ವಾತಾವರಣ ತಂಪಾಗಿರುವಾಗ ಬಿಸಿ ಬಿಸಿಯಾದ ಅನ್ನದ ಜೊತೆಗೆ ಸಖತ್ ಹಾಟ್ ಆಗಿರುವ ಮಸಾಲೆಯುಕ್ತ ರಸಂ ಸೇವಿಸಿದರೆ ಆ ಅನುಭವ ಸೂಪರ್ ಆಗಿರುತ್ತದೆ.ಮೆಣಸಿನ ಕಾಳು ರಸಂ ಅಥವಾ ಸಾರು ಎಂದು ಕರೆಯುವ ಪಾಕವಿಧಾನವು ದಕ್ಷಿಣ ಭಾರತದ ಪ್ರಸಿದ್ಧ ಪಾಕವಿಧಾನ.ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಹಾಗೂ ಕೆಲವು ಸೋಂಕುಗಳಿಂದ ದೂರ ಇರಲು ಮೆಣಸಿನಕಾಳು ರಸಂ ಅಥವಾ ಸಾರು ಅತ್ಯುತ್ತಮವಾದ ಆಯ್ಕೆಯಾಗುವುದು,ಈ ರೆಸಿಪಿ ಟೊಮೆಟೊ ಮತ್ತು ದಾಲ್ ಇಲ್ಲದೆ ಇರುವುದರಿಂದ, ಇದನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು.ಈ ಸೂಪ್ನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ರಸಂ ಕೇವಲ 5 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಈ ಪಾಕವಿಧಾನವನ್ನು ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು. ಚಳಿಗಾಲದಲ್ಲಿ ಬೆಚ್ಚಗಿನ ಅನುಭವ ಪಡೆಯಲು ಈ ಪಾಕವಿಧಾನವನ್ನು ಮಾಡಿ,
ಪೆಪ್ಪರ್ ರಸಂ ಬೇಕಾಗುವ ಸಾಮಗ್ರಿಗಳು..
ಕಾಳಮೆಣಸು – 1 ಟೀಸ್ಪೂನ್
ತುಪ್ಪ – ಅರ್ಧ ಟೀಸ್ಪೂನ್
ಉದ್ದಿನ ಬೇಳೆ- ಒಂದೂವರೆ ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಜೀರಿಗೆ – ಒಂದು ಟೀಸ್ಪೂನ್
ತುರಿದ ಕೊಬ್ಬರಿ – 2 ಟೀಸ್ಪೂನ್
ಹುಣಸೆಹಣ್ಣು – ನಿಂಬೆ ಗಾತ್ರದಷ್ಟು
ಅರಿಶಿನ – ಒಂದು ಟೀಸ್ಪೂನ್
ಕಲ್ಲು ಉಪ್ಪು – ರುಚಿಗೆ ತಕ್ಕಷ್ಟು
ತುರಿದ ಬೆಲ್ಲ – 1 ಟೀಸ್ಪೂನ್

ಕಾಳುಮೆಣಸಿನ ಸಾರು ಮಾಡುವ ವಿಧಾನ:
ಮೊದಲಿಗೆ ಕಾಳುಮೆಣಸು, ಜೀರಿಗೆಯಲ್ಲಿ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಇದಾದ ಬಳಿಕ ಇವೆರಡನ್ನು ಕುಟ್ಟಾನಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ.
ಅದೇ ಬಾಣಲೆಗೆ ಇನ್ನೂ ಸ್ವಲ್ಪ ತುಪ್ಪ, ಸಾಸಿವೆ, ಇಂಗು, ಕರಿಬೇವಿನ ಎಲೆ ಮತ್ತು ಕೆಂಪು ಮೆಣಸಿನ ಕಾಯಿಯನ್ನು ಹಾಕಿ ಹುರಿಯಿರಿ,ಕಾಳುಮೆಣಸು ಫ್ರೈ ಆಗುತ್ತಿರುವಾಗಲೇ ಉದ್ದಿನಬೇಳೆ, ಧನಿಯಾ ಪುಡಿ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕಾಗುತ್ತದೆ
ನಿಂಬೆ ಗಾತ್ರದ ಹುಣಸೆಹಣ್ಣನ್ನು ನೆನೆಸಿ, ಅದರಿಂದ ರಸವನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ. 600 ಮಿಲಿ ಲೀಟರ್ ನೀರನ್ನು ಸೇರಿಸಿ ಮತ್ತು ಅದನ್ನು ಪಕ್ಕಕ್ಕೆ ಇರಿಸಿಕೊಳ್ಳಿ.
ಹುರಿದ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.- ನುಣ್ಣನೆಯ ಮಾದರಿಯಲ್ಲಿ ರುಬ್ಬಿಕೊಳ್ಳಿ,
ಒಲೆಯ ಮೇಲೆ ಕಾಳುಮೆಣಸು ಹುರಿದ ಕಡಾಯಿಯನ್ನು ಇಡಿ ಮತ್ತು ಹುಣಸೆ ರಸವನ್ನು ಸುರಿದುಕೊಳ್ಳಬೇಕಾಗುತ್ತದೆ. ನಂತರ ಅದಕ್ಕೆ ಅರಿಶಿನ, ಲೀಟರ್ ನೀರು ಮತ್ತು ಉಪ್ಪನ್ನು ಸೇರಿಸಿ ಮತ್ತು ರಸಂ ಮಧ್ಯದಲ್ಲಿ ಗುಳ್ಳೆಗಳು ಬರುವಂತೆ ಹೆಚ್ಚಿನ ಉರಿಯಲ್ಲಿ ಕುದಿಸಿ.
ಅದು ಕುದಿಸಿದ ನಂತರ ಬೆಲ್ಲವನ್ನು ತುರಿದು ರುಬ್ಬಿದ ಕಾಳುಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಮತ್ತೆ 3 ರಿಂದ 4 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಕುದಿಸಿ. ನಂತರ ಸ್ಟೌ ಅನ್ನು ಕಡಿಮೆ ಉರಿಯಲ್ಲಿ ಇಡಿ ಮತ್ತು ಸ್ವಲ್ಪಹೊತ್ತು ಹಾಗೆ ಬಿಡಿ.
ಅದರ ನಂತರ ಮತ್ತೊಂದು ಬರ್ನರ್ ಮೇಲೆ ಸಣ್ಣ ಪಾತ್ರೆ ಇಡಿ. ಅದರೊಳಗೆ ತುಪ್ಪ ಸೇರಿಸಿ. ಅದು ಕರಗಿ ಸ್ವಲ್ಪ ಬಿಸಿಯಾದ ನಂತರ ಸಾಸಿವೆ ಹಾಕಿ ಫ್ರೈ ಮಾಡಿ. ನಂತರ ಕರಿಬೇವು ಹಾಗೂ ಇಂಗು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
ಒಗ್ಗರಣೆ ರೆಡಿಯಾದ ಬಳಿಕ ಅದನ್ನು ತೆಗೆದುಕೊಂಡು ಇನ್ನೊಂದು ಬರ್ನರ್‌ನಲ್ಲಿ ಕುದಿಯುತ್ತಿರುವ ರಸಂಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ನಂತರ ಒಂದು ನಿಮಿಷ ಕುದಿಸಿ. ಆಗ ಬಾಯಲ್ಲಿ ನೀರೂರಿಸುವ ಉಡುಪಿ ಸ್ಟೈಲ್ನ ಪೆಪ್ಪರ್ ರಸಂ ರೆಡಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


