Monday, August 31, 2026
spot_img
More
    spot_img
    HomeLatest newsಸ್ವಾಮೀಜಿಗಳು ರಾಜಕೀಯ ಮಾಡಬೇಡಿ; ಕುಮಾರಸ್ವಾಮಿ ಕಿಡಿ

    ಸ್ವಾಮೀಜಿಗಳು ರಾಜಕೀಯ ಮಾಡಬೇಡಿ; ಕುಮಾರಸ್ವಾಮಿ ಕಿಡಿ

    ಬೆಂಗಳೂರು: ರಾಜಕೀಯ ಮಾಡುವವರಿಗೆ ರಾಜಕಾರಣ ಮಾಡಲು ಬಿಟ್ಟುಬಿಡಿ ದಯವಿಟ್ಟು ಸಮಾಜದ ಸ್ವಾಮೀಜಿಗಳು ರಾಜಕಾರಣ ಮಾಡುವುದು ಬೇಡ ಧರ್ಮದ ಬಗ್ಗೆ ಮಾತನಾಡಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.

    Advertisement

    ಖಾಸಗಿ ಹೋಟೆಲ್‍ನಲ್ಲಿ ನಡೆದ ಎನ್.ಡಿ.ಎ ಸಮನ್ವಯ ಸಮಿತಿಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಕುರಿತಂತೆ ಇತ್ತೀಚೆಗೆ ಕೆಲವು ಮಠಾಧೀಶರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ನೀವು ಸಮಾಜ ಸುಧಾರಕರು, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಎಂದು ಮನವಿ ಮಾಡಿದರು.

    ನಾನು ಎಲ್ಲ ಸಮಾಜದ ಸ್ವಾಮೀಜಿಗಳಿಗೆ ಮನವಿ ಮಾಡುವುದು ಇಷ್ಟೇ, ರಾಜಕಾರಣ ಮಾಡುವವರಿಗೆ ರಾಜಕಾರಣ ಬಿಡಿ. ನೀವು ಧರ್ಮದ ಬಗ್ಗೆ ಮಾತನಾಡಿ ರಾಜಕಾರಣದ ವ್ಯಾಮೋಹ ಇರಬಾರದು. ಒಬ್ಬರ ಹೇಳಿಕೆಯಿಂದ ಮತ್ತೊಬ್ಬ ಸ್ವಾಮೀಜಿ ಮಾತನಾಡುತ್ತಾರೆ. ಇದರಿಂದ ಸಮಾಜದಲ್ಲಿ ಸಂಘರ್ಷ ಎಡೆ ಮಾಡಿಕೊಡುತ್ತದೆ ಮತ್ತು ಸೌಹಾರ್ದತೆ ಹಾಳಾಗುತ್ತದೆ. ಜಾತಿ ಜಾತಿಗಳ ನಡುವೆ ಸಂಘರ್ಷ ಆಗಬಾರದು. ನನ್ನ ಮಾತನ್ನು ಯಾರು ಕೂಡ ತಪ್ಪಾಗಿ ಭಾವಿಸಬಾರದು ಎಂದು ಅವರು ಹೇಳಿದರು.

    ನಾನು ನಮ ಒಕ್ಕಲಿಗರ ಸಮುದಾಯದ ಸ್ವಾಮೀಜಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಜೊತೆಗೆ ಹಲವಾರು ಸ್ವಾಮೀಜಿಗಳ ಹೇಳಿಕೆಗಳನ್ನು ನೋಡುತ್ತಿದ್ದೇನೆ. ಇದು ನಿಮ ನಿಮ ವೈಯಕ್ತಿಕ ಅಭಿಪ್ರಾಯ ಹೊರತು ಸಮಾಜದ ತೀರ್ಮಾನವಲ್ಲ. ರಾಜಕಾರಣದಲ್ಲಿ ಧರ್ಮ ತರುವುದು ಬೇಡ ಎಂಬುದು ನನ್ನ ಸ್ಪಷ್ಟ ನಿಲುವು ಎಂದರು.

    ಕಾಂಗ್ರೆಸ್ ನಾಯಕರ ನಡುವಳಿಕೆಗಳಿಂದ ಇಂತಹ ಸಮಸ್ಯೆಗಳು ಉದ್ಭವವಾಗುತ್ತವೆ . ಯಾವುದೇ ಸ್ವಾಮೀಜಿಗಳು ಯಾವುದೇ ಸಮಾಜಕ್ಕೆ ಸೇರಿದವರಾಗಿರಲಿ ರಾಜಕಾರಣವನ್ನು ರಾಜಕಾರಣಿಗಳು ಮಾಡಲಿ. ನೀವು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ನಮಗೆ ಸರಿಪಡಿಸಿಕೊಳ್ಳುವಂತೆ ಸಲಹೆ ಮಾಡಿ, ಇದು ಯಾರಿಗೂ ಬೇಡ ಎಂದು ಅವರು ಮನವಿ ಮಾಡಿದರು.

    ಜಾತಿ ಹೆಸರಿನಿಂದ ಅಲ್ಲ, ಆರೂವರೆ ಕೋಟಿ ಕನ್ನಡಿಗರು ಆಯ್ಕೆ ಮಾಡುತ್ತಾರೆ. ಇದರಲ್ಲಿ ಯಾರೊಬ್ಬರು ಯಾವುದೇ ಸಮಾಜದ ಮಠಾಧೀಶರನ್ನು ಎಳೆದು ತರಬಾರದು. ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಸ್ವಾಮೀಜಿಗಳನ್ನು ನನ್ನ ಕುರ್ಚಿ ಉಳಿಸಿಕೊಳ್ಳಲು ಎಳೆದ ತರಲಿಲ್ಲ ಮುಂದೆಯೂ ಅಂತಹ ಕೆಲಸ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಬಿಜೆಪಿ-ಜೆಡಿಎಸ್‍ನವರು ಸುಳ್ಳುಗಾರರು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಕೆಂಡಮಂಡಲವಾದ ಕುಮಾರಸ್ವಾಮಿ, ಈ ರಾಜ್ಯದಲ್ಲಿ ಸಿದ್ದರಾಮಯ್ಯ ಮಾತ್ರ ಮಹಾನ್ ಸತ್ಯಹರಿಶ್ಚಂದ್ರರು, ನಾವೆಲ್ಲ ಸುಳ್ಳುಗಾರರು. ಸತ್ಯಹರಿಶ್ಚಂದ್ರ ಹೋಗಬೇಕಾದಾಗ ಸಿದ್ದರಾಮಯ್ಯನ ಹುಂಡಿಯಿಂದಲೇ ಹೋಗಿರಬೇಕು. ಅವರೊಬ್ಬರೇ ಸತ್ಯಹರಿಶ್ಚಂದ್ರರು ನಾವು ಸುಳ್ಳುಗಾರರ ಎಂದು ಪ್ರಶ್ನೆ ಮಾಡಿದರು.

    ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಪೋಲಿಸ್ ಇಲಾಖೆಯನ್ನು ಹಗಲು ದರೋಡೆ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. 2016ರಲ್ಲೂ ದರೋಡೆ ಮಾಡಿದ್ದರು. ಈಗ ಪುನಃ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿ ಹಾಡು ಹಗಲೇ ಎಟಿಎಂಗೆ ತುಂಬ ಬೇಕಾಗಿದ್ದ ಏಳು ಕೋಟಿ ಹಣವನ್ನು ಪೊಲೀಸರ ಭಯವಿಲ್ಲದೆ ದರೋಡೆ ಮಾಡಿದ್ದಾರೆ. ಆ ವಾಹನಕ್ಕೆ ಜಿಪಿಎಸ್ ಇದ್ದಿದ್ದರಿಂದ ಪತ್ತೆಯಾಯಿತು. ಇಲ್ಲದಿದ್ದರೆ, ಈ ಹಣ ಎಲ್ಲಿಗೆ ಹೋಗುತ್ತಿತ್ತು. ಇದರ ಬಗ್ಗೆ ಚರ್ಚೆ ಆಗಬೇಕಲ್ಲವೆಂದು ಅವರು ಪ್ರಶ್ನೆ ಮಾಡಿದರು.

    ಪರಪ್ಪನ ಅಗ್ರಹಾರದಲ್ಲೂ ಅಧ್ವಾನವಾಗಿದೆ. ಗೃಹ ಸಚಿವರು ಅಲ್ಲಿಗೆ ಹೋದ ಮೇಲೆ ಮತ್ತೊಬ್ಬ ಸಚಿವ ಜೈಲಿಗೆ ಭೇಟಿ ಕೊಟ್ಟಿದ್ದರು. ಅಲ್ಲಿಗೆ ಅವರು ಹೋಗಲು ಕಾರಣ ಏನು ಇವರಿಗೂ ಅವರಿಗೂ ಏನು ಸಂಬಂಧ ಇದರ ಬಗ್ಗೆಯೂ ತನಿಖೆಯಾಗಬೇಕೆಂದು ಅವರು ಒತ್ತಾಯಿಸಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading