ಬೆಂಗಳೂರು: ಆಭರಣ ಖರೀದಿದಾರರೇ ಎಚ್ಚರ! ಚಿನ್ನದ ದರಗಳು ಮತ್ತೆ ಅಬ್ಬರದ ಏರುಗತಿಯಲ್ಲಿ ಸಾಗಿದ್ದು, ಜನಸಾಮಾನ್ಯರಿಗೆ ದೊಡ್ಡ ಶಾಕ್ ನೀಡಿದೆ. ಕಳೆದ ಹತ್ತು ದಿನಗಳ ದರಗಳನ್ನು ಗಮನಿಸಿದರೆ, ನವೆಂಬರ್ 27 ರಂದು ಕೊಂಚ ಇಳಿಕೆ ಕಂಡಿದ್ದರೂ, ನವೆಂಬರ್ 28 ಮತ್ತು 29 ರಂದು ಸತತ ಎರಡನೇ ದಿನವೂ ಹಳದಿ ಲೋಹದ ಬೆಲೆ ಗಗನಕ್ಕೇರಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೀವ್ರ ಬದಲಾವಣೆಗಳು ಮತ್ತು ಸ್ಥಳೀಯ ಬೇಡಿಕೆಯ ಹೆಚ್ಚಳದಿಂದಾಗಿ ಅಮೂಲ್ಯ ಲೋಹಗಳ ಬೆಲೆಗಳು ಉತ್ತುಂಗಕ್ಕೇರುತ್ತಿವೆ. ಇಂದು (ಶನಿವಾರ, ನ.29) ಬಂಗಾರ ಮತ್ತು ಬೆಳ್ಳಿ ಎರಡೂ ಬಂಪರ್ ಜಿಗಿತ ಸಾಧಿಸಿದ್ದು, ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ದಾಪುಗಾಲಿಟ್ಟಿವೆ!
ನವೆಂಬರ್ 29 ರಂದು, 22 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ ₹125 ರಷ್ಟು ಹಾಗೂ 24 ಕ್ಯಾರೆಟ್ ಚಿನ್ನದ ದರದಲ್ಲಿ ₹136 ರಷ್ಟು ಗಮನಾರ್ಹ ಹೆಚ್ಚಳವಾಗಿದೆ. ಹಬ್ಬಗಳು ಮತ್ತು ಮದುವೆಗಳ ಸೀಸನ್ ಬಿರುಸಿನಿಂದ ಕೂಡಿರುವ ಈ ಸಮಯದಲ್ಲಿ ಚಿನ್ನದ ದರವು ಏರಿಕೆಯಾಗಿರುವುದು, ಖರೀದಿದಾರರ ಜೇಬಿಗೆ ಭಾರೀ ಬಿಸಿ ಮುಟ್ಟಿಸಿದೆ. ಜನರು ಚಿನ್ನ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ!
ಬೆಳ್ಳಿ ಬೆಲೆ ಒಂದೇ ದಿನದಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ ₹9,000 ಜಿಗಿತಗೊಂಡು, ಬೆಲೆ ₹1,85,000 ತಲುಪಿದೆ.22 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹1,250 ಏರಿಕೆಯಾಗಿ, ₹1,19,150 ತಲುಪಿದೆ!24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹1,360 ಹೆಚ್ಚಾಗಿ, ಬೆಲೆ ₹1,29,970 ದಾಖಲಾಗಿದೆ!ಇಂದು ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದ್ದು, 1 ಗ್ರಾಂ ಗೆ 185 ರೂ ಇದ್ದು, 8 ಗ್ರಾಂ ಬೆಳ್ಳಿಗೆ 1,480 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 1,85,000 ರೂ. ಪಾವತಿಸಬೇಕು.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ
ನಗರ 22 ಕ್ಯಾರಟ್ (1 ಗ್ರಾಂ) 24 ಕ್ಯಾರಟ್ (1 ಗ್ರಾಂ)
ಚೆನ್ನೈ 11,900 ರೂ. 12,982 ರೂ.
ಮುಂಬೈ 11,900 ರೂ. 12,982 ರೂ.
ದಿಲ್ಲಿ 11,915 ರೂ. 12,997 ರೂ.
ಕೋಲ್ಕತಾ 11,900 ರೂ. 12,982 ರೂ.
ಹೈದರಾಬಾದ್ 11,900 ರೂ. 12,982 ರೂ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


