ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ, ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ದೂರು ದಾಖಲಿಸಿದ ಅನಾಮಿಕ ವ್ಯಕ್ತಿ ತಾನು ಈ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಗ ಹೆಣಗಳನ್ನು ಒತ್ತಾಯಪೂರ್ವಕವಾಗಿ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ.
ಈ ವ್ಯಕ್ತಿಯ ದೂರಿನ ಮೇರೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು, ತಂಡ ಈಗಾಗಲೇ ತನಿಖೆ ಆರಂಭಿಸಿದೆ. ಇನ್ನು ಮೊದಲ ಎರಡು ದಿನಗಳ ಕಾಲ ಸಾಕ್ಷಿ ದೂರುದಾರನನ್ನು ವಿಚಾರಣೆ ನಡೆಸಿದ ಎಸ್ಐಟಿ ತಂಡ ನಿನ್ನೆ ( ಜುಲೈ 28 ) ಆತನನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು.
ಇನ್ನು ನೇತ್ರಾವತಿ ಸ್ನಾನಘಟ್ಟ ಸೇರಿದಂತೆ ಒಟ್ಟು 13 ಕಡೆಗಳಲ್ಲಿ ಹೆಣ ಹೂತಿದ್ದಾಗಿ ಸಾಕ್ಷಿ ದೂರುದಾರ ಸ್ಥಳ ಗುರುತಿಸಿದ್ದು, ಎಸ್ಐಟಿ ತಂಡ ಮಾರ್ಕ್ ಮಾಡಿ ಅದರ ಸುತ್ತ ಯಾರೂ ಪ್ರವೇಶಿಸದ ಹಾಗೆ ಟೇಪ್ ಹಾಕಿದೆ.
ಹೀಗೆ ಒಟ್ಟು 13 ಕಡೆಗಳಲ್ಲಿ ಮಾರ್ಕಿಂಗ್ ಆಗಿದ್ದು, ನಲೆ ಅಗೆಯುವ ಕೆಲಸ ಯಾವಾಗಿನಿಂದ ಆಂಭವಾಗಲಿದೆ ಎನ್ನುವ ಕುತೂಹಲ ಹೆಚ್ಚಿದೆ. ಇನ್ನು ಇಂದೇ ಸಮಾಧಿ ಅಗೆಯುವ ಸಾಧ್ಯತೆ ಹೆಚ್ಚಿದ್ದು, ಎಸ್ಐಟಿ ತಂಡ ಮೊದಲಿಗೆ ಸ್ಥಳೀಯ ನ್ಯಾಯಾಲಯದಲ್ಲಿ ಅನುಮತಿ ಪಡೆಯಬೇಕಿದೆ. ಇಂದೇ ಸ್ಥಳೀಯ ನ್ಯಾಯಾಲಯ ನೆಲ ಅಗೆಯಲು ಅನುಮತಿ ಕೊಟ್ಟರೆ ಪ್ರಕರಣ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಳ್ಳಲಿದೆ.
ಧರ್ಮಸ್ಥಳ: ಶವ ಹೂತಿಟ್ಟ ಜಾಗ ತೋರಿಸಿದ ಅನಾಮಿಕ ವ್ಯಕ್ತಿ; 15 ಕಡೆ ಮಾರ್ಕ್, ಸಿಕ್ಕಿದ್ವಾ 15 ಸಮಾಧಿ?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


