ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಭರದಿಂದ ಸಾಗಿದ್ದು, ಸಾಕ್ಷಿ ದೂರುದಾರ ಗುರುತಿಸಿದ್ದ ಸ್ಥಳಗಳಲ್ಲಿ ಸಮಾಧಿ ಅಗೆಯುವ ಕಾರ್ಯ ಆರಂಭವಾಗಿದೆ.
ನಿನ್ನೆ ( ಜುಲೈ 28 ) ಸಾಕ್ಷಿ ದೂರುದಾರನನ್ನು ನೇತ್ರಾವತಿ ಸ್ನಾನಘಟಕ್ಕೆ ಕರೆತಂದಿದ್ದ ಎಸ್‌ಐಟಿ ಅಧಿಕಾರಿಗಳು 13 ಸ್ಥಳಗಳನ್ನು ಮಾರ್ಕ್ ಮಾಡಿ, ಪ್ರವೇಶ ನಿಷಿದ್ಧ ಟೇಪ್ ಎಳೆದು ಭಯೋತ್ಪಾದಕ ನಿಗ್ರಹ ದಳದ ಭದ್ರತೆ ಇರಿಸಲಾಗಿತ್ತು.
ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ 13 ಸ್ಥಳಗಳನ್ನು ಗುರುತಿಸಿದ್ದು, ಇಂದು ಆ ಸ್ಥಳಗಳಿಗೆ ಗುಂಡಿ ಅಗೆಯುವ ಕಾರ್ಮಿಕರನ್ನು ಕರೆತರಲಾಗಿದೆ. ಈ ಮೂಲಕ ಸ್ನಾನಘಟ್ಟದ ಸಮೀಪ ಸಮಾಧಿ ಅಗೆಯುವ ಕಾರ್ಯ ಆರಂಭವಾಗಿದೆ.
ಇನ್ನು ಸಮಾಧಿ ಅಗೆಯುವ ವೇಳೆ ಮಳೆಯಾಗಿದ್ದು, ಮಳೆಯನ್ನು ಸಹ ಲೆಕ್ಕಿಸದೇ ಪ್ರಕ್ರಿಯೆಯನ್ನು ಮುಂದುವರಿಸಲಾಗಿದ್ದು, ಯಾವ ಸ್ಥಳದಲ್ಲಿ ಅಸ್ತಿಪಂಜರ ಸಿಗಲಿದೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಸ್ಪೋಟಕ ಬೆಳವಣಿಗೆ: ನೇತ್ರಾವತಿ ಸ್ನಾನಘಟ್ಟದ ಸಮೀಪ ಸಮಾಧಿ ಅಗೆಯುವ ಪ್ರಕ್ರಿಯೆ ಆರಂಭ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


