ಚಿತ್ರದುರ್ಗ: ಸಹೋದರನಿಗೆ ಏಡ್ಸ್ ಇರುವುದನ್ನು ತಿಳಿದು ಮರ್ಯಾದೆಗೆ ಹೆದರಿದ ಅಕ್ಕನೇ ಕೊಲೆಗೈದಿರುವ ಅಮಾನುಷ ಘಟನೆ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ.
ಹೊಳಲ್ಕೆರೆ ತಾಲೂಕಿನ ದಮ್ಮಿ ಗ್ರಾಮದ 23 ವರ್ಷದ ಮಲ್ಲಿಕಾರ್ಜುನ ಮೃತ ದುರ್ದೈವಿ. ಕೆಲ ದಿನಗಳ ಹಿಂದೆ ಐಮಂಗಲದ ಬಳಿ ನಡೆದಿದ್ದ ಅಪಘಾತದಲ್ಲಿ ಮಲ್ಲಿಕಾರ್ಜುನ್ ಕಾಲಿಗೆ ಪೆಟ್ಟಾಗಿತ್ತು. ಈ ವೇಳೆ ಆಸ್ಪತ್ರೆಗೆ ದಾಖಲಾಗಿದ್ದ ಮಲ್ಲಿಕಾರ್ಜುನ್‌ಗೆ ಶಸ್ತ್ರಚಿಕಿತ್ಸೆ ನಡೆದಿತ್ತು.
ಈ ಪ್ರಕ್ರಿಯೆಯಲ್ಲಿ ನಡೆದ ರಕ್ತ ಪರೀಕ್ಷೆಯಲ್ಲಿ ಎಚ್‌ಐವಿ ಪಾಸಿಟಿವ್ ಇರುವುದನ್ನು ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರಿಗೆ ತಿಳಿಸಿದ್ದರು. ಬಳಿಕ ಆತನಿಗೆ ವಿವಿಧೆಡೆ ಚಿಕಿತ್ಸೆ ಕೊಡಿಸಿ ಮಣಿಪಾಲಕ್ಕೆ ಕರೆದೊಯ್ಯಲಾಗುತ್ತಿತ್ತು.
ಈ ವೇಳೆ ಮಲ್ಲಿಕಾರ್ಜುನ್ ಹಾಗೂ ಸಹೋದರಿ ನಿಶಾ ಜತೆ ಮಾತಿನ ಚಕಮಕಿ ನಡೆದಿದೆ. ಮೊದಲೇ ತಮ್ಮನಿಗೆ ಎಚ್‌ಐವಿ ಇರುವುದರಿಂದ ಕೋಪಗೊಂಡಿದ್ದ ನಿಶಾ ರೋಗ ಇತರರಿಗೂ ಹರಡಬಹುದು ಹಾಗೂ ಜನರಿಗೆ ತಿಳಿದರೆ ಮರ್ಯಾದೆ ಹೋಗಬಹುದು ಎಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ.
ಅಲ್ಲದೇ ತಮ್ಮನನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದು ದಮ್ಮಿ ಗ್ರಾಮಕ್ಕೆ ಆತನ ಮೃತದೇಹವನ್ನು ತಂದಿದ್ದಾಳೆ. ಆದರೆ ಕುತ್ತಿಗೆ ಮೇಲಿನ ಗಾಯ ಕಂಡು ಅನುಮಾನಗೊಂಡ ಗ್ರಾಮಸ್ಥರು ಹೊಳಲ್ಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಅಕ್ಕನ ಮುಖವಾಡ ಬಯಲಾಗಿದೆ.
ಐಟಿ ದೈತ್ಯ TCS ನಿಂದ 12 ಸಾವಿರ ಉದ್ಯೋಗಗಳ ಕಡಿತ: ಕಾರಣವೇನು?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


