ನವದೆಹಲಿ: ಪೊಲೀಸರು ವಾಟ್ಸಾಪ್, ಇ-ಮೇಲ್‍ಗಳ ಮೂಲಕ ಆರೋಪಿಗಳಿಗೆ ನೋಟಿಸ್ ಕಳುಹಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಾಲಯಗಳ ಕಲಾಪಗಳಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದರೂ ಸುಪ್ರೀಂಕೋರ್ಟ್, ಪೋಲಿಸರು ಮತ್ತು ಕಾನೂನು ಜಾರಿ ಸಂಸ್ಥೆಗಳು ಸಿಆರ್‍ಪಿಸಿಯ ಕಲಂ 41ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 35ರಡಿ ವಾಟ್ಸಾಪ್ ಅಥವಾ ಇತರ ವಿದ್ಯುನಾನ ವಿಧಾನಗಳ ಮೂಲಕ ಬಂಧನ-ಪೂರ್ವ ನೋಟಿಸ್‍ಗಳನ್ನು ಕಳುಹಿಸುವಂತಿಲ್ಲ ಎಂದು ಆದೇಶಿಸಿದೆ.
ಆರೋಪಿಗಳಿಗೆ ನೋಟಿಸ್ ನೀಡಲು ಪರ್ಯಾಯ ಮಾಧ್ಯಮವಾಗಿ ವಾಟ್ಸಾಪ್ ಅಥವಾ ಇತರ ಎಲೆಕ್ಟ್ರಾನಿಕ್ ಮೋಡ್‍ಗಳನ್ನು ಬಳಸದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಎಂ ಸುಂದರೇಶ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ಪೀಠವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಆದೇಶಗಳನ್ನು ಆಯಾ ಪೊಲೀಸ್ ಇಲಾಖೆಗಳಿಗೆ ನೀಡುವಂತೆ ಸೂಚಿಸಿದೆ.
ಸಿಆರ್‍ಪಿಸಿ ಅಥವಾ ಬಿಎನ್‍ಎಸ್‍ಎಸ್ ಅಡಿಯಲ್ಲಿ ನಿಗದಿತ ಸೇವಾ ವಿಧಾನದ ಮೂಲಕ ಮಾತ್ರ ಅಂತಹ ಸೂಚನೆಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಗಳನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ವಾಟ್ಸಾಪ್ ಅಥವಾ ಇತರ ವಿದ್ಯುನಾನ ವಿಧಾನಗಳ ಮೂಲಕ ನೋಟಿಸ್‍ಗಳನ್ನು ಹೊರಡಿಸುವುದನ್ನು ಸಿಆರ್‍ಪಿಸಿ,1973/ಬಿಎನ್‍ಎಸ್‍ಎಸ್, 2023ರಲ್ಲಿ ಗುರುತಿಸಲಾಗಿರುವ ಮತ್ತು ಸೂಚಿಸಲಾಗಿರುವ ವಿಧಾನಗಳಿಗೆ ಪರ್ಯಾಯವಾಗಿ ಅಥವಾ ಬದಲಿಯಾಗಿ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದೆ.
ಏಳು ವರ್ಷಗಳಿಗೂ ಕಡಿಮೆ ಜೈಲು ಶಿಕ್ಷೆಯನ್ನು ವಿಧಿಸಬಹುದಾದ ಅಪರಾಧಗಳಿಗಾಗಿ ಪೋಲಿಸರು ಸಿಆರ್‍ಪಿಸಿಯ ಕಲಂ 41ಎ ಅಡಿ ಕಡ್ಡಾಯ ನೋಟಿಸ್ ಕಾರ್ಯವಿಧಾನವನ್ನು ಅನುಸರಿಸದೆ ವ್ಯಕ್ತಿಗಳನ್ನು ಬಂಧಿಸುವುದನ್ನು ನಿಷೇಧಿಸಿರುವ ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಲೂಥ್ರಾ ಉಲ್ಲೇಖಿಸಿದರು.
ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಸಿಆರ್‍ಪಿಸಿ 1973ರ ಸೆಕ್ಷನ್ 41-ಎ ಅಡಿಯಲ್ಲಿ ನೋಟಿಸ್ ಅನ್ನು ವಾಟ್ಸಾಪ್ ಮೂಲಕ ಕಳುಹಿಸಲಾಗಿದೆ ಆದರೆ ಆರೋಪಿಗಳು ತನಿಖಾಧಿಕಾರಿಯ ಮುಂದೆ ಹಾಜರಾಗದ ಪ್ರಕರಣಗಳನ್ನು ಲುಥ್ರಾ ಉಲ್ಲೇಖ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


