ಗ್ರೇಟರ್ ಬೆಂಗಳೂರು ಘೋಷಿಸಿದ ಬಳಿಕ ಡಿಕೆ ಶಿವಕುಮಾರ್ ನಗರದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಅವುಗಳ ಸಿದ್ಧತೆಗಳಿಗಾಗಿ ಸಾಲು ಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರ ಈ ಯೋಜನೆಗಳ ಪೈಕಿ ಒಂದಾದ ಸುರಂಗ ಮಾರ್ಗ ಸದ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹಾಗೂ ವಿವಾದಗಳನ್ನು ಹುಟ್ಟುಹಾಕಿದೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಕುರಿತು ಡಿಕೆ ಶಿವಕುಮಾರ್ ಅವರ ವಿರುದ್ಧ ಕಿಡಿಕಾರಿ ಸುರಂಗ ಮಾರ್ಗದ ಯೋಜನೆಯಿಂದ ಲಾಲ್‌ಬಾಗ್‌ನ ಐತಿಹಾಸಿಕ ಬಂಡೆಗಳಿಗೆ ತೊಂದರೆಯಾಗಲಿದೆ ಎಂದು ಟೀಕೆ ನಡೆಸಿದ್ದರು. ಹೀಗೆ ತಮ್ಮ ವಿರುದ್ಧ ಕಿಡಿಕಾರಿದ ತೇಜಸ್ವಿ ಸೂರ್ಯ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದರು.
ತೇಜಸ್ವಿ ಸೂರ್ಯ ಬೆಂಗಳೂರಿಗೆ ಹತ್ತು ರೂಪಾಯಿಯನ್ನೂ ನೀಡಿಲ್ಲ, ನಮ್ಮ ಸರ್ಕಾರ ಜನರಿಗೆ ಒಳ್ಳೆಯದಾಗುವ ಕೆಲಸಗಳನ್ನು ಮಾಡುತ್ತಿದೆ, ಇದಕ್ಕೆ ಕೊಂಕು ನುಡಿಯುವುದೇಕೆ, ತೇಜಸ್ವಿ ಸೂರ್ಯ ಓರ್ವ ಖಾಲಿ ಟ್ರಂಕ್, ಅವರ ಕಾಲದಲ್ಲಿ ಬೆಂಗಳೂರಿಗೆ ಒಳ್ಳೆಯ ಕೆಲಸಗಳನ್ನು ಮಾಡಲು ಆಗಿಲ್ಲ ಎಂದಿದ್ದರು.
ಹೀಗೆ ಬೆಂಗಳೂರು ಸುರಂಗ ಮಾರ್ಗದ ವಿಚಾರವಾಗಿ ಡಿಕೆ ಶಿವಕುಮಾರ್ ವಿರುದ್ಧ ಭಾರೀ ವಾಕ್ಸಮರ ನಡೆಸಿದ್ದ ತೇಜಸ್ವಿ ಸೂರ್ಯ ಇಂದು ( ಅಕ್ಟೋಬರ್ 28 ) ಬೆಳ್ಳಂಬೆಳಗ್ಗೆ ಡಿಕೆಶಿ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮದವರ ಜತೆ ಮಾತನಾಡದ ತೇಜಸ್ವಿ ಸೂರ್ಯ ಯಾವ ಕಾರಣಕ್ಕಾಗಿ ಈ ಭೇಟಿ ನೀಡಿದ್ದಾರೆ ಎಂಬ ಅಂಶ ತಿಳಿದುಬರಬೇಕಿದೆ.
ಆಧಾರ್ ಕಾರ್ಡ್ ಬಳಕೆದಾರರಿಗೆ ಭರ್ಜರಿ ಸುದ್ದಿ:ನವೆಂಬರ್ 1ರಿಂದ ದಾಖಲೆಗಳಿಲ್ಲದೇ ಮನೆಯಿಂದಲೇ ಅಪ್‌ಡೇಟ್‌ಗೆ ಅವಕಾಶ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


