ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸದ್ಯ ಎಸ್‌ಐಟಿ ತನಿಖೆ ಭರದಿಂದ ಸಾಗುತ್ತಿದೆ.
ಈ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಪ್ರತ್ಯಕ್ಷವಾಗಿ ಧರ್ಮಸ್ಥಳದಲ್ಲಿ ನಡೆದ ಕೊಲೆಗಳ ಮೃತದೇಹಗಳನ್ನು ತಾನೇ ಹೂತುಹಾಕಿದ್ದಾಗಿ ಹೇಳಿಕೊಂಡು ದೂರು ದಾಖಲಿಸಿದ್ದ ಹಾಗೂ ಹೆಣ ಹೂತಿಟ್ಟ ಜಾಗ ತೋರಿಸುವುದಾಗಿ ಸಹ ಹೇಳಿಕೊಂಡಿದ್ದ.
ಅದರಂತೆ ಎಸ್‌ಐಟಿ ಅಧಿಕಾರಿಗಳು ಆತನ ವಿಚಾರಣೆ ನಡೆಸಿ ನಿನ್ನೆ ( ಜುಲೈ 28 ) ಆತನನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿ ಶವ ಹೂತಿದ್ದ ಸ್ಥಳಗಳನ್ನು ಅನಾಮಿಕನ ಸಹಾಯದಿಂದ ಮಾರ್ಕ್ ಮಾಡಿದ್ದಾರೆ. ಒಟ್ಟು 13 ಸ್ಥಳಗಳನ್ನು ಅನಾಮಿಕ ಗುರುತಿಸಿದ್ದು, ಜಾಗಕ್ಕೆ ರಾತ್ರಿಯಿಡೀ ಟೈಟ್ ಸೆಕ್ಯೂರಿಟಿ ನೀಡಲಾಗಿದೆ.
ಇನ್ನು ಇಂದೇ ಸಮಾಧಿಗಳನ್ನು ಅಗೆಯುವ ಸಾಧ್ಯತೆಗಳಿದ್ದು, ಸ್ಥಳೀಯ ನ್ಯಾಯಲಯದ ಅನುಮತಿ ಬಳಿಕ ಅಗೆಯುವ ಕಾರ್ಯ ಆರಂಭವಾಗಲಿದೆ. ಇನ್ನು ನಿನ್ನೆ ಸ್ಥಳ ಮಹಜರು ಆರಂಭಿಸಿದ ಎಸ್‌ಐಟಿ ಅಧಿಕಾರಿಗಳು ಮೊದಲಿಗೆ ನೇತ್ರಾವತಿ ಸ್ನಾನಘಟ್ಟದ ಬಳಿ ಮಹಜರು ನಡೆಸಿದರು. ಇದೇ ಜಾಗದಲ್ಲಿ ಮೊದಲು ಅಗೆಯುವ ಕೆಲಸ ನಡೆಯಲಿದೆ ಎನ್ನಲಾಗಿದೆ.
ಹೌದು, ಎಸ್‌ಐಟಿ ಅಧಿಕಾರಿಗಳು ಸಮಾಧಿ ಅಗೆಯುವುದಕ್ಕಾಗಿ 12 ಕಾರ್ಮಿಕರನ್ನು ನೇಮಿಸಿದ್ದು, ಮೊದಲಿಗೆ ನೇತ್ರಾವತಿ ಸ್ನಾನಘಟ್ಟದ ಬಳಿ ಗುರುತಿಸಿದ ಜಾಗವನ್ನು ಅಗೆಯಲಿದ್ದಾರೆ.
ಧರ್ಮಸ್ಥಳ: ಶವ ಹೂತಿಟ್ಟ ಜಾಗ ತೋರಿಸಿದ ಅನಾಮಿಕ ವ್ಯಕ್ತಿ; 15 ಕಡೆ ಮಾರ್ಕ್, ಸಿಕ್ಕಿದ್ವಾ 15 ಸಮಾಧಿ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


