ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸಗಾರರಿಗೆ ರಜೆ ಪಡೆದುಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ. ಅದರಲ್ಲೂ ಹೆಚ್ಚು ದಿನಗಳ ರಜೆ ಬೇಕಿದ್ದರೆ ಕೆಲಸಗಾರರು ಏನು ಕಾರಣ ನೀಡುವುದು ಎಂದು ಚಿಂತೆಗೀಡಾಗುವುದು ಸಾಮಾನ್ಯ.
ಹೀಗಾಗಿ ಕೆಲವರು ಉದ್ದುದ್ದ ರಜೆಗಳಿಗಾಗಿ ಮಾಲೀಕರ ಬಳಿ ಅಥವಾ ತಮ್ಮ ಟೀಮ್ ಲೀಡರ್ ಬಳಿ ಸುಳ್ಳು ಕಾರಣಗಳನ್ನು ಹೇಳಿ ರಜೆ ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕೆಲಸಗಾರ ರಜೆಗಾಗಿ ಲವ್ ಬ್ರೇಕಪ್ ಕಾರಣವನ್ನು ನೀಡಿದ್ದಾನೆ.
ಹೌದು, ʼನಾಟ್ ಡೇಟಿಂಗ್ʼ ಎಂಬ ಸಂಸ್ಥೆಯ ಸಿಇಒ ಜಸ್ವೀರ್ ಸಿಂಗ್ ತನಗೆ ಕೆಲಸಗಾರನೋರ್ವ ಕಳುಹಿಸಿರುವ ರಜೆ ಕೋರಿಕೆ ಇಮೇಲ್ ಅನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅತ್ಯಂತ ಪ್ರಾಮಾಣಿಕ ರಜೆ ಕೋರಿಕೆ ಎಂದಿದ್ದು, ಜೆನ್‌ಝೀಗಳಿಗೆ ಯಾವುದೇ ಮುಚ್ಚುಮರೆ ಇಲ್ಲ ಎಂದಿದ್ದಾರೆ.
ಅಕ್ಟೋಬರ್ 28ರಿಂದ ನವೆಂಬರ್ 8ರ ತನಕ ರಜೆ ಬೇಕೆಂದು ಮೇಲ್ ಮಾಡಿರುವ ಕೆಲಸಗಾರ ನನಗೆ ಇತ್ತೀಚೆಗಷ್ಟೆ ಬ್ರೇಕಪ್ ಆಗಿದ್ದು, ಕೆಲಸದ ಮೇಲೆ ಗಮನಹರಿಸಲು ಆಗುತ್ತಿಲ್ಲ. ಹೀಗಾಗಿ ನನಗೆ ಸಣ್ಣ ಬ್ರೇಕ್ ಬೇಕಿದೆ. ಇಂದು ನಾನು ವರ್ಕ್ ಫ್ರಮ್ ಮಾಡಲಿದ್ದೇನೆ 28ರಿಂದ 8ರವರೆಗೆ ರಜೆ ಬೇಕಿದೆ ಎಂದು ಬರೆದುಕೊಂಡಿದ್ದಾನೆ.
ಈ ಟ್ವೀಟ್ ನೋಡುತ್ತಿದ್ದಂತೆ ನೆಟ್ಟಿಗರು ರಜೆ ಕೊಟ್ರಾ, ಅಯ್ಯೋ ಪಾಪ ಆತನಿಗೆ ರಜೆ ಕೊಟ್ಟುಬಿಡಿ ಎಂದು ಹಲವರು ಕಾಮೆಂಟ್ ಮಾಡಿದ್ದು, ಇದಕ್ಕೆ ಸಿಇಒ ತಕ್ಷಣವೇ ರಜೆಯನ್ನು ನೀಡಲಾಗಿದೆ ಎಂದು ರಿಪ್ಲೈ ಮಾಡಿದ್ದಾರೆ.
ರಾಜ್ಯ ಪೊಲೀಸರ ಟೋಪಿ ಬದಲಾವಣೆ; ಹೊಸ ನೀಲಿ ಕ್ಯಾಪ್ ತೊಟ್ಟು ಮಿಂಚಿದ ಪೊಲೀಸರು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


