Sunday, November 1, 2026
spot_img
More
    spot_img
    HomeStateDistrictಜ್ಯೋತಿ ಸಂಜೀವಿನಿ ಯೋಜನೆ: ಅರ್ಜಿ ಸಲ್ಲಿಸಲು ಸರ್ಕಾರಿ ನೌಕರರಿಗೆ ಪ್ರಮುಖ ಸೂಚನೆಗಳು

    ಜ್ಯೋತಿ ಸಂಜೀವಿನಿ ಯೋಜನೆ: ಅರ್ಜಿ ಸಲ್ಲಿಸಲು ಸರ್ಕಾರಿ ನೌಕರರಿಗೆ ಪ್ರಮುಖ ಸೂಚನೆಗಳು

    ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಬಹುನಿರೀಕ್ಷಿತ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (Karnataka Arogya Sanjeevini Scheme KASS) ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಯಾಗಿದೆ.

    ಈ ಯೋಜನೆಯು ಜಾರಿಗೆ ಬಂದ ನಂತರ ಇದುವರೆಗೆ, ರಾಜ್ಯದ ಒಟ್ಟು ಸರ್ಕಾರಿ ನೌಕರರಲ್ಲಿ 4.83 ಲಕ್ಷ ನೌಕರರು ಯೋಜನೆಯ ನಿಯಮಗಳಿಗೆ ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಈ ಸಮ್ಮತಿಯೊಂದಿಗೆ, ನೌಕರರು ಮತ್ತು ಅವರ ಕುಟುಂಬ ಸದಸ್ಯರು ನಗದು ರಹಿತ ವೈದ್ಯಕೀಯ ಚಿಕಿತ್ಸೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ರಕ್ಷಣೆ ಒದಗಿಸುವ ಜ್ಯೋತಿ ಸಂಜೀವಿನಿ ಯೋಜನೆಗೆ (Jyothi Sanjeevini Scheme) ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು

    ಕಡ್ಡಾಯ ದಾಖಲೆಗಳು ಮತ್ತು ನಮೂನೆಗಳು

    ನಮೂನೆ ಸಲ್ಲಿಕೆ: ಅನುಬಂಧ-1 (Annexure-1) ರ ನಮೂನೆಯನ್ನು ಕಚೇರಿಗೆ 2 ಪ್ರತಿಗಳಲ್ಲಿ ಸಲ್ಲಿಸಬೇಕು.

    ಭಾಷಾ ಅಗತ್ಯ: ಅರ್ಜಿಯಲ್ಲಿನ ಎಲ್ಲಾ ವಿವರಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯ (CAPITAL LETTERS) ಎರಡರಲ್ಲೂ ತಪ್ಪದೇ ಭರ್ತಿ ಮಾಡಬೇಕು.

    ಆಧಾರ್ ಕಾರ್ಡ್: ನೌಕರರ ಮತ್ತು ಎಲ್ಲಾ ಅವಲಂಬಿತರ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು.

    FORM-C ಭರ್ತಿ: ಅನುಬಂಧ-1 ರಲ್ಲಿ ತೋರಿಸಿದ ಅವಲಂಬಿತರ ವಿವರಗಳನ್ನು FORM-C ಯಲ್ಲಿಯೂ ಭರ್ತಿ ಮಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ (BEO) ಯವರ ಸಹಿಗಾಗಿ ಸಲ್ಲಿಸಬೇಕು.

    ಭಾವಚಿತ್ರಗಳಿಗೆ ಸಂಬಂಧಿಸಿದ ನಿಯಮಗಳು

    ಭಾವಚಿತ್ರದ ಹಿನ್ನೆಲೆ: ಎಲ್ಲಾ ಅವಲಂಬಿತರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು (Colour Photo) ಕಡ್ಡಾಯವಾಗಿ ಬಿಳಿ ಬಣ್ಣದ ಹಿನ್ನೆಲೆಯಲ್ಲಿ (White Background) ಇರಬೇಕು.

    ಸಹಿ ಮತ್ತು ದಿನಾಂಕ: ನೌಕರರು ತಮ್ಮ ಮತ್ತು ಅವಲಂಬಿತರ ಭಾವಚಿತ್ರಗಳ ಹಿಂಭಾಗದಲ್ಲಿ ಸಹಿ ಮಾಡಿ ದಿನಾಂಕವನ್ನು ನಮೂದಿಸಬೇಕು.

    ಚಿತ್ರ ಬದಲಾವಣೆ: ನೌಕರರ ಮತ್ತು ಅವಲಂಬಿತರ ಭಾವಚಿತ್ರಗಳನ್ನು ಒಮ್ಮೆ ಅಪ್‌ಲೋಡ್ ಮಾಡಿದ ನಂತರ, ಪುನಃ 5 ವರ್ಷಗಳ ನಂತರವೇ ಬದಲಾಯಿಸಲು ಅವಕಾಶವಿರುತ್ತದೆ.

    ಕಡ್ಡಾಯ ಬದಲಾವಣೆ: ನೌಕರ ಮತ್ತು ಎಲ್ಲಾ ಅವಲಂಬಿತರ ಭಾವಚಿತ್ರಗಳನ್ನು ಪ್ರತಿ 5 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕು.

    ಅವಲಂಬಿತರ (Dependents) ವಿವರಗಳು

    ಹೆಸರಿನ ನಿಖರತೆ: ಎಲ್ಲಾ ಅವಲಂಬಿತರ ಹೆಸರುಗಳನ್ನು ಅವರ ಆಧಾರ್ ಕಾರ್ಡ್‌ನಲ್ಲಿರುವಂತೆಯೇ ತುಂಬಬೇಕು. ಹೆಸರಿನಲ್ಲಿ ವ್ಯತ್ಯಾಸವಾದರೆ, ಮಾಹಿತಿಯನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗುವುದಿಲ್ಲ.

    ಹೊಸ ಸೇರ್ಪಡೆ/ತೆಗೆದುಹಾಕುವಿಕೆ: ಅನುಬಂಧ-1 ಸಲ್ಲಿಸಿದ ನಂತರವೂ, ವಿವಾಹ, ಮಗುವಿನ ಜನನ, ಮರಣ ಇತ್ಯಾದಿ ಕಾರಣಗಳಿಗಾಗಿ FORM-A4 ಮೂಲಕ ಅವಲಂಬಿತರನ್ನು ಸೇರಿಸಲು ಅಥವಾ ತೆಗೆದುಹಾಕಲು ಅವಕಾಶವಿದೆ.

    ಅವಲಂಬಿತರ ಅರ್ಹತಾ ಮಾನದಂಡಗಳು

    ಪುರುಷ ನೌಕರರಿಗೆ ಅರ್ಹರು:ಹೆಂಡತಿ (Wife),ಮಕ್ಕಳು (Children),ತಂದೆ, ತಾಯಿಗಳು ಮತ್ತು ಮಲತಾಯಿ (Step-mother) ಮಾತ್ರ ಅವಲಂಬಿತರಾಗಿರುತ್ತಾರೆ.
    (ಹೆಂಡತಿಯ ತಂದೆ, ತಾಯಿಗಳು (ಅತ್ತೆ, ಮಾವ) ಈ ಯೋಜನೆಗೆ ಒಳಪಡುವುದಿಲ್ಲ.)

    ಮಹಿಳಾ ನೌಕರರಿಗೆ ಅರ್ಹರು:ಗಂಡ (Husband)ಮಕ್ಕಳು (Children)ಸ್ವಂತ ತಂದೆ, ತಾಯಿಗಳು ಮತ್ತು ಮಲತಾಯಿ (Step-mother) ಮಾತ್ರ ಅವಲಂಬಿತರಾಗಿರುತ್ತಾರೆ.
    (ಗಂಡನ ತಂದೆ, ತಾಯಿಗಳು (ಅತ್ತೆ, ಮಾವ) ಈ ಯೋಜನೆಗೆ ಒಳಪಡುವುದಿಲ್ಲ.)

    ಬಹುಪತ್ನಿತ್ವ: ಸರ್ಕಾರಿ ವಿವಾಹಿತ ನೌಕರರು ಎರಡು ಮದುವೆಯಾಗಿದ್ದರೆ, ಮೊದಲನೇ ಹೆಂಡತಿ ಮತ್ತು ಮಕ್ಕಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಎರಡನೇ ಹೆಂಡತಿ ಮತ್ತು ಮಕ್ಕಳಿಗೆ ಈ ಯೋಜನೆಯ ಸೌಲಭ್ಯ ಇರುವುದಿಲ್ಲ.

    ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ನಿಮ್ಮ ಮತ್ತು ನಿಮ್ಮ ಎಲ್ಲಾ ಅವಲಂಬಿತರ ಹೆಸರು ಮತ್ತು ಭಾವಚಿತ್ರಗಳು ಸರಿಯಾಗಿ ನಮೂದಾಗಿದ್ದರೆ ಮಾತ್ರ, ನೀವು ಯೋಜನೆಯ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗೆ ಹೋದಾಗ ಅವರ ವಿವರಗಳು ಗೋಚರಿಸುತ್ತವೆ.

    ನಮೂದಾಗದಿದ್ದರೆ ಬರೀ ನೌಕರರ ಹೆಸರು ಮಾತ್ರ ಆಸ್ಪತ್ರೆಯ ವೆಬ್‌ಸೈಟ್‌ನಲ್ಲಿ ಗೋಚರಿಸುತ್ತದೆ. ಇದರಿಂದಾಗಿ ಅವಲಂಬಿತರಿಗೆ ಚಿಕಿತ್ಸೆ ಕೊಡಿಸಲು ತೊಂದರೆಯಾಗುತ್ತದೆ. ಆದ್ದರಿಂದ ಎಲ್ಲಾ ವಿವರಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search