ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ( ಜುಲೈ 29 ) ಮಹತ್ವದ ಬೆಳವಣಿಗೆ ನಡೆದಿದ್ದು, ದೂರುದಾರ ಗುರುತಿಸಿದ ಸ್ಥಳಕ್ಕೆ ಮತ್ತೆ ಎಸ್‌ಐಟಿ ಅಧಿಕಾರಿಗಳು ಗುಂಡಿ ಅಗೆಯುವ ಕಾರ್ಮಿಕರ ಜೊತೆ ಆಗಮಿಸಿದ್ದಾರೆ.
ಕಾರ್ಮಿಕರ ಹಾರೆ, ಪಿಕಾಸು ಹಿಡಿದು ಸ್ಥಳಕ್ಕಾಗಮಿಸಿದ್ದಾರೆ. ಇನ್ನು ಸಾಕ್ಷಿ ದೂರುದಾರ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ 13 ಕಡೆ ಹೆಣ ಹೂತಿದ್ದಾಗಿ ನಿನ್ನೆ ನಡೆಸಿದ ಸ್ಥಳ ಮಹಜರಿನಲ್ಲಿ ಗುರುತಿಸಿದ್ದ.
ನೇತ್ರಾವತಿ ಸ್ನಾನಘಟ್ಟದ ಸಮೀಪ ನಿನ್ನೆ ಗುರುತಿಸಿದ ಮೊದಲ ಸ್ಥಳದಲ್ಲಿ ಗುಂಡಿ ಅಗೆಯುವ ಕಾರ್ಯ ಆರಂಭವಾಗಿದೆ ಎನ್ನಲಾಗಿದೆ.
ದೂರುದಾರನ ಸಮ್ಮುಖದಲ್ಲಿ ಗುಂಡಿ ಅಗೆಯುವ ಕಾರ್ಯ ಆರಂಭವಾಗಿದ್ದು, ಈ ಪ್ರಕ್ರಿಯೆಯಲ್ಲಿ ಅಸ್ತಿಪಂಜರ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಸ್ವೀಡನ್ ಕಂಪನಿಯಲ್ಲಿ ವಿಚಿತ್ರ ವಿರಾಮ; ಖಾಸಗಿ ಸಮಯಕ್ಕಾಗಿ 30 ನಿಮಿಷ ಬ್ರೇಕ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


