ಜಾತಿಗಣತಿ ಅಥವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಅಕ್ಟೋಬರ್ 31ಕ್ಕೆ ಅಂತ್ಯವಾಗಲಿದೆ. ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡ ಸಮೀಕ್ಷಾದಾರರ ಮತ್ತು ಮೇಲ್ವಿಚಾರಕರಿಗೆ ಸಂಭಾವನೆ ನೀಡುವ ಕುರಿತು ಮಾಹಿತಿಯನ್ನು ಕೇಳಲಾಗಿದೆ.
ಸದಸ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಧಿಕಾರಿಗಳು (ದಾವಣಗೆರೆ ಮತ್ತು ಮೈಸೂರು ಜಿಲ್ಲೆ ಹೊರತುಪಡಿಸಿ) ಈ ಕುರಿತು ನೆನಪೋಲೆ-1 ಕಳಿಸಿದ್ದಾರೆ.
ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಿರುವ ಸಮೀಕ್ಷೆದಾರರ ಮತ್ತು ಮೇಲ್ವಿಚಾರಕರ ಮಾಹಿತಿಯನ್ನು ಒದಗಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಸರ್ಕಾರದ ಆದೇಶಗಳನ್ನು ಉಲ್ಲೇಖ ಮಾಡಲಾಗಿದೆ.
ಆದೇಶದ ವಿವರ: ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರಿಗೆ ಗೌರವ ಧನವನ್ನು ನಿಗದಿಪಡಿಸಿ ಆದೇಶಿಸಿದೆ.
ಸಮೀಕ್ಷಾದಾರರು. Lump-sum ರೂ. 5000 ಹಾಗೂ ಪ್ರತಿ ಮನೆ ಸಮೀಕ್ಷೆಗೆ ರೂ. 100 ರಂತೆ. ಮೇಲ್ವಿಚಾರಕರು ರೂ. 10,000. ಸಮೀಕ್ಷಾದಾರರಿಗೆ ಗೌರವ ಧನ ಪಾವತಿಸಲು ಮೊದಲನೇ ಕಂತಿನಲ್ಲಿ ತಲಾ ರೂ. 5,000 ದಂತೆ ಅನುದಾನ ಬಿಡುಗಡೆ ಮಾಡಲಾಗಿದೆ.
ಸಮೀಕ್ಷೆದಾರರಿಗೆ ಬಾಕಿ ಮೊತ್ತ ಹಾಗೂ ಮೇಲ್ವಿಚಾರಕರಿಗೆ ಸಿಗದಿಪಡಿಸಿದ ಗೌರವ ಧನವನ್ನು ಬಿಡುಗಡೆ ಮಾಡಬೇಕಾಗಿದ್ದು, ನಿಗದಿತ ನಮೂನೆಯಲ್ಲಿ ಮಾಹಿತಿ ಒದಗಿಸಲು ಕೋರಲಾಗಿರುತ್ತದೆ.
ಆದರೆ ದಾವಣಗೆರೆ ಮತ್ತು ಮೈಸೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಂದ ಇದುವರೆಗೆ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಕೋರಿರುವ ಮಾಹಿತಿಯನ್ನು ಅತೀ ಜರೂರು ಎಂದು ಪರಿಗಣಿಸಿ, ನಮೂನೆಯಲ್ಲಿ ಮಾಹಿತಿಯನ್ನು ಕಳುಹಿಸಲು ಮತ್ತೊಮ್ಮೆ ಕೋರಿದೆ.
ನಮೂನೆಯ ವಿವರ: ತಾಲೂಕುಗಳು ಒಟ್ಟು. ಒಟ್ಟು ಬ್ಲಾಕ್‌ಗಳ ಸಂಖ್ಯೆ, ಒಟ್ಟು ಸಮೀಕ್ಷಾದಾರರ ಸಂಖ್ಯೆ, ಸಮೀಕ್ಷಾದಾರರು ಮಾಡಿರುವ ಮನೆಗಳ ಸಂಖ್ಯೆ, ಒಟ್ಟು ಮೇಲ್ವಿಚಾರಕರ ಸಂಖ್ಯೆಯನ್ನು ಕಳಿಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಸಂಗ್ರಹವಾಗುವ ದತ್ತಾಂಶದಿಂದ ನೂತನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆಪ್ಟೆಂಬರ್ 22 ರಿಂದ ಸಮೀಕ್ಷೆ ಆರಂಭಿಸಿತ್ತು. ದಸರಾ ರಜೆ ಅವಧಿಯಲ್ಲಿ ಅದನ್ನು ಮುಗಿಸಲು ಅಕ್ಟೋಬರ್ 7ರ ಗಡುವು ನೀಡಲಾಗಿತ್ತು. ಆದರೆ ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಅಕ್ಟೋಬರ್ 18ರ ತನಕ ಸಮೀಕ್ಷೆಯನ್ನು ವಿಸ್ತರಣೆ ಮಾಡಲಾಗಿತ್ತು.
ಆದರೆ ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ಇನ್ನೂ ಬಾಕಿ ಇದ್ದ ಕಾರಣ ಅಕ್ಟೋಬರ್ 31ರ ತನಕ ಸಮೀಕ್ಷೆ ವಿಸ್ತರಣೆ ಮಾಡಲಾಗಿದೆ. ಆದರೆ 3ನೇ ಹಂತದ ಸಮೀಕ್ಷೆ ವಿಸ್ತರಣೆ ಮಾಡುವಾಗ ಶಾಲಾ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ. ವಿವಿಧ ಇಲಾಖೆಗಳ ಸಿಬ್ಬಂದಿಗಳು ಸಮೀಕ್ಷೆಯಲ್ಲಿ ತೊಡಗಿದ್ದು, ಶಿಕ್ಷಕರು ಶಾಲೆಗಳಿಗೆ ವಾಪಸ್ ಆಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


