ಕೋಮಾಲಿ ಚಿತ್ರವನ್ನು ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಮೊದಲ ಚಿತ್ರದಲ್ಲೇ ಗೆದ್ದ ಪ್ರದೀಪ್ ರಂಗನಾಥನ್ ತನ್ನ ಎರಡನೇ ಚಿತ್ರದಲ್ಲಿ ತಾನೇ ನಾಯಕನಾಗಿ ನಟನಾಗಿಯೂ ಸಹ ದಿಗ್ವಿಜಯ ಸಾಧಿಸಿದವರು.
ʼಲವ್‌ಟುಡೇʼ ಎಂಬ ಮಾಡರ್ನ್ ಡೇ ಲವ್ ಸ್ಟೋರಿ ಚಿತ್ರವನ್ನು ಮಾಡಿ ಗೆದ್ದ ಪ್ರದೀಪ್ ರಂಗನಾಥನ್ ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ನಿರ್ದೇಶಕನಾಗಿ ಯಶಸ್ಸು ಸಾಧಿಸಬೇಕೆಂಬ ಈತನ ನಟನೆಗೆ ಜನ ಫುಲ್ ಮಾರ್ಕ್ಸ್ ಕೊಟ್ಟ ಕಾರಣ ನಟನೆಯತ್ತಲೇ ಹೆಚ್ಚು ಗಮನ ಹರಿಸಿದ ಪ್ರದೀಪ್ ರಂಗನಾಥನ್ ಬಳಿಕ ಡ್ರ್ಯಾಗನ್ ಎಂಬ ಚಿತ್ರದಲ್ಲಿ ನಟಿಸಿ ಅಲ್ಲಿಯೂ ಸಹ ದೊಡ್ಡ ಬ್ಲಾಕ್‌ಬಸ್ಟರ್ ಕೊಟ್ಟು ಕಾಲಿವುಡ್‌ನಲ್ಲಿ ಮತ್ತೊಬ್ಬ ಸೂಪರ್‌ಸ್ಟಾರ್‌ನ ಜನನವಾಗಿದೆ ಎಂಬ ಸ್ಪಷ್ಟ ಸಂದೇಶ ಕೊಟ್ಟಿದ್ದರು.
ಹೀಗೆ ನಿರ್ದೇಶನದ ಕೊಮಾಲಿ ಚಿತ್ರವೂ ಸೇರಿದಂತೆ ಹ್ಯಾಟ್ರಿಕ್ ಬಾರಿಸಿದ್ದ ಪ್ರದೀಪ್ ಇತ್ತೀಚೆಗೆ ಬಿಡುಗಡೆಗೊಂಡ ಡ್ಯೂಡ್ ಚಿತ್ರದ ಮೂಲಕ ಮತ್ತೊಮ್ಮೆ ಗೆದ್ದು ನಟನಾಗಿಯೂ ಹ್ಯಾಟ್ರಿಕ್ ಬಾರಿಸಿದ್ದಾರೆ. ನಟನಾಗಿ ನಟಿಸಿದ ಎಲ್ಲಾ ಚಿತ್ರಗಳೂ ಸಹ ಬಾಕ್ಸ್‌ಆಫೀಸ್‌ನಲ್ಲಿ 100 ಕೋಟಿ ಗಳಿಕೆ ಮಾಡಿದ್ದು, ದೊಡ್ಡ ಗೆಲುವು ಕಂಡ ಪ್ರದೀಪ್ ರಂಗನಾಥನ್ ದಕ್ಷಿಣ ಭಾರತದಲ್ಲಿ ತನ್ನದೇ ಆದ ಗುರುತು ಸೃಷ್ಟಿಸಿದ್ದಾರೆ.
ಇಂತಹ ನಟ ಇದೀಗ ಕೇರಳಕ್ಕೆ ಬಂದಾಗ ಅಭಿಮಾನಿಯೋರ್ವನ ಜತೆ ನಡೆಸಿರುವ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿ ಅಣ್ಣ ಕೇರಳ ಆಹಾರದ ಬಗ್ಗೆ ಹೇಳಿ ಎಂದ ಕೂಡಲೇ ಪ್ರತಿಕ್ರಿಯಿಸಿದ ಪ್ರದೀಪ್ ರಂಗನಾಥನ್ ʼನಾನು ಪರೋಟಾ ಹಾಗೂ ಬೀಫ್ ತಿನ್ನುತ್ತೇನೆʼ ಎಂದಿದ್ದಾರೆ. ಅದಕ್ಕೆ ಅಭಿಮಾನಿ ನೀವು ತಿನ್ನಲೇಬೇಕಾದ ಫುಡ್ ಎನ್ನುತ್ತಿದ್ದಂತೆ ಮರು ಉತ್ತರಿಸಿದ ಪ್ರದೀಪ್ ʼಅದು ನನ್ನ ಫೇವರಿಟ್ʼ ಎಂದು ಹೇಳಿದ್ದಾರೆ.
ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾಮಾನ್ಯವಾಗಿ ವಿರೋಧಗಳೂ ಸಹ ವ್ಯಕ್ತವಾಗಿವೆ. ಕೆಲ ನೆಟ್ಟಿಗರು ಅವರ ಇಷ್ಟದ ಪ್ರಕಾರ ಆಹಾರ ತಿನ್ನುವುದನ್ನು ಯಾರೂ ಸಹ ಪ್ರಶ್ನಿಸಲು ಸಾಧ್ಯವಿಲ್ಲ, ಅದು ಅವರವರಿಗೆ ಬಿಟ್ಟದ್ದು ಎಂದು ಟ್ವೀಟ್ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


