರ್ಜಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರು ಭಾರತದ ರಾಜಕೀಯದಲ್ಲಿ ಅತ್ಯಂತ ಹಿರಿಯರು, ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಎಂಟು ಬಾರಿ ಬಜೆಟ್ ಮಂಡಿಸಿದರು. 1980ರ ದಶಕ, 2009 ಮತ್ತು 2012 ರ ಅವರ ಅವಧಿಗಳಲ್ಲಿ ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿದರು.
ಯಶವಂತ್ ಸಿನ್ಹಾ
ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಏಳು ಬಜೆಟ್ ಮಂಡನೆ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ 1998 ರಿಂದ 2002 ರವರೆಗೆ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಮನಮೋಹನ್ ಸಿಂಗ್
ಪ್ರಧಾನಿಯಾಗುವ ಮೊದಲು, ಖ್ಯಾತ ಅರ್ಥಶಾಸ್ತ್ರಜ್ಞ ರಾಗಿದ್ದ ಮನಮೋಹನ್ ಸಿಂಗ್ (Manamohan Singh) ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಆರು ಬಾರಿ ಬಜೆಟ್ ಮಂಡಿಸಿದ್ದರು. 1990ರ ದಶಕದಲ್ಲಿ ಅವರು ಮಂಡಿಸಿದ ಬಜೆಟ್ ಭಾರತದ ಆರ್ಥಿಕ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ.
ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಜುಲೈ 2019 ರಿಂದ ಇಂದಿನವರೆಗೆ 6 ಬಜೆಟ್ ಮಂಡಿಸಿದ್ದಾರೆ. ಅಲ್ಲದೆ ಅವರು ದೇಶದ ಮೊದಲ ಪೂರ್ಣ ಪ್ರಮಾಣದ ಮಹಿಳಾ ಹಣಕಾಸು ಸಚಿವರಾಗಿದ್ದಾರೆ.ಈಗ ಪ್ರಸಕ್ತ ಸಾಲಿನ ಬಜೆಟ್ ಮಂಡಿಸುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಮನಮೋಹನ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


