ಕಳೆದ ವರ್ಷ ಬಿಡುಗಡೆಗೊಂಡ ಮ್ಯಾಕ್ಸ್ ಸೂಪರ್ ಹಿಟ್ ಚಿತ್ರ. ಹಣಕಾಸು, ಹೆಸರು ಹಾಗೂ ಚಿತ್ರ ನೋಡಿದ ಪ್ರೇಕ್ಷಕರು ಹೀಗೆ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಕನ್ನಡದ ಕೊನೆಯ ಯಶಸ್ವಿ ಚಿತ್ರವಿದು. ಇದರ ಬಳಿಕ ಹಲವಾರು ಚಿತ್ರಗಳು ಬಿಡುಗಡೆಯಾದವಾದರೂ ಮ್ಯಾಕ್ಸ್ ಮಾಡಿದ ಹೆಸರು ಹಾಗೂ ಹಣ ಸಂಪಾದನೆಯಾಗಲೇ ಇಲ್ಲ.
ಪೊಲೀಸ್ ಠಾಣೆಯಲ್ಲಿ ನಡೆಯುವ ಒಂದು ರಾತ್ರಿಯ ಕಥೆಯನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತಂದಿದ್ದ ವಿಜಯ್ ಕಾರ್ತಿಕೇಯ ಸುದೀಪ್‌ಗೆ ಅದೆಷ್ಟೋ ದಿನಗಳ ಬಳಿಕ ಪರಿಪೂರ್ಣ ಬ್ಲಾಕ್‌ಬಸ್ಟರ್ ಚಿತ್ರವನ್ನು ನೀಡಿದ್ದರು. ಹೀಗೆ ಅಬ್ಬರಿಸಿದ್ದ ಮ್ಯಾಕ್ಸ್ ನಾಯಕ ಹಾಗೂ ನಿರ್ದೇಶಕನ ಜೋಡಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ.
ಹೌದು, ವಿಜಯ್ ಕಾರ್ತಿಕೇಯ ಜೊತೆ ಸುದೀಪ್ ಮತ್ತೊಂದು ಚಿತ್ರ ಮಾಡಲಿದ್ದಾರೆ ಎಂಬ ಮಾಹಿತಿ ಬಂದಿದ್ದು, ಇದು ಮ್ಯಾಕ್ಸ್ ಮುಂದುವರಿದ ಭಾಗ ಎನ್ನಲಾಗುತ್ತಿದೆ. ಮ್ಯಾಕ್ಸ್ ಚಿತ್ರಕ್ಕೆ ತಮಿಳಿನ ವಿ ಕ್ರಿಯೇಷನ್ ಮೂಲಕ ಕಲೈಪುಲಿ ಧನು ಬಂಡವಾಳ ಹೂಡಿದ್ದರು. ಮ್ಯಾಕ್ಸ್ 2ಗೆ ತಮಿಳಿನ ಸತ್ಯಜೋತಿ ಫಿಲ್ಮ್ಸ್ ಹಣ ಹಾಕಲಿದೆ.
ಇನ್ನು ಜುಲೈ 5ಕ್ಕೆ ಈ ಕುರಿತ ಅಧಿಕೃತ ಘೋಷಣೆ ನಡೆಯಲಿದ್ದು, ವಿಜಯ್ ಕಾರ್ತಿಕೇಯ ʼಮ್ಯಾಕ್ಸ್ 2ʼ ಮಾಡ್ತಾರಾ ಅಥವಾ ಬೇರೊಂದು ಸಿನಿಮಾ ಮಾಡ್ತಾರಾ ಎಂಬುದು ಬಹಿರಂಗವಾಗಲಿದೆ.
ಅಂಬೇಡ್ಕರ್ ಏನು ಕೊಟ್ಟಿಲ್ಲ ಅದು ನಮಗೆ ಬೇಕಾಗಿಲ್ಲ; ಸಂವಿಧಾನ ತಿದ್ದುಪಡಿ ಬಗ್ಗೆ ಅಶ್ವಥ್ ನಾರಾಯಣ್ ಹೇಳಿದ್ದಿಷ್ಟು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


