ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಸಲು ಇಂದು ( ಮಾರ್ಚ್ 31 ) ಕೊನೆಯ ದಿನವಾಗಿದೆ. ಹೀಗಾಗಿ ನಗರದಾದ್ಯಂತ ಇರುವ ಆಸ್ತಿ ಮಾಲೀಕರು ಕೊನೆಯ ದಿನದಂದು ಆಸ್ತಿ ತೆರಿಗೆ ಕಟ್ಟಿ ದಂಡದಿಂದ ತಪ್ಪಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.
ಹೌದು, ಇಂದು ಆಸ್ತಿ ತೆರಿಗೆ ಪಾವತಿಸಲು ಕೊನೆಯ ದಿನವಾಗಿದ್ದು, ಒಂದುವೇಳೆ ಇಂದು ತೆರಿಗೆಯನ್ನು ಪಾವತಿ ಮಾಡುವಲ್ಲಿ ವಿಫಲವಾದರೆ ನಾಳೆಯಿಂದ ತೆರಿಗೆ ಜೊತೆಗೆ 100% ದಂಡವನ್ನೂ ಸಹ ಪಾವತಿ ಮಾಡಬೇಕಾಗುತ್ತದೆ.
ಉದಾಹರಣೆಗೆ ನಿಮ್ಮ ಆಸ್ತಿ ತೆರಿಗೆ 1000 ರೂಪಾಯಿಗಳಿದ್ದು, ಇಂದು ಅದನ್ನು ಪಾವತಿ ಮಾಡದಿದ್ದರೆ, ನಾಳೆಯಿಂದ ಅದಕ್ಕೆ 1000 ರೂಪಾಯಿ ದಂಡ ಬೀಳಲಿದೆ. ಅಲ್ಲದೇ ವಾರ್ಷಿಕ 15% ಬಡ್ಡಿಯನ್ನೂ ಸಹ ಕಟ್ಟಬೇಕಾಗುತ್ತದೆ.
ಇನ್ನು ಸದ್ಯ 100% ಇರುವ ಆಸ್ತಿ ತೆರಿಗೆ ಈ ಹಿಂದೆ 200% ಇತ್ತು. ಸರ್ಕಾರ ಇದನ್ನು 100% ಇಳಿಕೆ ಮಾಡಿದ್ದು, ಮಾಲೀಕರಿಗಿದ್ದ ದಂಡದ ಹೊರೆಯನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


