Friday, March 20, 2026
spot_img
More
    spot_img
    HomeLatest newsನಂಬರ್‌ ಪ್ಲೇಟ್‌ ಮೇಲೆ ಸ್ಟಿಕ್ಕರ್‌, ಹೆಲ್ಮೆಟ್‌ ಇಲ್ಲದೇ ಬೈಕ್‌ ಚಲಾಯಿಸುತ್ತಿದ್ದ ಪೊಲೀಸರನ್ನು ಎಳೆದು ನಿಲ್ಲಿಸಿದ ಯುವಕ;...

    ನಂಬರ್‌ ಪ್ಲೇಟ್‌ ಮೇಲೆ ಸ್ಟಿಕ್ಕರ್‌, ಹೆಲ್ಮೆಟ್‌ ಇಲ್ಲದೇ ಬೈಕ್‌ ಚಲಾಯಿಸುತ್ತಿದ್ದ ಪೊಲೀಸರನ್ನು ಎಳೆದು ನಿಲ್ಲಿಸಿದ ಯುವಕ; ವಿಡಿಯೊ

    ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಪೊಲೀಸರಿಬ್ಬರು ಮೊಪೆಡ್ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿ ಸವಾರ ಹೆಲ್ಮೆಟ್‌ ಧರಿಸದೇ ಇದ್ದದ್ದಕ್ಕೆ ಹಾಗೂ ನಂಬರ್‌ ಪ್ಲೇಟ್‌ ಮೇಲೆ ಸ್ಟಿಕ್ಕರ್‌ನಿಂದ ನಂಬರ್‌ ಮುಚ್ಚಿಹಾಕಿದ್ದನ್ನು ಪ್ರಶ್ನಿಸಿ ಯುವಕನೋರ್ವ ಪೊಲೀಸರ ಬೈಕ್‌ ಅನ್ನು ಓಡಿ ಹೋಗಿ ಎಳೆದಾಡಿ ನಿಲ್ಲಿಸಿ ಪ್ರಶ್ನಿಸಿದ ಘಟನೆ ನಡೆದಿದೆ.

    ಥಾಣೆಯ ಅಂಬಿಕಾನಗರದಲ್ಲಿ ಯುವಕನಿಗೆ ಪೊಲೀಸರು ಹೆಲ್ಮೆಟ್‌ ಧರಿಸದೇ ಬೈಕ್‌ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಿ ಚಲನ್ ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಅಲ್ಲಿಂದ ತೆರಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಹಿಂಬದಿ ಸವಾರ ಹೆಲ್ಮೆಟ್‌ ಹಾಕಿಲ್ಲ ಎಂದು ಕೂಗುತ್ತಾ ಯುವಕ ಬೈಕ್‌ ಅನ್ನು ನಡು ರಸ್ತೆಯಲ್ಲಿಯೇ ಹಿಂದಿನಿಂದ ಹಿಡಿದು ನಿಲ್ಲಿಸಿದ್ದಾನೆ.

    ಅಲ್ಲದೇ ಬಳಿಕ ಬೈಕ್‌ನ ಮುಂಬದಿ ನಂಬರ್‌ ಪ್ಲೇಟ್‌ನಲ್ಲಿ ನಂಬರ್‌ ಅನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಯುವಕರು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆಂಬುದನ್ನು ಅರಿತ ಪೊಲೀಸರು ಬೈಕ್‌ ತಮ್ಮದಲ್ಲ, ವಶಕ್ಕೆ ಪಡೆದ ಬೈಕ್‌ ಅನ್ನು ಕೊಂಡೊಯ್ಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆದರೆ ಬೈಕ್‌ನಲ್ಲಿ ಪೊಲೀಸ್‌ ಎಂಬ ಸ್ಟಿಕ್ಕರ್‌ ಇರುವುದನ್ನು ತೋರಿಸಿ ಬೈಕ್‌ ನಿಮ್ಮದೇ ಎಂದು ವಾದಿಸಿದ ಯುವಕರು ಪೊಲೀಸರಿಗೆ ನೀವೇ ನಿಯಮ ಪಾಲಿಸದ ಮೇಲೆ ನಮ್ಮ ಮೇಲೆ ದಂಡ ವಿಧಿಸುವ ಹಕ್ಕು ನಿಮಗೆ ಎಲ್ಲಿಂದ ಬರಬೇಕು ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಇನ್ನು ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೊಲೀಸರ ಕಳ್ಳಾಟ ಬಯಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading