Monday, November 9, 2026
spot_img
More
    spot_img
    HomeSportsCricketಮಹಿಳಾ ವಿಶ್ವಕಪ್:‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಹೀನಾಯ ಸೋಲು; ಮೊದಲ ಬಾರಿಗೆ ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ

    ಮಹಿಳಾ ವಿಶ್ವಕಪ್:‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಹೀನಾಯ ಸೋಲು; ಮೊದಲ ಬಾರಿಗೆ ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ

    ಗುವಾಹಟಿ: ಬರ್ಸಾಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ವನಿತೆಯರ ಏಕದಿನ ವಿಶ್ವಕಪ್‌ 2025ರ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 125 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 319 ರನ್‌ ಕಲೆಹಾಕಿ ಇಂಗ್ಲೆಂಡ್‌ಗೆ 320 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್‌ 42.3 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲ್‌ಔಟ್‌ ಆಯಿತು.

    ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:‌ ತಂಡದ ಪರ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ನಾಯಕಿ ಲೌರಾ ವೋಲ್ವಾರ್ಡ್ಟ್‌ 143 ಎಸೆತಗಳಲ್ಲಿ 169 ರನ್‌ ಕಲೆಹಾಕಿದರು. ಇನ್ನುಳಿದಂತೆ ತಜ್ಮಿನ್‌ ಬ್ರಿಟ್ಜ್‌ 45, ಅನೆಕ್‌ ಬೋಷ್‌ ಡಕ್‌ಔಟ್‌, ಸ್ಯೂನ್‌ ಲುಸ್‌ 1, ಮರಿಜನ್‌ ಕಾಪ್‌ 42, ಸಿನಲೊ ಜಫ್ತಾ 1, ಆನೆರಿ ಡೆರ್ಕ್‌ಸನ್‌ 4, ಷ್ಲೋ ಟೈರನ್‌ ಅಜೇಯ 33 ಹಾಗೂ ನದೈನ್‌ ಡಿ ಕ್ಲೆರ್ಕ್‌ ಅಜೇಯ 11 ರನ್‌ ಬಾರಿಸಿದರು.

    ಇಂಗ್ಲೆಂಡ್‌ ಪರ ಸೋಫಿ ಎಕ್ಸೆಲ್‌ಟನ್‌ 4 ವಿಕೆಟ್, ಲಾರೆನ್‌ ಬೆಲ್‌ 2 ವಿಕೆಟ್‌ ಹಾಗೂ ನಾಟ್‌ ಸಿವೆರ್‌ಬ್ರಂಟ್‌ 1 ವಿಕೆಟ್‌ ಪಡೆದರು.

    ಇಂಗ್ಲೆಂಡ್‌ ಇನ್ನಿಂಗ್ಸ್:‌ ಆಫ್ರಿಕಾ ನೀಡಿದ ಬೃಹತ್‌ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಮೊದಲ ಓವರ್‌ನಲ್ಲೇ ರನ್‌ ಖಾತೆ ತೆರೆಯುವ ಮುನ್ನವೇ ತನ್ನ ಆರಂಭಿಕರನ್ನು ಕಳೆದುಕೊಂಡಿತು. ಹೀಗೆ ಆರಂಭಿಕ ಆಘಾತ ಅನುಭವಿಸಿದ ಇಂಗ್ಲೆಂಡ್‌ ಕೇವಲ 1 ರನ್‌ಗೆ ತನ್ನ ಮೊದಲ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ನಂತರ ಚೇತರಿಸಿಕೊಳ್ಳಲೇ ಇಲ್ಲ. ತಂಡದ ಪರ ಏಮಿ ಜೋನ್ಸ್‌ ಡಕ್‌ಔಟ್‌, ಟಾಮಿ ಬೀಮೌಂಟ್‌ ಡಕ್‌ಔಟ್‌, ಹೀದರ್‌ ನೈಟ್‌ ಡಕ್‌ಔಟ್‌, ನಾಟ್‌ ಸೀವರ್‌ಬ್ರಂಟ್‌ 64, ಅಲಿಸ್‌ ಕ್ಯಾಪ್ಸಿ 50, ಡೇನಿಯಲ್‌ ವಾಟ್‌ ಹಾಡ್ಜ್‌ 34, ಸೋಫಿಯಾ ಡಂಕ್ಲಿ 2, ಲಿನ್ಸಿ ಸ್ಮಿತ್‌ 27 ಹಾಗೂ ಲಾರೆನ್‌ ಬೆಲ್‌ ಅಜೇಯ 9 ರನ್‌ ಗಳಿಸಿದರು.

    ದಕ್ಷಿಣ ಆಫ್ರಿಕಾ ಪರ ಮರಿಜನ್‌ ಕಾಪ್‌ 5 ವಿಕೆಟ್‌, ನದೈನ್‌ ಡಿ ಕಾಕ್‌ 2 ವಿಕೆಟ್‌, ಅಯಬೊಂಗಾ ಖಾಕ, ನೊಂಕುಲುಲೆಕೊ ಎಮ್‌ಲಾಬಾ ಹಾಗೂ ಸ್ಯೂನ್‌ ಲುಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಅಪ್ಪು, ನಾನು ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಮಾತುಕತೆ ಆಗಿತ್ತು; ಬಾಯ್ಬಿಟ್ಟ ಶಿವಣ್ಣ

    ,


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search