ಬೆಂಗಳೂರು: ನಿನ್ನೆ ( ಜೂನ್ 29 ) ನಗರದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಸ್ಕೇಟಿಂಗ್ ಗ್ರೌಂಡ್ ಬಳಿ ನಿಂತಿದ್ದ ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಬಳಿಕ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಮೃತಪಟ್ಟಿರುವ ಮಹಿಳೆ ಹೆಸರು ಆಶಾ ಎಂಬುದು ತಿಳಿದುಬಂತು.
ಮಾಹಿತಿ ದೊರೆತ ಕೂಡಲೇ ಪೊಲೀಸರಿಗೆ ಕೊಲೆಯ ರಹಸ್ಯವೂ ಸಹ ತಿಳಿದುಬಂದಿದೆ. ಮೊದಲಿಗೆ ಇದನ್ನು ಅತ್ಯಾಚಾರ ಹಾಗೂ ಕೊಲೆ ಎಂದೇ ಬಿಂಬಿಸಲಾಗಿತ್ತು. ಆದರೆ ಆಶಾಗೆ ಪರಿಚಯವಿರುವ ಮೊಹಮ್ಮದ್ ಸಂಶುದ್ದೀನ್ ಎಂಬಾತನೇ ಈಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದ ನಂತರ ಲವ್ ಜಿಹಾದ್ ಆರೋಪಗಳೂ ಸಹ ಕೇಳಿಬಂದವು.
ಆದರೆ ಅಸಲಿಯತ್ತಿಗೆ ಇದೊಂದು ಅಕ್ರಮ ಸಂಬಂಧಕ್ಕೆ ನಡೆದ ಕೊಲೆಯಾಗಿದೆ. ಮೃತ ಆಶಾ ತನ್ನ ಗಂಡನನ್ನು ಕಳೆದುಕೊಂಡು ಮಕ್ಕಳಿಬ್ಬರ ಜೊತೆ ವಾಸವಿದ್ದಳು. ಈ ಸಂದರ್ಭದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸಂಶುದ್ದೀನ್ ಪರಿಚಯವಾಗಿ, ಇಬ್ಬರ ನಡುವೆ ಸ್ನೇಹ, ಸಲುಗೆ ಬೆಳೆದಿದೆ.
ನಂತರ ಇಬ್ಬರೂ ಸಂಬಂಧ ಬೆಳೆಸಿದ್ದಾರೆ. ಅತ್ತ ಸಂಶುದ್ದೀನ್ ಸಹ ವಿವಾಹವಾಗಿದ್ದು, ಕುಟುಂಬವನ್ನು ಅಸ್ಸಾಂನಲ್ಲಿ ಇರಿಸಿ ಬೆಂಗಳೂರಿನ ಹುಳಿಮಾವುನಲ್ಲಿ ಮನೆ ಮಾಡಿಕೊಂಡು ವಾಸವಿದ್ದ. ಸಂಶುದ್ದೀನ್ ಹಾಗೂ ಆಶಾ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಬಾರಿ ಜಗಳ ಅತಿರೇಕಕ್ಕೆ ಹೋದಾಗ ಸಂಶುದ್ದೀನ್ ಆಶಾ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಶವವನ್ನು ಕಸದ ಲಾರಿಗೆ ಮೂಟೆ ಕಟ್ಟಿ ಎಸೆದು ಹೋಗಿದ್ದಾನೆ.
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Fact Check: ಸ್ವಂತ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಹಮ್ಮದ್ ಇರ್ಫಾನ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


