Wednesday, September 2, 2026
spot_img
More
    spot_img
    HomeStateDistrictಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದಲ್ಲಿ ಅಗೆದರೂ ಸಿಗಲಿಲ್ಲ ಅಸ್ತಿಪಂಜರ; ಬರಿಗೈನಲ್ಲಿ ಹಿಂದಿರುಗಿದ ಎಸ್‌ಐಟಿ ಅಧಿಕಾರಿಗಳು

    ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದಲ್ಲಿ ಅಗೆದರೂ ಸಿಗಲಿಲ್ಲ ಅಸ್ತಿಪಂಜರ; ಬರಿಗೈನಲ್ಲಿ ಹಿಂದಿರುಗಿದ ಎಸ್‌ಐಟಿ ಅಧಿಕಾರಿಗಳು

    ಬೆಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವಗಳನ್ನು ಹೂಳಲಾದ ಜಾಗಗಳ ಉತ್ಪನನ ಪ್ರಕ್ರಿಯೆಯನ್ನು ವಿಶೇಷ ತನಿಖಾ ದಳ ಆರಂಭಿಸಿದ್ದು ಮೊದಲ ದಿನ ನೇತ್ರಾವತಿ ಸ್ನಾನ ಘಟ್ಟದ ಪಕ್ಕದಲ್ಲಿ ಗುರುತಿಸಿದ್ದ ಸ್ಥಳವನ್ನು ಅಗೆ ಯಲಾಯಿತು. ಆದರೆ, 8 ಅಡಿ ಆಳ ಅಗೆದರೂ ಯಾವುದೇ ಅಸ್ಥಿ ಪಂಜರ ಸಿಗಲಿಲ್ಲ. ಹಾಗಾಗಿ ಎಸ್‌ಐಟಿ ಅಧಿಕಾರಿಗಳು ಬರಿಗೈಲಿ ವಾಪಸ್ ಆಗಿದ್ದಾರೆ.

    Advertisement

    ಮೊದಲಿಗೆ ಕಾರ್ಮಿಕರ ಮೂಲಕ ಸಮಾಧಿಯನ್ನು 4 ಅಡಿಗಳಷ್ಟು ಅಗೆಯ ಲಾಗಿತ್ತು. ನಂತರ ಜೆಸಿಬಿ ಮೂಲಕ 8 ಅಡಿ ಯವರೆಗೂ ಅಗೆದರೂ ಯಾವುದೇ ಅಸ್ಥಿ ಪಂಜರ ಪತ್ತೆಯಾಗಿಲ್ಲ. ಹೀಗಾಗಿ ಮೊದಲ ಸಮಾಧಿ ಸ್ಥಳದ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.

    ದೂರುದಾರ ವ್ಯಕ್ತಿ 6 ಅಡಿಗಳಷ್ಟು ಆಳದಲ್ಲಿ ಶವ ಹೂತಿರುವುದಾಗಿ ಹೇಳಿದ್ದರು. ಆದರೆ 6 ಅಡಿಯಲ್ಲಿ ಯಾವುದೇ ಅಸ್ಥಿಪಂಜರ ಸಿಗದ ಕಾರಣ 8 ಅಡಿ ಅಗೆಯಲಾಗಿತ್ತು. ಹೀಗಾಗಿ ಈ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳ ಅಗೆಯುವ ಕಾರ್ಯ ಇಂದು ( ಜುಲೈ 30 ) ಆರಂಭಗೊಳ್ಳಲಿದೆ.

    ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಲಾದ ಅನಾಮಧೇಯ ವ್ಯಕ್ತಿಯ ಹೇಳಿಕೆಗಳನ್ನು ಆಧರಿಸಿ ಸೋಮವಾರ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿ 13 ಜಾಗಗಳನ್ನು ಗುರುತಿಸಿದ್ದರು. ರಸ್ತೆಬದಿಯಲ್ಲಿನ ಖಾಲಿ ಜಾಗವೂ ಸೇರಿದಂತೆ13 ಕಡೆ ಕೊಲೆಯಾದವರ ಶವಗಳನ್ನು ಹೂತಿಟ್ಟಿದ್ದಾಗಿ ಅನಾಮಧೇಯ ವ್ಯಕ್ತಿ ತಿಳಿಸಿದ್ದರು.

    ಅದನ್ನು ಆಧರಿಸಿ ನಿನ್ನೆ ಬೆಳಿಗ್ಗೆ ನೇತ್ರಾವತಿ ನದಿಯ ದಡದಲ್ಲಿರುವ ಜಾಗವೊಂದರಲ್ಲಿ ಉತ್ಖನನ ನಡೆಸಲಾಯಿತು. ಎಫ್‌ಎಸ್‌ಎಲ್ ಅಧಿಕಾರಿಗಳು, ನಾಲ್ವರು ವೈದ್ಯಾಧಿಕಾರಿಗಳು, ಸಹಾಯಕ ಸಿಬ್ಬಂದಿಗಳು, ಅರಣ್ಯಾಧಿ ಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳನ್ನು ಬೆಳಿಗ್ಗೆ ತಹಸಿಲ್ದಾ‌ ಕಚೇರಿಗೆ ಕರೆಸಿಕೊಂಡು ತಂಡಗಳನ್ನಾಗಿ ರಚಿಸಲಾಯಿತು. ಶವ ಹೂತಿಟ್ಟ ಸ್ಥಳಗಳನ್ನು ಅಗೆಯಲು 12 ಕಾರ್ಮಿಕರ ತಂಡವೊಂದನ್ನು ಗ್ರಾ.ಪಂ. ವತಿಯಿಂದ ವ್ಯವಸ್ಥೆ ಮಾಡಲಾಗಿದೆ.

    ದೇಶದಲ್ಲಿ ಸಾಮಾನ್ಯಕ್ಕಿಂತ ಶೇ 7ರಷ್ಟು ಹೆಚ್ಚಿನ ಮಳೆ; ಹವಾಮಾನ ಇಲಾಖೆ ಮಾಹಿತಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading