ಬೆಂಗಳೂರು:ಬನ್ನೇರುಘಟ್ಟ ಜೈವಿಕ ಉದ್ಯಾನವನವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಈ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ,ಇದೀಗ, ಪ್ರವಾಸಿಗರಿಗೆ ಸರ್ಕಾರ ಶಾಕ್ ನೀಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವದ ಪ್ರವೇಶ ಶುಲ್ಕವನ್ನು ಸರ್ಕಾರ ಏರಿಕೆ ಮಾಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ (BBP) ಆಡಳಿತ ಮಂಡಳಿಯು ಮೃಗಾಲಯ ಪ್ರವೇಶದ ಟಿಕೆಟ್ ದರಗಳನ್ನು ಪರಿಷ್ಕರಿಸಿದ್ದು, ಹೊಸ ದರಗಳು ಆಗಸ್ಟ್ 1, 2025ರಿಂದ ಜಾರಿಗೆ ಬರುವುದಾಗಿ ತಿಳಿಸಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ತಿಳಿಸಿದ್ದಾರೆ. ಪ್ರಾಣಿ ಆಹಾರ, ನಿರ್ವಹಣೆ, ಇಂಧನ ವೆಚ್ಚ ಮತ್ತು ಸಿಬ್ಬಂದಿ ವೇತನದಲ್ಲಿ ನಡೆದ ಹೆಚ್ಚಳದಿಂದ ದರ ಪರಿಷ್ಕರಣೆ ಅಗತ್ಯವಾಯಿತು.ಬಿಬಿಪಿ ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರಿಂದ ಬರುವ ಟಿಕೆಟ್ ಹಣವೇ ಅದರ ಪ್ರಮುಖ ಆದಾಯವಾಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಮೃಗಾಲಯ ಪ್ರಾಧಿಕಾರ ಶೇಕಡಾ 50ರಷ್ಟು ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಶೇಕಡಾ 20ರಷ್ಟು ಮಾತ್ರ ಅನುಮೋದನೆ ಲಭಿಸಿದೆ.ಮೃಗಾಲಯ ಹಾಗೂ ಚಿಟ್ಟೆ ಉದ್ಯಾನವನದ ಕಾಂಬೋ ಟಿಕೆಟ್ಗಳ ದರಗಳೂ ಪರಿಷ್ಕೃತವಾಗಿದ್ದು, ವಯಸ್ಕರಿಗೆ ₹90, ಮಕ್ಕಳಿಗೆ ₹70 ಮತ್ತು ಹಿರಿಯ ನಾಗರಿಕರಿಗೆ ₹100 ನಿಗದಿಯಾಗಿದೆ. ಆದರೆ, ಸಫಾರಿ ಮತ್ತು ಚಿಟ್ಟೆ ಉದ್ಯಾನವನ ಪ್ರವೇಶದ ಟಿಕೆಟ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಟಿಕೆಟ್ ದರಗಳು (ಆ.1, 2025ರಿಂದ ಜಾರಿಗೆ)
ಮೃಗಾಲಯ ಪರಿಷ್ಕತ ದರ
ವಯಸ್ಕರರು;₹120
ಮಕ್ಕಳು;₹60
ಹಿರಿಯ ನಾಗರಿಕರು;₹70
ಚಿಟ್ಟೆಗಳ ಪಾರ್ಕ್ ಪ್ರವೇಶ ದರ
ವಯಸ್ಕರರು;₹50
ಮಕ್ಕಳಿಗೆ;₹30
ಹಿರಿಯ ನಾಗರಿಕರಿಗೆ;₹30
ಮೃಗಾಲಯ ಮತ್ತು ಚಿಟ್ಟೆ ಪಾರ್ಕ್ ಎರಡೂ ಸೇರಿ
ವಯಸ್ಕರರು;₹170
ಮಕ್ಕಳಿಗೆ;₹90
ಹಿರಿಯ ನಾಗರಿಕರು;₹100
ಇತಿಹಾಸದ ಅತ್ಯಂತ ದುಬಾರಿ ಭೂಸರ್ವೇಕ್ಷಣಾ ಉಪಗ್ರಹ ನಿಸಾರ್ ಇಂದು ಬಾಹ್ಯಾಕಾಶದತ್ತ ಹಾರಾಟ
ಕೃಷಿ ಎಐ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


