ನಿನ್ನೆ (ಅಕ್ಟೋಬರ್ 29) ಅಲ್ಪ ಏರಿಕೆ ಕಂಡಿದ್ದ ಚಿನ್ನದ ಬೆಲೆ, ಇಂದು (ಅಕ್ಟೋಬರ್ 30, 2025) ಮತ್ತೆ ಇಳಿಕೆಯತ್ತ ಸಾಗಿದೆ. ಚಿನ್ನಾಭರಣ ಪ್ರಿಯರಿಗೆ ಇದು ಸಿಹಿ ಸುದ್ದಿಯಾಗಿದ್ದು, ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ ₹1910 ರಷ್ಟು ಕಡಿಮೆಯಾಗಿದೆ.
ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 175 ರೂ. ಇಳಿಕೆ ಕಂಡು ಬಂದಿದ್ದು, 11,045 ರೂ. ಗೆ ತಲುಪಿದೆ. 24 ಕ್ಯಾರಟ್ 1 (Gold Price) ಗ್ರಾಂ ಚಿನ್ನದ ದರದಲ್ಲಿ 191 ರೂ. ಇಳಿಕೆಯಾಗಿ, 12,049 ರೂ ಆಗಿದೆ. 22 ಕ್ಯಾರಟ್ನ 8 ಗ್ರಾಂ ಚಿನ್ನ 88,360 ರೂ. , 10 ಗ್ರಾಂಗೆ ನೀವು 1,10,450 ಹಾಗೂ 100 ಗ್ರಾಂಗೆ 11,04,500 ನೀಡಬೇಕಾಗುತ್ತದೆ. 24 ಕ್ಯಾರಟ್ನ 8 ಗ್ರಾಂ ಚಿನ್ನಕ್ಕೆ 96,392 ರೂ. ಆದರೆ, 10 ಗ್ರಾಂಗೆ ನೀವು 1,20,490 ರೂ. ಹಾಗೂ 100 ಗ್ರಾಂಗೆ 12,04,900 ರೂ. ಪಾವತಿಸಬೇಕಾಗುತ್ತದೆ.
| ನಗರ | 22 ಕ್ಯಾರೆಟ್ (1 ಗ್ರಾಂ) | 24 ಕ್ಯಾರೆಟ್ (1 ಗ್ರಾಂ) |
|---|---|---|
| ಚೆನ್ನೈ | 11,045 ರೂ. | 12,049 ರೂ. |
| ಮುಂಬೈ | 11,045 ರೂ. | 12,049 ರೂ. |
| ದಿಲ್ಲಿ | 11,064 ರೂ. | 12,060 ರೂ. |
| ಕೋಲ್ಕತಾ | 11,045 ರೂ. | 12,049 ರೂ. |
| ಹೈದರಾಬಾದ್ | 11,045 ರೂ. | 12,049 ರೂ. |
ಬೆಳ್ಳಿ ದರ
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 151 ರೂ. ಇದ್ದರೆ, 8 ಗ್ರಾಂಗೆ 1,208 ಹಾಗೂ 10 ಗ್ರಾಂಗೆ 1,510 ರೂ. ಮತ್ತು 1 ಕೆಜಿಗೆ 1,51,000 ರೂ. ಇದೆ.
ರೈಲ್ವೇಯಲ್ಲಿ ಪದವೀಧರರಿಗೆ 5,810 NTPC ಹುದ್ದೆಗಳ ಬಂಪರ್ ಆಫರ್! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


