Sunday, November 1, 2026
spot_img
More
    spot_img
    HomeSportsCricketಭಾರತ vs ಆಸ್ಟ್ರೇಲಿಯಾ: ಮೊದಲ ಟಿ20ಗಿಲ್ಲ ಮ್ಯಾಕ್ಸ್‌ವೆಲ್;‌ ಆಸ್ಟ್ರೇಲಿಯಾದ ಈ 5 ಆಟಗಾರರು ಪೂರ್ತಿ ಸರಣಿ...

    ಭಾರತ vs ಆಸ್ಟ್ರೇಲಿಯಾ: ಮೊದಲ ಟಿ20ಗಿಲ್ಲ ಮ್ಯಾಕ್ಸ್‌ವೆಲ್;‌ ಆಸ್ಟ್ರೇಲಿಯಾದ ಈ 5 ಆಟಗಾರರು ಪೂರ್ತಿ ಸರಣಿ ಆಡಲ್ಲ!

    ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ವೈಟ್‌ಬಾಲ್‌ ಸರಣಿಗಳನ್ನು ಆಡುತ್ತಿರುವ ಟೀಮ್‌ ಇಂಡಿಯಾ ಮೊದಲಿಗೆ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1 – 2 ಅಂತರದಿಂದ ಸೋಲನ್ನು ಅನುಭವಿಸಿ ಇದೀಗ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗಿದೆ.

    ಇಂದು ( ಅಕ್ಟೋಬರ್‌ 29 ) ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾದ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಸೂರ್ಯಕುಮಾರ್‌ ನೇತೃತ್ವದ ಭಾರತ ತಂಡ ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

    ಇನ್ನು ಟಿ20 ಸರಣಿಗೆ ಪ್ರಕಟಗೊಂಡ ಆಸ್ಟ್ರೇಲಿಯಾ ತಂಡದಲ್ಲಿ ಟಿಮ್‌ ಡೇವಿಡ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ರೀತಿಯ ಅಬ್ಬರದ ಬ್ಯಾಟಿಂಗ್‌ ನಡೆಸಬಲ್ಲ ಆಟಗಾರರಿದ್ದು, ಅನೇಕ ಪ್ರಮುಖ ಆಟಗಾರರು ತಂಡದಲ್ಲಿ ಇಲ್ಲದೇ ಇದ್ದರೂ ಬಲಿಷ್ಟವಾಗಿಯೇ ಕಾಣುತ್ತಿದೆ. ಆದರೆ 5 ಪಂದ್ಯಗಳಿಗೆ ಪ್ರಕಟಗೊಂಡ ಆಸ್ಟ್ರೇಲಿಯಾ ತಂಡದಲ್ಲಿರುವ ಎಲ್ಲ ಆಟಗಾರರೂ ಎಲ್ಲ ಪಂದ್ಯಗಳನ್ನೂ ಆಡುವುದಿಲ್ಲ.

    ಹೌದು, ಕೆಲ ಆಟಗಾರರು ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದು, ಯಾವ ಆಟಗಾರರು ಯಾವೆಲ್ಲ ಪಂದ್ಯಗಳಿಗಿಲ್ಲ ಎಂಬ ಮಾಹಿತಿ ಮುಂದಿದೆ.

    ಗ್ಲೆನ್‌ ಮ್ಯಾಕ್ಸ್‌ವೆಲ್‌: ಮೊದಲೆರಡು ಪಂದ್ಯಗಳಿಗೆ ಅಲಭ್ಯ ಹಾಗೂ ಕೊನೆಯ 3 ಪಂದ್ಯಗಳನ್ನು ಆಡಲಿದ್ದಾರೆ.
    ಸೀನ್‌ ಆಬಟ್: ಮೊದಲ 3 ಪಂದ್ಯಗಳನ್ನಾಡಲು ಲಭ್ಯರಿದ್ದು, ಕೊನೆಯ 2 ಪಂದ್ಯಗಳಿಗೆ ಅಲಭ್ಯ
    ಮಹ್ಲಿ ಬಿಯರ್ಡ್‌ಮನ್‌: ಮೊದಲೆರಡು ಪಂದ್ಯಗಳಿಗೆ ಅಲಭ್ಯ ಹಾಗೂ ಕೊನೆಯ 3 ಪಂದ್ಯಗಳನ್ನು ಲಭ್ಯರಿದ್ದಾರೆ.
    ಬೆನ್‌ ಡ್ವಾರ್ಶಸ್:‌ ಮೊದಲ 3 ಪಂದ್ಯಗಳಿಗೆ ಅಲಭ್ಯ ಹಾಗೂ ಕೊನೆಯ 2 ಪಂದ್ಯಗಳಿಗೆ ಲಭ್ಯರಿದ್ದಾರೆ.
    ಜೋಶ್‌ ಹೇಜಲ್‌ವುಡ್:‌ ಮೊದಲ 2 ಪಂದ್ಯಗಳಿಗೆ ಲಭ್ಯ ಹಾಗೂ ಕೊನೆಯ 3 ಪಂದ್ಯಗಳಿಗೆ ಅಲಭ್ಯ

    ಇನ್ಸ್ಟಾಗ್ರಾಮ್‌ ಮೆಸೇಜ್‌ ಬಟನ್‌ ಕೆಲಸ ನಿರ್ವಹಿಸದೇ ಪರದಾಡಿದ ಬಳಕೆದಾರರು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search