ಬೆಂಗಳೂರು: ನಟಿ ರಮ್ಯಾ ನಟ ದರ್ಶನ್ ಅಭಿಮಾನಿಗಳ ಅವಾಚ್ಯ ವರ್ತನೆಯ ವಿರುದ್ಧ ಸಿಡಿದೆದ್ದಿದ್ದಾರೆ. ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದ ಹೈಕೋರ್ಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ರಮ್ಯಾ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದಿದ್ದರು.
ಹೀಗೆ ಆರೋಪಿಗಳ ಜಾಮೀನು ರದ್ದಾಗಲಿ ಎಂದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಮೊಬೈಲ್ ತೆಗೆದುಕೊಂಡು ರಮ್ಯಾ ಇನ್ಸ್ಟಾಗ್ರಾಮ್ ಖಾತೆಗೆ ಸಾಲು ಸಾಲು ಸಂದೇಶಗಳನ್ನು ಕಳುಹಿಸಿದ್ದರು. ಈ ಅಶ್ಲೀಲ ಸಂದೇಶಗಳ ವಿರುದ್ಧ ನಟಿ ರಮ್ಯಾ ಪೊಲೀಸ್ ಕಮಿಷನರ್‌ಗೆ ದೂರನ್ನು ದಾಖಲಿಸಿದ್ದಾರೆ.
ಈ ದೂರಿನ ಇದೀಗ ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿದ್ದು, ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಘಟನೆಗಳು ಮುಂದೆ ಆಗಬಾರದು, ಇವತ್ತು ರಮ್ಯಾ ಅವರಿಗೆ ಆಗಿದೆ, ನಾಳೆ ಬೇರೆಯವರಿಗೆ ಆಗಲಿದೆ, ಹೀಗಾಗಿ ಅವಾಚ್ಯ ಶಬ್ದ ಕಳುಹಿಸುವ ಕಿಡಿಗೇಡಿಗಳಿಗೆ ಪೂರ್ಣವಿರಾಮ ಹಾಕಬೇಕು, ಕಮಿಷನರ್ ಇದರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಈ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವುದು ಪಕ್ಕಾ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಧರ್ಮಸ್ಥಳ: ಶವ ಹೂತಿಟ್ಟ ಜಾಗ ತೋರಿಸಿದ ಅನಾಮಿಕ ವ್ಯಕ್ತಿ; 15 ಕಡೆ ಮಾರ್ಕ್, ಸಿಕ್ಕಿದ್ವಾ 15 ಸಮಾಧಿ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


