ಪ್ರಸ್ತುತ ನಡೆಯುತ್ತಿರುವ 18ನೇ ಐಪಿಎಲ್ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕೊಲ್ಕತ್ತಾ ನೈರ್ ರೈಡರ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು.
ಹೀಗೆ ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಏಪ್ರಿಲ್ 2ರಂದು ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿರುವ ಆರ್ಸಿಬಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ಪಂದ್ಯವನ್ನಾಡಲಿದೆ.
ಹೀಗೆ ಒಳ್ಳೆಯ ಆರಂಭ ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕನ್ನಡದ ಖ್ಯಾತ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿಕ್ಕಿಪೀಡಿಯಾ ಸೇರ್ಪಡೆಗೊಂಡಿದ್ದಾರೆ. ತಂಡದ ಕುರಿತು ಮನರಂಜನೆಯುತ ವಿಡಿಯೊಗಳನ್ನು ಮಾಡುವ ಸಲುವಾಗಿ ವಿಕ್ಕಿಪೀಡಿಯಾ ಅವರನ್ನು ಆರ್ಸಿಬಿ ಸೇರಿಸಿಕೊಂಡಿದೆ.
ಇದಕ್ಕಾಗಿ ವಿಶೇಷ ವಿಡಿಯೊ ಬಿಡುಗಡೆ ಮಾಡಲಾಗಿದ್ದು, ವಿಕ್ಕಿಪೀಡಿಯಾ ‘ಸೋಮು ಅಂಕಲ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ನಿಂತಿದ್ದ ಸೋಮು ಅಂಕಲ್ ಅನ್ನು ಕಂಡ ಸೆಕ್ಯೂರಿಟಿ ಈ ಅಂಕಲ್ ಹೇಗೆ ಆರ್ಸಿಬಿ ತಂಡ ಸೇರಿದರು ಎಂದು ಪ್ರಶ್ನೆ ಹಾಕುತ್ತಾರೆ.
ಆ ಸಂದರ್ಭದಲ್ಲಿ ಸೋಮು ಅಂಕಲ್ ಅನ್ನು ಆರ್ಸಿಬಿ ಸಂದರ್ಶನ ಮಾಡಿದ್ದು, ನಿಮ್ಮನ್ನು ಯಾವ ಕಾರಣಕ್ಕೆ ತಂಡ ಸೇರಿಸಿಕೊಳ್ಳಬೇಕು ಹೇಳಿ ಎಂದು ಪ್ರಶ್ನೆಗಳನ್ನು ಕೇಳುತ್ತಾರೆ. ತಂಡದ ಹೆಚ್ಚು ಮೊತ್ತ ಹಾಗೂ ಕಡಿಮೆ ಮೊತ್ತ, ಎಬಿಡಿ ಪೂರ್ತಿ ಹೆಸರು, 2013ರ ಐಪಿಎಲ್ನಲ್ಲಿ ತಂಡದಲ್ಲಿದ್ದ ಆಟಗಾರರ ಹೆಸರಿನ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸೋಮು ಅಂಕಲ್ ಸರಿಯಾದ ಪ್ರಶ್ನೆ ಕೇಳುತ್ತಾರೆ. ಅಲ್ಲದೇ ಆರ್ಸಿಬಿಯ ಬೆಸ್ಟ್ ಪ್ಲೇಯರ್ ಯಾರು ಎಂಬ ಪ್ರಶ್ನೆಯನ್ನೂ ಸಹ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸೋಮು ಅಂಕಲ್ ಆರ್ಸಿಬಿಯಲ್ಲಿ ಎಲ್ಲರೂ ತಂಡಕ್ಕಾಗಿ ಆಡ್ತಾರೆ, ಹೀಗಾಗಿ ತಂಡದ ಎಲ್ಲ ಆಟಗಾರರೂ ಸಹ ಬೆಸ್ಟ್ ಪ್ಲೇಯರ್ ಎಂದರು. ಈ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಆರ್ಸಿಬಿ ಮ್ಯಾನೇಜ್ಮೆಂಟ್ ಸೋಮು ಅಂಕಲ್ಗೆ ಆರ್ಸಿಬಿ ಸೇರಲು ಒಪ್ಪಿಕೊಂಡಿದೆ.
ಹೀಗೆ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ ಸೋಮು ಅಂಕಲ್ಗೆ ಬ್ಲೂಟೂತ್ ಮೂಲಕ ದಿನೇಶ್ ಕಾರ್ತಿಕ್ ಉತ್ತರಗಳನ್ನು ಹೇಳಿಕೊಡುವ ಮೂಲಕ ತಂಡ ಸೇರಲು ಸಹಾಯ ಮಾಡಿದ್ದಾರೆ. ಇಬ್ಬರೂ ಸೇರಿ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಮೋಸ ಮಾಡಿ ತಂಡ ಸೇರುವ ರೀತಿ ವಿಡಿಯೊ ಕಾನ್ಸೆಪ್ಟ್ ಅನ್ನು ಮಾಡಲಾಗಿದೆ. ಹೀಗೆ ಹೊಸ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾರನ್ನು ಘೋಷಣೆ ಮಾಡುವ ವಿಭಿನ್ನ ವಿಡಿಯೊವನ್ನು ಆರ್ಸಿಬಿ ಬಿಡುಗಡೆಗೊಳಿಸಿದೆ.
ಇನ್ನು ಕನ್ನಡದ ಈ ಕಲಾವಿದನನ್ನು ಆರ್ಸಿಬಿ ತನ್ನ ತಂಟದ ಪ್ರಚಾರಕನಾಗಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಕನ್ನಡಿಗರು ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


