2019ರಲ್ಲಿ ಕೇರಳ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಶತಕ ಬಾರಿಸಿ ದಾಖಲೆ ಬರೆದಿದ್ದ ಲೂಸಿಫರ್ ಚಿತ್ರದ ಮುಂದುವರಿದ ಭಾಗ ಎಲ್ 2: ಎಂಪುರಾನ್ ಚಿತ್ರ ಮಾರ್ಚ್ 27ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಬಿಡುಗಡೆಗೂ ಮುನ್ನ ಬಾಲಿವುಡ್ ಚಿತ್ರಗಳ ಮುಂಗಡ ಬುಕಿಂಗ್ ದಾಖಲೆಯನ್ನು ಹೊಡೆದುರುಳಿಸಿದ್ದ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಎಂಪುರಾನ್ ಬಿಡುಗಡೆಯಾದ ನಂತರವೂ ನೂರು ಕೋಟಿ ದಾಟಿ ಅಬ್ಬರಿಸುತ್ತಿದೆ.
ಆದರೆ ಚಿತ್ರ ಬಿಡುಗಡೆಯಾದ ಬಳಿಕ ಹಿಂದೂಗಳ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರದ ಆರಂಭದಲ್ಲಿ ಹಿಂದೂಗಳು ಪ್ರಯಾಣಿಸುತ್ತಿದ್ದ ರೈಲೊಂದಕ್ಕೆ ಬೆಂಕಿ ಬೀಳಲಿದ್ದು, ಇದು ಥೇಟ್ ಗೋಧ್ರಾ ಹತ್ಯಾಕಾಂಡವನ್ನು ನೆನಪಿಸುವಂತಿದೆ. ಈ ದೃಶ್ಯದ ವಿರುದ್ಧ ಇದೀಗ ಹಿಂದೂಪರ ಕಾರ್ಯಕರ್ತರು ರೊಚ್ಚಿಗೆದ್ದಿದ್ದು, ಈ ದೃಶ್ಯಕ್ಕೆ ಕಾರಣ ಯಾರು ಎಂಬುದನ್ನು ಸ್ಪಷ್ಟವಾಗಿ ತೋರಿಸಿಲ್ಲ. ಆದರೆ ಮುಸ್ಲಿಂ ಕುಟುಂಬವೊಂದರ ಮೇಲಾಗುವ ದಾಳಿಯನ್ನು ಪರಿಪೂರ್ಣವಾಗಿ ಹೇಳಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಮುಸ್ಲಿಂ ಕುಟುಂಬಗಳ ಹತ್ಯೆಗೆ ಕಾರಣನಾಗಿದ್ದ ಬಾಬು ಭಜರಂಗಿ ಹೆಸರನ್ನು ಚಿತ್ರದಲ್ಲಿ ಬಾಬಾ ಭಜರಂಗಿ ಎಂದು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಅಂಶಗಳನ್ನೆಲ್ಲ ಇಟ್ಟುಕೊಂಡು ಚಿತ್ರದ ವಿರುದ್ಧ ತಿರುಗಿಬಿದ್ದ ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಈ ವಿರೋಧಕ್ಕೆ ಮಣಿದಿರುವ ಎಂಪುರಾನ್ ಚಿತ್ರತಂಡ ಚಿತ್ರದಲ್ಲಿನ 17 ದೃಶ್ಯಗಳಿಗೆ ಕತ್ತರಿ ಹಾಕಲು ಮುಂದಾಗಿದೆ. ಅಲ್ಲದೇ ಅನೇಕ ಡೈಲಾಗ್‌ಗಳಿಗೆ ಮ್ಯೂಟ್ ಹಾಕಲು ಸಹ ನಿರ್ಧರಿಸಿದೆ.
ಇನ್ನು ಚಿತ್ರದ ಪ್ರಮುಖ ಖಳನಾಯಕ ಬಾಬಾ ಭಜರಂಗಿ ಹೆಸರನ್ನು ಬದಲಿಸಲು ಸಹ ಒಪ್ಪಿಗೆ ನೀಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


