ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾದ ಹಿಂದೂ ಧರ್ಮದ ಪ್ರಕಾರ ಇದು ಭೂಮಿಯ ಮೇಲಿನ ಅತ್ಯಂತ ಪುಣ್ಯದ ಮಾಸ. ಜನವರಿ, ಫೆಬ್ರವರಿ ಎಂಬ ಕ್ಯಾಲೆಂಡಿರಿನ ಎರಡೂ ತಿಂಗಳನ್ನು ಆವರಿಸಿರುವ ಈ ಮಾಸದಲ್ಲಿ ಇವತ್ತು ಅತ್ಯಂತ ಪ್ರಮುಖ ದಿನ. ಈ ಭೂಮಿಯ 144 ವರ್ಷಗಳ ಸಂಧಿ ಕಾಲದಲ್ಲಿ, ವೃಷಭ ರಾಶಿಯಲ್ಲಿ ಗುರು ಗ್ರಹವು, ಮೇಷ ರಾಶಿಯಲ್ಲಿ ಸೂರ್ಯ ಚಂದ್ರರು ಮೇಳೈಸಿದಾಗ ಬರುವ ಗುಪ್ತ ನವರಾತ್ರಿಯ ಹಿಂದಿನ ದಿನ, ಅಪರೂಪದಕ್ಕೊಮ್ಮೆ ಬರುವ ಅಮವಾಸ್ಯೆ ಕೂಡ ಇದೇ ಮಾಸದಲ್ಲಿ ಬರುತ್ತದೆ. ಇಂತಹ ಹಿನ್ನೆಲೆಯನ್ನು ಸಾಕ್ಷೀಕರಿಸುತ್ತಿರುವುದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ. ಅಲ್ಲಿನ ಪವಿತ್ರ ಸಂಗಮ ನದಿಗಳಲ್ಲಿ ಪುಣ್ಯ ಸ್ನಾನ ಆರಂಭವಾಗಿದೆ. ನಿರೀಕ್ಷೆಗೂ ಮೀರಿ, ಕೆಲವೊಂದು ನ್ಯೂನತೆಗಳ ನಡುವೆಯೇ ಈಬಾರಿಯ ಕುಂಭಮೇಳ ಮನುಕುಲದ ಹೊಸ ಇತಿಹಾಸವನ್ನು ಬರೆಯುವುದು ಖಾತರಿಯಾಗಿದೆ.
ಗ್ರಹಗಳ ಚಲನ ವಲನದ ಮೇಲೆ ಪ್ರಭಾವ ಮನುಷ್ಯರ ಮನಸ್ಸಿನ ಮೇಲೆ ಪರಿಣಾಮ ಹೊಂದಿದೆ ಎಂದು ನಂಬುತ್ತದೆ ಹಿಂದೂ ಧರ್ಮ. ಜೊತೆಗೆ ಭೂಮಿಯ ಎಲ್ಲ ಜಲಚರಗಳ ಮೇಲೂ ಆ ಗ್ರಹಗತಿಗಳು ಪ್ರಭಾವ ಬೀರುತ್ತದೆ ಎಂದು ಆದಿಮಾನವರು ಕಂಡುಕೊಂಡಿರಬೇಕು. ನವಗ್ರಹ ಶಾಸ್ತ್ರದ ಮೂಲ ಯಾರಿಗೂ ತಿಳಿದಿಲ್ಲ. ಅದು ಶಿವ ತನ್ನ ಪತ್ನಿ ಗಿರಿಜೆಗೆ ಕಲಿಸಿದ ಶಾಸ್ತ್ರ ಎಂದು ತಮಿಳುನಾಡಿನಲ್ಲಿ ತಾಳೆ ಗರಿಯ ಉಲ್ಲೇಖಗಳಿವೆ ಎಂದು ಅಂದುಕೊಳ್ಳೊಣ. ವೈಜ್ಞಾನಿಕ ಸಮಾಜವು ಇದನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲದಿದ್ದರೂ, ಭಾರತೀಯರ ಜನ ಮನದಲ್ಲಿ ಇದು ಬದುಕಿದೆ. “ನಿತ್ಯ ಜೀವನದ ಘಟನೆಗಳು ಹೇಗೆ ನಡೆಯುತ್ತವೆ?” ಎಂದು ರಾತ್ರಿ ಹಗಲುಗಳಲ್ಲಿ ಏಕಾಂತ ಗಳನ್ನು ಸೃಷ್ಟಿಸಿಕೊಂಡ ಮಾನವರು ಆಕಾಶಕ್ಕೆ ಮುಖ ಮಾಡಿದಾಗ ಕಂಡಕೊಂಡ ಸತ್ಯವೇ ಶಾಸ್ತ್ರ, ಅದೇ ಸನಾತನ ಧರ್ಮ.
ಮಾನವರು ತಲೆ ಎತ್ತಿ ಕೈ ಮುಗಿಯುವ ದೇವತೆಗಳು ಹುಟ್ಟಿಕೊಂಡದ್ದೆ ಹಾಗೆ ನವಗ್ರಹಗಳನ್ನು ದೂರದಿಂದಲೇ, ಆ ಹೊತ್ತಿಗೆ ಗುರುತಿಸಿ, ಅಂಕಿತ ಹಾಕಿಕೊಂಡಾಗ. ಒಂಭತ್ತು ಗ್ರಹಗಳಿಗೂ ಒಬ್ಬ ಪ್ರಜಾಪತಿ ದೇವತೆ ಇರುತ್ತಾರೆ. ಅವರೇ ಗ್ರಹಗಳ ಗತಿ ಹಿಡಿಸುತ್ತಾರೆ. ಭೂಮಿಯ ಚಲನೆಯು ಅವರ ಮೇಲೆ ಮತ್ತು ಅವರ ಚಲನೆ ಭೂಮಿಯ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಭೂಮಿಯ ಎಲ್ಲಾ ಜೀವ ಜಂತು ಪಶು ಪ್ರಾಣಿ ಮನುಷ್ಯರ ಮೇಲೂ ಒಂಭತ್ತು ಗ್ರಹಗಳ ಪ್ರಭಾವ ದಿನನಿತ್ಯ ಇರುತ್ತದೆ. ಆದಿಮಾನವನಿಂದ ಅರಿತಕೊಂಡ ಋಷಿ ಮುನಿಗಳು ಇದನ್ನು ಜನರಿಗೆ ತಲುಪಿಸಲು ಸಪ್ತರ್ಷಿಗಳು ಏಕತ್ರವಾದರು. ಗುರುಕುಲಗಳಲ್ಲಿ ನವಗ್ರಹ ಪಂಡಿತರನ್ನು ತಯಾರಿಸಿ, ಅವರಿಗೆ ಪೂರ್ಣ ನವಗ್ರಹ ತಂತ್ರದ ಶಿಕ್ಷಣವನ್ನು ಕೊಟ್ಟು ಜನಮಾನಸದಲ್ಲಿ ಗಾಢನಂಬಿಕೆ ಸೃಷ್ಟಿಸಿದ್ದು ಇವರೇ ಎನ್ನುತ್ತಾರೆ ಶೃಂಗೇರಿ ಅದ್ವೈತಿಗಳು.
ಆದಿ ಶಂಕರಾಚಾರ್ಯರ ಕಾಲದಲ್ಲಿ ಪಂಚಾಂಗ ಶ್ರವಣ ಎನ್ನುವ ಆಚರಣೆ ಪ್ರಾರಂಭವಾಯಿತು ಎನ್ನುವುದು ಇವರ ಅಚಲ ವಿಶ್ವಾಸ.
ಜಾಗತಿಕ ಘಟನೆಗಳ ಹಿಂದಿನ ಕಾರಣ ಏನು ಎಂದು ಅಗೋಚರವನ್ನು ಶೋಧಿಸುವ ವಿಜ್ಞಾನದ ಮಧ್ಯೆ,ಕಣ್ಣಿಗೆ ಗೋಚರವಾಗುವ ನವ ಗ್ರಹಗಳ ಗೋಚಾರ ಫಲ ಜ್ಯೋತಿಷ್ಯ ಶಾಸ್ತ್ರವು ಇಂದಿಗೂ ಒಂದು ದೊಡ್ಡ ಆಧ್ಯಾತ್ಮಿಕ ಪ್ರಭಾವಳಿಯ ಆರ್ಥಿಕ ಕೇಂದ್ರವಾಗಿ ಉಳಿದುಕೊಂಡಿದೆ ಎಂಬುದು ಗಮನಾರ್ಹ.
ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವುದರಿಂದ ಈ ನವಗ್ರಹಗಳನ್ನು ಒಲಿಸಿಕೊಳ್ಳಬಹುದು, ನಿತ್ಯ ಬದುಕಿನಲ್ಲಿ ಅವುಗಳ ಜತೆ ನಿಮ್ಮ ಬದುಕಿನ ಗತಿಯನ್ನು ಬದಲಿಸಿಕೊಳ್ಳಬಹುದು. ಈ ಪುಣ್ಯ ಮಾಸದಲ್ಲಿ ಮನುಕುಲದ ಒಳಿತಿಗಾಗಿ ‘ಶಿವಕ್ರಿಯ’ ಹೆಸರಿನಲ್ಲಿ ನಂದನ್ ಗುರೂಜಿ ನಿಮ್ಮ ಮುಂದಿಡುತ್ತಿದ್ದಾರೆ.
ಮನಸ್ಸಿನಲ್ಲಿಯೇ ಓದಿಕೊಳ್ಳಿ, ಇದನ್ನು ಅಗತ್ಯವಿದ್ದಾಗಲೆಲ್ಲಾ ಬಳಸಿ:
ಓಂ
ಐಂ ಹ್ರೀಂ ಕ್ಲೀಂ
ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ|
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೆ ನಮಃ
ಇದು ಅತ್ಯಂತ ಸರಳ ಸನಾತನ ಧ್ಯಾನ ತಂತ್ರವಾಗಿದ್ದು ಯಾರು ಬೇಕಾದರೂ ವೈಜ್ಞಾನಿಕ ಹೈಪರ್ ಕಾಂಪಿಟೇಟಿವ್ ಜಗತ್ತಿನಲ್ಲಿ ಸಕ್ಸಸ್ ಪಡೆಯಬಹುದು ಎನ್ನುತ್ತಾರೆ ನಂದನ್ ಗುರೂಜಿ.
ಈ ಶಿವ ಕ್ರಿಯಾ ಧ್ಯಾನ ತಂತ್ರವನ್ನು ನಿಮ್ಮ ವಾಟ್ಸಪ್‌ಗೆ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಅನ್ನು ಒತ್ತಿ:
http://wa.me/+917259155622 ಅಥವಾ +917259155622 ಗೆ ವಾಟ್ಸಾಪ್ ಮಾಡಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


