Saturday, August 8, 2026
spot_img
More
    spot_img
    HomeStateಕಾಂಗ್ರೆಸ್‌ ಪಕ್ಷದಿಂದ ಸುಪಾರಿ ಪಡೆದು ಬಿಜೆಪಿ ಮುಗಿಸಲು ಹೊರಟಿದ್ದಾರೆ; ಯತ್ನಾಳ್‌ ವಿರುದ್ಧ ವರಿಷ್ಠರಿಗೆ ಪತ್ರ

    ಕಾಂಗ್ರೆಸ್‌ ಪಕ್ಷದಿಂದ ಸುಪಾರಿ ಪಡೆದು ಬಿಜೆಪಿ ಮುಗಿಸಲು ಹೊರಟಿದ್ದಾರೆ; ಯತ್ನಾಳ್‌ ವಿರುದ್ಧ ವರಿಷ್ಠರಿಗೆ ಪತ್ರ

    ಬೆಂಗಳೂರು: ಕಾಂಗ್ರೆಸ್ ನಾಯಕರಾದ ಸೋನಿಗಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಂದ ಸುಪಾರಿ ಪಡೆದು ರಾಜ್ಯದಲ್ಲಿ ಬಿಜೆಪಿ ಮುಗಿಸಲು ಹೊರಟಿರುವ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮುಲಾಜಿಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಬೇಕೆಂದು ಕೇಂದ್ರ ವರಿಷ್ಠರಿಗೆ ಬಿಜೆಪಿ ನಿಷ್ಠ ಬಣ ಒತ್ತಾಯಿಸಿದೆ.

    Advertisement

    ಶುಕ್ರವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಹರತಾಳ್ ಹಾಲಪ್ಪ, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಸಭೆ ನಡೆಸಿ ಯತ್ನಾಳ್ ಬಾಯಿಗೆ ಕಡಿವಾಣ ಹಾಕುವಂತೆ ಕೇಂದ್ರ ವರಿಷ್ಠರನ್ನು ಆಗ್ರಹಿಸಿದರು.

    ನಂತರ ಜಂಟಿ ಸುದ್ದಿಗೋಷ್ಟಿ ನಡೆಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಣದ ನಿಷ್ಠರು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸದ್ಯಕ್ಕೆ ಬಿ.ವೈ ಅವರ ನಾಯಕತ್ವವನ್ನು ಬದಲಾಯಿಸದೇ ಅವರನ್ನೇ ಮುಂದುವರೆಸಬೇಕೆಂಬ ನಿರ್ಣಯವನ್ನು ಮಾಡಿದ್ದಾರೆ.

    ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಮುಗಿಸಬೇಕೆಂದು ಕಾಂಗ್ರೆಸ್ ನಾಯಕರು ಸುಫಾರಿ ನೀಡಿದ್ದಾರೆ. ಆದ್ದರಿಂದಲೇ ಯತ್ನಾಳ್ ಎಲ್ಲರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಅವರು ಬಾಯಿ ಮುಚ್ಚಿಕೊಂಡು ಸುಮ್ಮನಿರದಿದ್ದರೆ ನಾವು ಬೀದಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

    ಪಕ್ಷದ ಹಿರಿಯ ನಾಯಕರಾದ ಡಿ.ವಿ.ಸದಾನಂದಗೌಡರು ಬಿಜೆಪಿಯ ಹಿತದೃಷ್ಟಿಯಿಂದ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ಸ್ವಯಂಘೋಷಿತ ಮಹಾನಾಯಕರೊಬ್ಬರು ಸದಾನಂದಗೌಡರು ಮಾತಾಡಿದ್ದಕ್ಕೆ ಬಿಚ್ಚಿಡುತ್ತೇನೆ ಎಂದು ಹೇಳುತ್ತಿದ್ದಾರೆ. ನೀನು ಏನು ಬ್ಲ್ಯಾಕ್ ಮೇಲ್ ಮಾಸ್ಟರಾ..? ಎಂದು ಏಕವಚನದಲ್ಲಿ ಹೆಸರು ಹೇಳದೆ ಪ್ರಶ್ನೆ ಮಾಡಿದರು.

    ಅದೇನು ಬಿಚ್ಚಿಡುತ್ತಿಯೋ ಬಿಚ್ಚು ನೋಡೋಣ ನಾವು ನಿಂದು ಬಿಚ್ಚಿಡುತ್ತೇವೆ . ಬೀದಿಯಲ್ಲಿ ತಮಟೆ ಹೊಡೆಯುತ್ತಾ ಹೋಗುತ್ತಿರುವವರು ನೀವು. ನಾಗರಹಾವು ಗಳು ನೀವು, ಯತ್ನಾಳ್ ನಿನ್ನ ಕೊಡುಗೆ ಏನು..? ಎಂದು ಖಾರವಾಗಿ ಪ್ರಶ್ನಿಸಿದರು.

    ರಾಜ್ಯಾಧ್ಯಕ್ಷರು, ಮತ್ತೆ ಯಡಿಯೂರಪ್ಪ ನಮಗೆ ಒಪ್ಪಿಗೆ ಕೊಟ್ಟಿಲ್ಲ. ಆದರೆ ನಾವು ಬೀದಿಗೆ ಬರುವ ಅನಿವಾರ್ಯತೆ ಬಂದಿದೆ. ಮನೆಗೆ ಕನ್ನ ಹಾಕೋರು, ಇವರು ಕಾಂಗ್ರೆಸ್‍ನ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ. ನೀನೇನು ಹಿಟ್ಲರಾ..? ಎಂದು ತರಾಟೆಗೆ ತೆಗೆದುಕೊಂಡರು.

    ನಾವು ಯಾರು ಪರ್ಯಾಯ ಸಭೆಗಳನ್ನು ಮಾಡುತ್ತಿಲ್ಲ. ಪಕ್ಷದ ವೇದಿಕೆಯಲ್ಲಿ ನಾವು ಪ್ರವಾಸ ಮಾಡುತ್ತಿz?ದೆ?ವೆ. ದಾವಣಗೆರೆ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸುತ್ತೇವೆ. ವಿಜಯಪುರದ ಹಾಲಿ ಸಚಿವ ಹಾಗೂ ಪ್ರಭಾವಿ ಸಚಿವನ ಜೊತೆ ಹೊಂದಾಣಿಕೆಯನ್ನು ಮಾಡಿಕೊಂಡು ನೀನು ಗೆದ್ದು ಇಡೀ ಜಿಲ್ಲೆಯ ಬಿಜೆಪಿ ಶಾಸರನ್ನು ಸೋಲಿಸಿದ್ದೀಯಾ? ಶಿಗ್ಗಾವ್‍ನಲ್ಲಿ ಭರತ್ ಬೊಮ್ಮಾಯಿ ಸೋಲಿಗೂ ನೀನೇ ಕಾರಣ ಎಂದು ಟೀಕಾ ಪ್ರಹಾರ ನಡೆಸಿದರು.

    ಮಾಜಿ ಶಾಸಕರುಗಳು ಕುರುಡು ಮಲೆ ಗಣೇಶ ದೇವಸ್ಥಾನಕ್ಕೆ ಹೋಗುತ್ತಿz?ದೆ?ವೆ. ನಂತರ ಮೈಸೂರಿನ ಚಾಮುಂಡೇಶ್ವರಿ ಸನ್ನಿದಾನಕ್ಕೆ ಹೋಗುತ್ತೇವೆ. ನಾಡಿನ ಜನತೆಗೆ ಒಳೆಯತಾಗಬೇಕು, ಜನ ಚೆನ್ನಾಗಿರಬೇಕು. ಮತ ಬಿಜೆಪಿಗೆ ಒಳ್ಳೆಯದು ಆಗಬೇಕು ಎಂಬುದು ಪ್ರವಾಸದ ಉದ್ದೇಶ ಎಂದರು.
    ನಾವೆಲ್ಲರೂ ಒಟ್ಟಾಗಿ ಆತ್ಮಸ್ಥೈರ್ಯ ತುಂಬುತ್ತೇವೆ. ಮೂರು ಉಪ ಚುನಾವಣೆಗಳಲ್ಲಿ ಪಕ್ಷಕ್ಕೆ ಸೋಲಾಗಿದೆ. ಸೋಲಿನಿಂದ ಕಾರ್ಯಕರ್ತರು ಮತ್ತೆ ಮುಖಂಡರಿಂದ ನೋವಾಗಿದೆ. ಅನಗತ್ಯವಾಗಿ ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.

    ಪ್ರಧಾನಿ ನರೇಂದ್ರಮೋದಿ ಅವರಿಗಿಂತ ನೀನು ದೊಡ್ಡ ಮನುಷ್ಯ ಆಗಬಿಟ್ಟಿದ್ದಾರೆ. ವಕ್ಪ್ ಹೋರಾಟಕ್ಕೆ ಶೋಭಾ, ಪ್ರಹ್ಲಾದ್ ಜೋಷಿ ಬೆಂಬಲ ಕೊಟ್ಟಿದ್ದಾರೆ ವಿನಹ ನಿಮಗಲ್ಲ. ಪರ್ಯಾಯ ನಾಯಕತ್ವ ಸೃಷ್ಟಿಗೆ ಬೆಂಬಲ ಕೊಟ್ಟರಾ..? ಪಕ್ಷ ಚಿಹ್ನೆ ನಿಮಗೆ ಕೊಟ್ಟವರು ಯಾರು..? ಎಂದು ಪ್ರಶ್ನೆ ಮಾಡಿದರು.

    ವಿನಾಕಾರಣ ಸಂಘರ್ಷಕ್ಕೆ ಇಳಿದಿದ್ದಾರೆ. ನಿನಗೆ ತಾಕತ್ ಇದ್ದರೆ ಯಾರು ಆ ರಾಷ್ಟ್ರೀಯ ನಾಯಕ ನಿನಗೆ ಅನುಮತಿ ಕೊಟ್ಟರು ಹೇಳು..? ನಿಮ್ಮ ನಡವಳಿಕೆ ಸರಿಯಾಗಿಲ್ಲ ಅಂದರೆ ವರಿಷ್ಠರ ಭೇಟಿ ಮಾಡಿ ನಿಮ್ಮ ಉಚ್ಚಾಟನೆಗೆ ಒತ್ತಾಯ ಮಾಡಬೇಕಾಗುತ್ತದೆ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.

    ನಮ್ಮದು ಪರ್ಯಾಯ ಪ್ರವಾಸ ಅಲ್ಲ:

    ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ಮಾತನಾಡಿ,ನಾವು ಯಾರು ಪರ್ಯಾಯ ಸಭೆಗಳನ್ನು ಮಾಡುತ್ತಿಲ್ಲ. ಪಕ್ಷದ ವೇದಿಕೆಯಲ್ಲಿ ನಾವು ಪ್ರವಾಸ ಮಾಡ್ತಿದ್ದೇವೆ. ವಿಜಯಪುರದ ಹಾಲಿ ಸಚಿವ ಹಾಗೂ ಪ್ರಭಾವಿ ಸಚಿವನ ಜೊತೆ ಹೊಂದಾಣಿಕೆಯನ್ನು ಮಾಡಿಕೊಂಡು ನೀನು ಗೆದ್ದು ಇಡೀ ಜಿಲ್ಲೆಯ ಬಿಜೆಪಿ ಶಾಸರನ್ನು
    ಸೋಲಿಸಿದ್ದೀಯಾ. ಮೊನ್ನೆ ಶಿಗ್ಗಾವ್ ನಲ್ಲಿ ಭರತ್ ಬೊಮ್ಮಾಯಿ ಸೋಲಿಗೂ ನೀನೇ ಕಾರಣ ಎಂದು ಕಿಡಿಕಾರಿದರು
    ನಮ್ಮಲ್ಲಿ ಯಾವುದೇ ರೀತಿಯ ಒಡಕುಗಳಿಲ್ಲ. ಕೆಲವು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಈಡೇರುವುದಿಲ್ಲ.ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು, ಯಡಿಯೂರಪ್ಪ ಅವರ ನಾಯಕತ್ವಕ್ಕೆ ನಾವೆಲ್ಲರೂ ಎಂದೆಂದಿಗೂ ಅಚಲರಾಗಿz?ದೆ?ವೆ. ಈಗ ಕೆಲವರು ಪರ್ಯಾಯ ನಾಯಕತ್ವ ಸೃಷ್ಟಿಸಲು ಹೊರಟಿದ್ದಾರೆ. ಇದರಲ್ಲಿ ಖಂಡಿತವಾಗಿಯೂ ಅವರು ಯಶಸ್ವಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು.

    ಮಾಜಿ ಸಚಿವ ಹರತಾಳ್ ಹಾಲಪ್ಪ ಮಾತನಾಡಿ, ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಕೇಂದ್ರದ ವರಿಷ್ಠರು, ನಮಗೆ ಇಷ್ಟವೋ, ಕಷ್ಟವೋ ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡು ಅದರಂತೆಯೇ ನಡೆದುಕೊಳ್ಳಬೇಕು. ಕಾರ್ಯಕರ್ತರಲ್ಲಿ ಯಾರೊಬ್ಬರು ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿಕೊಂಡರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಇದೆಲ್ಲವೂ ಸೇಡಿನ ರಾಜಕಾರಣದ ಭಾಗವಾಗಿದೆ ಎಂದರು.

    ಇಂತಹ ಹಲವಾರು ಘಟನೆಗಳನ್ನು ಎದುರಿಸಿಯೇ ಅಧಿಕಾರಕ್ಕೆ ಬಂದಿದ್ದಾರೆ. 40% ಕಮೀಷನ್ ಆರೋಪ, ಪೇಸಿಎಂ ಹಣೆಬರಹ ಏನಾಗಿದೆ ಎಂಬುದನ್ನು ಎಲ್ಲರಿಗೂ ಗೊತ್ತು. ಕಾನೂನು ಪ್ರಕಾರ ಹೋರಾಟ ನಡೆಸಿ ಆರೋಪದಿಂದ ಅವರು ಮುಕ್ತರಾಗುತ್ತಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಬಸವರಾಜ್ ದಡೇಸೂರ್, ಗೋಪಾಲ್ ನಾಯಕ್, ಸುನೀಲ್ ಹೆಗಡೆ, ಸುನೀಲ್ ನಾಯಕ್, ಬಸವರಾಜ ನಾಯಕ್, ಪಿಳ್ಳೆ ಮುನಿಸ್ವಾಮಪ್ಪ, ಬೆಳ್ಳಿ ಪ್ರಕಾಶ್, ಮಸಾಲೆ ಜಯರಾಮ್, ಎಂ.ಡಿ.ಲಕ್ಷ್ಮಿನಾರಾಯಣ ಸೇರಿದಂತೆ ಮತ್ತಿತರರು ಇದ್ದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading