ಚಿತ್ರದುರ್ಗ: ಡಿಸಿಎಂ ಡಿಕೆಶಿ ಮೊನ್ನೆ ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದ ಬಳಿಕ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಈ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಬ್ಯಾಟ್ ಬೀಸಿದ್ದಾರೆ.
ಡಿಕೆಶಿ ಸಾಪ್ಟ್ ಹಿಂದುತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಇದೆಲ್ಲಾ ವಿಚಾರವನ್ನು ಡಿಕೆಶಿ ಅವರ ಬಳಿಯೇ ಹೋಗಿ ಕೇಳಬೇಕು. ಅದು ಅವರಿಗೆ ಬಿಟ್ಟ ವಿಚಾರ. ಬೇರೆಯವರು ಅದರ ಬಗ್ಗೆ ಹೇಳೋದಕ್ಕೆ ಆಗೋದಿಲ್ಲ. ಅಭಿವೃದ್ಧಿ ಬಗ್ಗೆ ಕೇಳಿ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಹಿಂದುತ್ವದ ಜಪ ಯಾಕೆ ಮಾಡಬಾರದು? ದೇವಸ್ಥಾನ, ಹಿಂದೂ ಸಮಾವೇಶಗಳಲ್ಲಿ ಪಾಲ್ಗೊಳ್ಳುವುದು ಅದು ಅವರ ಭಕ್ತಿ ಅವರಿಗೆ ಬಿಟ್ಟ ವಿಚಾರ, ಅವರ ವ್ಯಕ್ತಿ ಸ್ವಾತಂತ್ರ್ಯ. ಅದೆಲ್ಲಾ ಅವರ ಇಷ್ಟ, ತಪ್ಪು ಎಂದು ಹೇಳೋದಕ್ಕೆ ಆಗಲ್ಲ ಎಂದರು.
ಇನ್ನು ರಾಜ್ಯದಲ್ಲಿ ಡಿಕೆಶಿ ಏಕನಾಥ್ ಶಿಂಧೆ ಆಗುತ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


