ವಯಸ್ಸಿನಲ್ಲಿ ತಮಗಿಂತ ಹಿರಿಯರನ್ನು ಮದುವೆಯಾದ ಹಲವು ಸುದ್ದಿಗಳನ್ನು ನಾವೆಲ್ಲ ಕಂಡಿದ್ದೇವೆ. ಅದರಲ್ಲೂ ತಮ್ಮ ವಯಸ್ಸಿಗಿಂತ ತೀವ್ರ ಹಿರಿಯರನ್ನು ವಿವಾಹವಾಗಿರುವ ಸನ್ನಿವೇಶಗಳನ್ನೂ ಸಹ ನೋಡಿದ್ದೇವೆ. ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ 21 ವರ್ಷದ ಯುವಕನೊಬ್ಬ ತನ್ನ ಅಜ್ಜಿಯನ್ನೇ ವಿವಾಹವಾಗಿದ್ದಾನೆ ಎಂಬ ಸುದ್ದಿ ವೈರಲ್ ಆಗಿದೆ.
ಹೌದು, ದ ಜೈಪುರ್ ಡೈಲಾಗ್ ಎಂಬ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಳ್ಳಲಾಗಿದ್ದು, ಹರಿಯಾಣದ ಸುಲ್ತಾನ ಖತೂನ್‌ನ 21 ವರ್ಷದ ಮೊಹಮ್ಮದ್ ಇರ್ಫಾನ್ ತನ್ನ ಅಜ್ಜಿಯನ್ನೇ ವಿವಾಹವಾಗಿದ್ದಾನೆ ಎಂದು ಪೋಸ್ಟ್ ಹಾಕಲಾಗಿದೆ. ಈ ಫೋಟೊದಲ್ಲಿ ಯುವಕನೋರ್ವ ವಯಸ್ಸಿನಲ್ಲಿ ತನಗಿಂತ ಹಿರಿಯ ಮಹಿಳೆ ಜೊತೆ ಮದುವೆ ವಸ್ತ್ರದಲ್ಲಿ ನಿಂತಿದ್ದಾನೆ.
ಆದರೆ ಅಸಲಿಗೆ ಈ ಸುದ್ದಿ ಸುಳ್ಳು. ಇನ್ಸ್ಟಾಗ್ರಾಮ್ ಬಳಕೆದಾರರು ರೀಲ್ಸ್‌ಗಾಗಿ ಮಾಡಿದ ವಿಡಿಯೊದ ಫೋಟೊ ಬಳಸಿಕೊಂಡು ಈ ರೀತಿ ತಾವೇ ಕಥೆ ಹುಟ್ಟಿಸಿದ್ದಾರೆ. ರೋಹಿತ್ ಹಾಗೂ ಶಾಂತಿ ಎಂಬುವರು ರೀಲ್ಸ್‌ಗಾಗಿ ಮಾಡಿದ್ದ ವಿಡಿಯೊ ಇದಾಗಿದ್ದು, ಇದಕ್ಕೆ ಮೊಹಮ್ಮದ್ ಇರ್ಫಾನ್ ಎಂದು ಹೇಳಿ ಕಥೆ ಬಿಟ್ಟಿದ್ದಾರೆ.
ಇದನ್ನೇ ನಂಬಿದ ನೆಟ್ಟಿಗರು ಶೇರ್ ಮಾಡುತ್ತಿದ್ದು, ಈ ನಕಲಿ ಪೋಸ್ಟ್ ಕಾಮೆಂಟ್‌ನಲ್ಲಿ ಕೋಮುಗಲಭೆಗಳು ಸಹ ನಡೆದಿವೆ. ಹೀಗೆ ಸಮಾಜ ಒಡೆಯುವ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಇಂತಹ ಮತ್ತಷ್ಟು ನಕಲಿ ಸುದ್ದಿಗಳು ಹುಟ್ಟಿ ಕೋಮುಗಲಭೆಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ.
ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಮ್ಯಾಕ್ಸ್ ನಿರ್ದೇಶಕನ ಜತೆ ಮತ್ತೆ ಸುದೀಪ್ ಸಿನಿಮಾ; ʼಮ್ಯಾಕ್ಸ್ 2ʼ ಇದೇನಾ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


