Tuesday, September 1, 2026
spot_img
More
    spot_img
    HomeLatest newsಇನ್ಸ್ಟಾಗ್ರಾಮ್‌ ಮೆಸೇಜ್‌ ಬಟನ್‌ ಕೆಲಸ ನಿರ್ವಹಿಸದೇ ಪರದಾಡಿದ ಬಳಕೆದಾರರು

    ಇನ್ಸ್ಟಾಗ್ರಾಮ್‌ ಮೆಸೇಜ್‌ ಬಟನ್‌ ಕೆಲಸ ನಿರ್ವಹಿಸದೇ ಪರದಾಡಿದ ಬಳಕೆದಾರರು

    ಬೆಂಗಳೂರು: ಸಾಮಾಜಿಕ ಜಾಲತಾಣದ ಬಹುದೊಡ್ಡ ವೇದಿಕೆಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್‌ ಅಪ್ಲಿಕೇಶನ್‌ ಆಗಾಗ ಸರ್ವರ್‌ ಸಮಸ್ಯೆಗೆ ಒಳಗಾಗುತ್ತಲೇ ಇರುತ್ತದೆ. ಸರ್ವರ್‌ ಡೌನ್‌ ಎಂಬ ವಿಚಾರಕ್ಕೆ ಹೆಚ್ಚು ದೂರುಗಳನ್ನು ಹೊಂದಿರುವ ಇನ್ಸ್ಟಾಗ್ರಾಮ್‌ ಇದೀಗ ಮೆಸೇಜ್‌ ಬಟನ್‌ ಕೆಲಸ ನಿರ್ವಹಿಸದ ಕಾರಣಕ್ಕೆ ಸುದ್ದಿಗೀಡಾಗಿದೆ.

    Advertisement

    ತಮ್ಮ ಲೇಔಟ್‌ ವಿನ್ಯಾಸದಲ್ಲಿ ಕೆಲ ದಿನಗಳಿಂದ ಆಗಾಗ ಬದಲಾವಣೆಗಳನ್ನು ಮಾಡುತ್ತಾ ಬಂದಿರುವ ಇನ್ಸ್ಟಾಗ್ರಾಮ್‌ ಈ ಹಿಂದೆ ಸ್ಕ್ರೀನ್‌ನ ಬಲಗಡೆ ಮೇಲ್ಭಾಗದಲ್ಲಿದ್ದ ಮೆಸೇಜ್‌ ಬಟನ್‌ ಅನ್ನು ಇತ್ತೀಚೆಗಷ್ಟೆ ಸ್ಕ್ರೀನ್‌ನ ಮಧ್ಯಕ್ಕೆ ಕೆಳಭಾಗದಲ್ಲಿರಿಸಲಾಗಿತ್ತು.

    ಹೀಗೆ ರೀಲ್ಸ್‌ ಆಪ್ಷನ್‌ನ ಪಕ್ಕದಲ್ಲಿದ್ದ ಮೆಸೇಜ್‌ ಬಟನ್‌ಗೆ ಮತ್ತೆ ಬದಲಾವಣೆ ತಂದಿರುವ ಇನ್ಸ್ಟಾಗ್ರಾಮ್‌ ಪುನಃ ಮೆಸೇಜ್‌ ಬಟನ್‌ ಅನ್ನು ಬಲಗಡೆ ಮೇಲ್ಭಾಗಕ್ಕೆ ಸ್ಥಳಾಂತರಿಸಿದೆ.

    ಆದರೆ ವಿಶ್ವದಾದ್ಯಂತ ಅನೇಕ ಬಳಕೆದಾರರಿಗೆ ಇಂದು ( ಅಕ್ಟೋಬರ್‌ 29 ) ಈ ಮೆಸೇಜ್‌ ಬಟನ್‌ ಕೆಲಸ ನಿರ್ವಹಿಸುತ್ತಿಲ್ಲ. ಮೆಸೇಜ್‌ ಬಟನ್‌ ಕ್ಲಿಕ್‌ ಮಾಡಿದರೆ ಯಾವುದೇ ಪ್ರತಿಕ್ರಿಯೆ ಬಾರದೇ ಬೇಸತ್ತಿದ್ದಾರೆ.

    ಹೀಗೆ ನಿರಾಸೆಗೊಳಗಾದ ಬಳಕೆದಾರರು ಈ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ವೇದಿಕೆಯಲ್ಲಿ ಬರೆದುಕೊಂಡು ದೂರಿದ್ದಾರೆ.

    ತೇಜಸ್ವಿ ಸೂರ್ಯನಿಗೆ ನೀನು ಹೇಳಿದಂಗೆಲ್ಲ ಕೇಳೋಕೆ ಆಗಲ್ಲ ಅಂತ ಹೇಳಿದ್ದೇನೆ; ಭೇಟಿ ಬಳಿಕ ಡಿಕೆಶಿ ಮತ್ತೆ ಟಾಂಗ್


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading