ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ‘ಮೊಂಥಾ’ ಚಂಡಮಾರುತ ಮಂಗಳವಾರ (ಅಕ್ಟೋಬರ್ 28, 2025) ಆಂಧ್ರಪ್ರದೇಶ ಕರಾವಳಿಗೆ ತೀವ್ರ ಚಂಡಮಾರುತವಾಗಿ ಅಪ್ಪಳಿಸುವ ಸಾಧ್ಯತೆ ಇದೆ. ಕಳೆದ ಆರು ಗಂಟೆಗಳಲ್ಲಿ ಈ ಚಂಡಮಾರುತವು ಗಂಟೆಗೆ 17 ಕಿ.ಮೀ ವೇಗದಲ್ಲಿ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುತ್ತಿದೆ.
ಚಂಡಮಾರುತದ ತೀವ್ರ ಪ್ರಭಾವಕ್ಕೊಳಗಾಗುವ ಕರಾವಳಿ ಪ್ರದೇಶಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು, ದಕ್ಷಿಣ ಮಧ್ಯ ರೈಲ್ವೆ (South Central Railway – SCR) ಸೇರಿದಂತೆ ಭಾರತೀಯ ರೈಲ್ವೆಯು ಪ್ರಮುಖ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ವರದಿಗಳ ಪ್ರಕಾರ, ಚಂಡಮಾರುತದ ಅಪ್ಪಳಿಸುವಿಕೆಗೆ ಮುನ್ನವೇ ಒಟ್ಟು 95ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ವಿವಿಧ ರೈಲ್ವೆ ವಲಯಗಳು ರದ್ದುಗೊಳಿಸಿವೆ. ಅದರಲ್ಲೂ ದಕ್ಷಿಣ ಮಧ್ಯ ರೈಲ್ವೆಯು ಮಾತ್ರವೇ 67 ರೈಲುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ರೈಲುಗಳು ಹೆಚ್ಚಾಗಿ ಚಂಡಮಾರುತದ ತೀವ್ರ ಪರಿಣಾಮ ಎದುರಿಸಲಿರುವ ನಿಲ್ದಾಣಗಳಿಂದ ಹೊರಡಬೇಕಿದ್ದವು. ಪ್ರಯಾಣಿಕರಿಗೆ ಸಲಹೆ ಪ್ರಯಾಣಕ್ಕೆ ಮೊದಲು ತಮ್ಮ ರೈಲಿನ ಸ್ಥಿತಿ ಮತ್ತು ವೇಳಾಪಟ್ಟಿಯನ್ನು ಅಧಿಕೃತ ರೈಲ್ವೆ ವೆಬ್‌ಸೈಟ್ ಅಥವಾ ಆಪ್ ಮೂಲಕ ಪರಿಶೀಲಿಸಿಕೊಳ್ಳುವುದು ಅತ್ಯಂತ ಅಗತ್ಯ.
ರದ್ದುಗೊಂಡ ರೈಲುಗಳ ಪಟ್ಟಿ (Cancelled Trains List):
ಚಂಡಮಾರುತ ‘ಮೊಂಥಾ’ದ ಪರಿಣಾಮವಾಗಿ ದಕ್ಷಿಣ ಮಧ್ಯ ರೈಲ್ವೆ (South Central Railway) ಮತ್ತು ಸಂಬಂಧಿತ ವಲಯಗಳು ಕೆಳಗಿನ ಪ್ರಮುಖ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಿವೆ:
ರೈಲು ಸಂಖ್ಯೆ 22501 – SMVT ಬೆಂಗಳೂರು ನ್ಯೂ ತಿನ್ಸುಕಿಯಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12836 – SMVT ಬೆಂಗಳೂರು ಹಟಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12503 – SMVT ಬೆಂಗಳೂರು ಅಗರ್ತಲಾ ಹಮ್ ಸಫರ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12246 – SMVT ಬೆಂಗಳೂರು ಹೌರಾ ಜಂಕ್ಷನ್ ದುರಂತೋ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12864 – SMVT ಬೆಂಗಳೂರು ಹೌರಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 13433 – SMVT ಬೆಂಗಳೂರು ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 18048 – ವಾಸ್ಕೊ ಡ ಗಾಮ ಶಾಲಿಮಾರ್ ಅಮರಾವತಿ ಎಕ್ಸ್‌ಪ್ರೆಸ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


