Friday, March 20, 2026
spot_img
More
    spot_img
    HomeLatest newsತೇಜಸ್ವಿ ಸೂರ್ಯನಿಗೆ ನೀನು ಹೇಳಿದಂಗೆಲ್ಲ ಕೇಳೋಕೆ ಆಗಲ್ಲ ಅಂತ ಹೇಳಿದ್ದೇನೆ; ಭೇಟಿ ಬಳಿಕ ಡಿಕೆಶಿ ಮತ್ತೆ...

    ತೇಜಸ್ವಿ ಸೂರ್ಯನಿಗೆ ನೀನು ಹೇಳಿದಂಗೆಲ್ಲ ಕೇಳೋಕೆ ಆಗಲ್ಲ ಅಂತ ಹೇಳಿದ್ದೇನೆ; ಭೇಟಿ ಬಳಿಕ ಡಿಕೆಶಿ ಮತ್ತೆ ಟಾಂಗ್

    ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್‌ ಹಾಗೂ ತೇಜಸ್ವಿ ಸೂರ್ಯ ನಡುವೆ ಮಾತಿನ ಸಮರ ನಡೆಯುತ್ತಲೇ ಇದೆ. ಹೀಗೆ ವಾಕ್ಸಮರ ನಡೆಸಿದ ಬಳಿಕ ತೇಜಸ್ವಿ ಸೂರ್ಯ ಒಂದಷ್ಟು ಸಲಹೆಗಳನ್ನು ಪವರ್‌ಪಾಯಿಂಟ್‌ ಮೂಲಕ ಸಿದ್ಧಪಡಿಸಿ ಡಿಕೆ ಶಿವಕುಮಾರ್‌ ಮುಂದಿಟ್ಟಿದ್ದಾರೆ.

    ಇಂದು ( ಅಕ್ಟೋಬರ್‌ 28 ) ಬೆಳ್ಳಂಬೆಳಗ್ಗೆ ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ತೇಜಸ್ವಿ ಸೂರ್ಯ ಬೆಂಗಳೂರು ಟ್ರಾಫಿಕ್‌ ಕಡಿಮೆ ಮಾಡಲು ಇರುವ ಮಾರ್ಗಗಳು ಹಾಗೂ ಸುರಂಗ ಮಾರ್ಗದ ಬದಲಾಗಿ ಏನೆಲ್ಲ ಮಾಡಬಹುದು ಎಂದು ಡಿಕೆ ಶಿವಕುಮಾರ್‌ಗೆ ತಿಳಿಸಿದ್ದಾರೆ.

    ಈ ಭೇಟಿ ಬಳಿಕ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ತೇಜಸ್ವಿ ಸೂರ್ಯ ಅವರು ಜಾಸ್ತಿ ಮೆಟ್ರೊ ಓಡಿಸಿ ಎಂದು ಹೇಳುತ್ತಿದ್ದಾರೆ, ಆ ಕೆಲಸವನ್ನು ನಾವು ಈಗಾಗಲೇ ಮಾಡುತ್ತಿದ್ದೇವೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರದಿಂದ 10ರಿಂದ 12% ದುಡ್ಡು ಬರುತ್ತಿದೆ, ದುಡ್ಡು ಕೊಡಿಸಿ ಎಂದು ಹೇಳಿದೆ, ಅದಕ್ಕೆ ಪಾಪ ಅವರೇನು ಮಾತನಾಡುತ್ತಿಲ್ಲ ಎಂದರು.

    ಅಲ್ಲದೇ ಬೆಂಗಳೂರಿನೊಳಗೆ ಬಸ್‌ಗಳನ್ನು ಖಾಸಗಿಯವರಿಗೂ ನೀಡಿ ಎಂದು ಹೇಳುತ್ತಿದ್ದಾರೆ. ಈಗಲೇ ಟ್ರಾಫಿಕ್‌ ಹೆಚ್ಚಿದೆ ಅದನ್ನು ಹೇಗೆ ಅಳವಡಿಸಿಕೊಳ್ಳಲು ಆಗುತ್ತೆ ಎಂದೆ. ಹಾಗೆಯೇ ನಾನು ಬರುತ್ತೇನೆ ನಿಮ್ಮ ನಾಲ್ಕು ಜನ ಎಂಪಿಗಳು ನಡೆಯಿರಿ ದೆಹಲಿಗೆ ಹೋಗೋಣ ಪ್ರಧಾನಮಂತ್ರಿಯವರ ಬಳಿ ದುಡ್ಡು ಕೊಡಿಸಿ ಎಂದು ಕೇಳಿದ್ದೇನೆ. ಲಾಲ್‌ಬಾಗ್‌ ನೀವು ತಿಳಿದುಕೊಂಡ ಹಾಗೆ 6 ಎಕರೆಯಲ್ಲಿ ಸುರಂಗ ಮಾಡುತ್ತಿಲ್ಲ ಒಂದು ಸಣ್ಣ ಮೂಲೆಯಲ್ಲಿ ಆರಂಭದ ಪಾಯಿಂಟ್‌ ಗುರುತಿಸಿದ್ದೇವೆ, ಬೇರೆ ಜಾಗ ಎಲ್ಲಾದರೂ ಇದ್ದರೆ ನೀವೇ ತೋರಿಸಿ ಎಂದಿದ್ದೇನೆ. ಅದಕ್ಕೆ ಅವರು ಇಲ್ಲ ಎಲ್ಲ ದೇಶದಲ್ಲೂ ಸುರಂಗ ಬೇಡ ಎಂದು ಹೇಳುತ್ತಿದ್ದಾರೆ ಎಂದರು. ನೀನು ಒಬ್ಬ ಹೇಳಿದಂಗೆ ಕೇಳೋಕೆ ಆಗಲ್ಲ ಎಂದು ತಿಳಿಸಿದೆ ಎಂದರು.

    ಇನ್ನು ರಿಂಗ್‌ ರಸ್ತೆಗೆ ಬಸ್‌ ಸಂಪರ್ಕ ಸೇರಿದಂತೆ ಹಲವಾರು ಸಲಹೆಗಳನ್ನು ಅವರು ಕೊಟ್ಟಿದ್ದು, ಅವುಗಳನ್ನು ಅಧಿಕಾರಿಗಳಿಗೆ ಕಳುಹಿಸಿ ಪರಿಶೀಲಿಸಲು ಹೇಳಿದ್ದೇನೆ ಎಂದರು.

    ತನ್ನನ್ನು ಖಾಲಿ ಟ್ರಂಕ್‌ ಎಂದಿದ್ದ ಡಿಕೆಶಿ ಮನೆಗೆ ತೇಜಸ್ವಿ ಸೂರ್ಯ ಭೇಟಿ ನೀಡಿದ್ದೇಕೆ? ಇಬ್ಬರ ನಡುವೆ ನಡೆದ ಮಾತುಕತೆ ಏನು?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading