ಬೆಂಗಳೂರು: ತಮಿಳಿನ ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಎಂದು ಹೇಳಿದ ಹೇಳಿಕೆಗೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಹೇಳಿಕೆಯು ಅವರ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಪ್ರಚಾರ ಸಮಾರಂಭದಲ್ಲಿ ಕಮಲ್ ಹಾಸನ್‌ರವರಿಂದ ಬಂದಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ ಕನ್ನಡಪರ ಸಂಘಟನೆಗಳು ಬೆಂಗಳೂರಿನಲ್ಲಿ ಥಗ್‌ಲೈಫ್ ಚಿತ್ರದ ಬ್ಯಾನರ್‌ಗಳನ್ನು ಹರಿದು ಪ್ರತಿಭಟನೆ ನಡೆಸಿದವು ಹಾಗೂ ಫಿಲ್ಮ್ ಚೇಂಬರ್‌ಗೆ ಮುತ್ತಿಗೆಯನ್ನು ಹಾಕಿದವು. ಕಮಲ್ ಹಾಸನ್ ಕನ್ನಡಿಗರ ಕ್ಷಮೆಯಾಚಿಸುವವರೆಗೆ ರಾಜ್ಯದಲ್ಲಿ ಅವರ ಚತ್ರಗಳಿಗೆ ಬಹಿಷ್ಕಾರ ಹಾಕಬೇಕು ಎಂದು ಪ್ರತಿಭಟನೆ ನಡೆಸಿದವು.
ಈ ವಿವಾದದ ಮಧ್ಯೆ ನಟಿ ರಮ್ಯಾ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ “ಕಮಲ್ ಹಾಸನ್ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳಾಗಿದ್ದು, ಸಾಮಾನ್ಯ ಭಾಷಾ ಮೂಲವನ್ನು ಹಂಚಿಕೊಂಡಿವೆ ಎಂದು ಹೇಳಲು ಬಯಸಿದ್ದಾರೆ ಎಂದು ಭಾವಿಸುತ್ತೇನೆ. ಆದರೆ ಬಹಿಷ್ಕಾರದ ಬೆದರಿಕೆ ಸ್ವಲ್ಪ ಜಾಸ್ತಿಯಾಗಲಿಲ್ಲವೇ? ಒಂದು ತಪ್ಪು ಹೇಳಿಕೆಯನ್ನು ಕ್ಷಮಿಸಬಹುದು” ಎಂದು ಬರೆದಿದ್ದಾರೆ. ಅವರು ದ್ರಾವಿಡ ಭಾಷಾ ಕುಟುಂಬದ ಮರದ ರೇಖಾಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ, ಇದು ಕನ್ನಡ ಮತ್ತು ತಮಿಳು ಎರಡೂ ಸ್ವತಂತ್ರವಾಗಿ ವಿಕಸನಗೊಂಡಿವೆ ಎಂದು ಸೂಚಿಸುತ್ತದೆ.
ಕಮಲ್ ಹಾಸನ್ ಅವರು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸುತ್ತಾ “ಇದು ಐತಿಹಾಸಿಕ ಸತ್ಯವನ್ನು ಹೇಳುವ ಪ್ರಯತ್ನವಲ್ಲ, ಬದಲಿಗೆ ಪ್ರೀತಿ ಮತ್ತು ಒಗ್ಗಟ್ಟಿನ ಸಂದೇಶವಾಗಿತ್ತು. ಭಾಷಾ ವಿಷಯಗಳನ್ನು ತಜ್ಞರು ಚರ್ಚಿಸಲಿ” ಎಂದು ಹೇಳಿದ್ದಾರೆ.
ಸದ್ಯ ರಮ್ಯಾ ಅವರ ಈ ಟ್ವೀಟ್‌ಗೆ ಕನ್ನಡಿಗರು ಕಿಡಿಕಾರಿದ್ದು, ಕನ್ನಡದ ವಿಷಯ ಬಂದಾಗ ಇಷ್ಟು ಉದಾರತೆ ಬೇಡ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


