ಬೆಂಗಳೂರು: ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಕೈತಪ್ಪಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಲ್ಲ. ನಮ್ಮವರಿಂದ ಸಿಎಂ ಸ್ಥಾನ ಕೈತಪ್ಪಿದ್ದು ಎಂದು ಖರ್ಗೆ ಅಂದಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1999ರಲ್ಲಿ ತನಗೆ ಸಿಎಂ ಸ್ಥಾನ ಕೈತಪ್ಪಿದೆ ಎಂದಿದ್ದಾರೆ. ಖರ್ಗೆ ನಮ್ಮವರಿಂದ ಸಿಎಂ ಸ್ಥಾನ ಕೈತಪ್ಪಿದ್ದು ಅಂದಿದ್ದಾರೆ. ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಕೈತಪ್ಪಿದೆ ಎಂದಿಲ್ಲ. ಖರ್ಗೆಯನ್ನು ರಾಷ್ಟ್ರ ರಾಜಕೀಯಕ್ಕೆ ಕಳುಹಿಸಿದ್ದು ಹೈಕಮಾಂಡ್. ಪವರ್ ಸೆಂಟರ್ ಹೆಚ್ಚಾಗಬಾರದೆಂದು ದೆಹಲಿಗೆ ಕಳಿಸಿತ್ತು. ವಾಪಸ್ ರಾಜ್ಯಕ್ಕೆ ಕಳುಹಿಸಬೇಕಾದರೇ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯರಿಂದ ಶಾಸಕರ ಸಭೆಗೆ ಡಿಕೆಶಿಯನ್ನು ಯಾಕೆ ಕರೆದಿಲ್ಲ ಎಂಬ ವಿಚಾರ ಕುರಿತು ಮಾತನಾಡಿದ ಅವರು, ಬೆಂಗಳೂರು ಶಾಸಕರನ್ನು ಕೈಬಿಟ್ಟಿಲ್ಲ. ಹಂತ ಹಂತವಾಗಿ ಸಭೆ ನಡೆಯಲಿದೆ. ಸುರ್ಜೇವಾಲಾ ಮೊದಲು ಬೆಂಗಳೂರು ಶಾಸಕರ ಸಭೆ ನಡೆಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ಮೊದಲು ಜಿಲ್ಲಾವಾರು ಸಭೆ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಸಭೆ ಕರೆಯುವ ಬಗ್ಗೆ ಅವರೇ ತೀರ್ಮಾನಿಸಲಿ ಎಂದು ಹೇಳಿದರು.
ಇನ್ನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರ ಪರ ಹೆಚ್ಚು ಮತ ಬರುತ್ತೋ ಅವರು ಅಧ್ಯಕ್ಷರಾಗುತ್ತಾರೆ. ಇದು ಪಕ್ಷದ ಚುನಾವಣೆ ಅಲ್ಲ. ಡಿ.ಕೆ.ಸುರೇಶ್ ಆದರೂ ಇಲ್ಲಿ ಪಕ್ಷ ಬರಲ್ಲ. ಸಹಕಾರಿ ಚುನಾವಣೆ ಇದು. ಸರ್ಕಾರ ಇದ್ದಾಗ ಕೂಡ ವಿರೋಧ ಪಕ್ಷದಿಂದ ಅಧ್ಯಕ್ಷರಾಗಿದ್ದಾರೆ. ಸರ್ಕಾರ ಇದ್ದರೂ ಕೂಡ ಮೆಜಾರಿಟಿ ಮುಖ್ಯವಾಗುತ್ತದೆ ಎಂದರು.
ಜಮ್ಮು- ಕಾಶ್ಮೀರ: ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


