Wednesday, November 4, 2026
spot_img
More
    spot_img
    HomeLatest newsಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೆದರಿಸಲು ಡಿಕೆಶಿ ಹಿಂದುತ್ವದ ವೇಷ ಹಾಕಿದ್ದಾರೆ: ಮುನಿರತ್ನ

    ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೆದರಿಸಲು ಡಿಕೆಶಿ ಹಿಂದುತ್ವದ ವೇಷ ಹಾಕಿದ್ದಾರೆ: ಮುನಿರತ್ನ

    ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಅನ್ನು ಹೆದರಿಸಲು ಹಿಂದುತ್ವದ ವೇಷ ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಹಿಂದೂ ಅಲ್ಲ ಎಂದು ನಾವು ಯಾರೂ ಕೂಡ ಹೇಳಿಲ್ಲ. ಅವರು ಹಿಂದೂನೆ. ಹಿಂದು ಆಗಿಯೇ ಸಾಯಲಿ ಯಾರು ಬೇಡ ಅಂದರು. ಡಿಕೆಶಿ ಅವರು ಸಿದ್ದರಾಮಯ್ಯಗೆ ಬ್ಲಾಕ್‌ಮೇಲ್ ಮಾಡೋದಕ್ಕೆ ಹಿಂದುತ್ವದ ವೇಷ ಹಾಕಿದ್ದಾರೆ ಎಂದು ಕಿಡಿಕಾರಿದರು.

    ಇನ್ನು ಸಿದ್ದರಾಮಯ್ಯರನ್ನು ಮತ್ತು ಕಾಂಗ್ರೆಸ್‌ ಅನ್ನು ಬ್ಲ್ಯಾಕ್‌ಮೇಲ್‌ ಮಾಡಲು ಇವೆಲ್ಲಾ ತಂತ್ರ ಅಷ್ಟೇ. ಸದ್ಗುರು ಅವರು ಇವರನ್ನು ಆಹ್ವಾನ ಮಾಡೋಕೆ ಬಂದಿರೋದಲ್ಲ. ಇವರೇ ಪ್ಲಾನ್‌ ಮಾಡಿ ಅವರನ್ನು ಕರೆಸಿಕೊಂಡು ಆಹ್ವಾನ ಬಂದಿದೆ ಎಂದು ಪತ್ರಿಕೆ ಹಿಡಿದುಕೊಂಡು ಹೋಗಿದ್ದಾರೆ. ಡಿಕೆಶಿ ಬಿಜೆಪಿಗೆ ಬರುವ ಪ್ರಶ್ನೆಯೇ ಇಲ್ಲ. ಇವರು ಸಿಎಂ ಅನ್ನು ಹೆದರಿಸಲು ಬಿಜೆಪಿಯ ಕಥೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

    ಡಿಕೆಶಿ ಬಿಜೆಪಿಗೆ ಬಂದರೆ ಕುಕ್ಕರ್‌ನಲ್ಲಿ ಬಾಂಬ್‌ ಇಟ್ಟ ಬ್ರದರ್ಸ್‌ ಅಂಡ್‌ ಸಿಸ್ಟರ್‌ಗೆ ಕೋಪ ಬರುವುದಿಲ್ವಾ? ಯೇಸು ಬೆಟ್ಟದವರು ಕೋಪ ಮಾಡಿಕೊಳ್ಳುತ್ತಾರೆ. ಇವರು ಹೀಗೆ ಮಾಡಿದರೆ ಏಕನಾಥ್‌ ಶಿಂಧೆ ಆಗುವುದಿಲ್ಲ. ಏಕ ವ್ಯಕ್ತಿ ಆಗುತ್ತಾರೆ. ಬೆಂಗಳೂರನ್ನು ಡಿಕೆಶಿ ಹಾಳು ಮಾಡಿ ಇಟ್ಟಿದ್ದಾರೆ. ಬೆಂಗಳೂರು ಬಗ್ಗೆ ಡಿಕೆಶಿಗೆ ಏನೂ ಗೊತ್ತೇ ಇಲ್ಲ. ಬೆಂಗಳೂರು ಹೀಗೆ ಹೋದರೆ ಐಟಿ-ಬಿಟಿ, ಸಿಲಿಕಾನ್‌ ಸಿಟಿ ಎನ್ನುವ ಹೆಸರು ಹೋಗುತ್ತದೆ ಎಂದು ಗುಡುಗಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search