ಬೆಂಗಳೂರು: ಬಿಜೆಪಿ ಮುಗಿಸಲು ವಿಜಯೇಂದ್ರ ಹೊರಟಿದ್ದಾರೆ. ಅವರು ಇದ್ದರೆ ಬಿಜೆಪಿ ಭವಿಷ್ಯ ಇಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಬದಲಾವಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನನ್ನ ಬಳಿ ಚರ್ಚೆ ಮಾಡದೇ ವಿಜಯೇಂದ್ರ ನನ್ನ ಜಿಲ್ಲೆಯ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದಾರೆ. ವಿಜಯೇಂದ್ರ ಅಹಂಕಾರ, ದರ್ಪದಿಂದ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ. ಅವರ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ವಿಜಯೇಂದ್ರ ಚಿಕ್ಕಬಳ್ಳಾಪುರದಲ್ಲಿ ನನ್ನ ರಾಜಕೀಯ ಸಮಾಧಿ ಮಾಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿ ಮರುಭೂಮಿಯಂತಿತ್ತು. ಅಲ್ಲಿ ತಳಹಂತದಿಂದ ಪಕ್ಷ ಕಟ್ಟಿದವನು ನಾನು. ವಿಜಯೇಂದ್ರ ಯಾರನ್ನೂ ವಿಶ್ವಾಸಕ್ಕೆ ಪಡೆಯದೇ ಜಿಲ್ಲೆಗಳಲ್ಲಿ ಅವರಿಗೆ ಜೀ ಹುಜೂರ್ ಅನ್ನೋರನ್ನೇ ನೇಮಿಸಿದ್ದಾರೆ. ಅವರ ಅಹಂಕಾರ, ದರ್ಪಕ್ಕೆ ನನ್ನ ಧಿಕ್ಕಾರ. ವಿಜಯೇಂದ್ರ ಬಿಜೆಪಿ ಮುಗಿಸುತ್ತಾರೆ. ತಾಕತ್ ಇದ್ರೆ ಕೋಲಾ, ಚಿಕ್ಕಬಳ್ಳಾಪುರದಲ್ಲಿ ವಿಜಯೇಂದ್ರ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು ತಂದೆಯ ಗುಣಾಗಳಾವುದು ವಿಜಯೇಂದ್ರಗೆ ಬಂದಿಲ್ಲ. ಅವರದ್ದು ಹಠ, ದ್ವೇಷದ ರಾಜಕಾರಣ. ನನ್ನ ತಾಳ್ಮೆ ಮುಗೀತು. ಇನ್ನೇನಿದ್ದರೂ ಯುದ್ಧವಷ್ಟೇ ಎಂದು ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


