Saturday, August 8, 2026
spot_img
More
    spot_img
    Homeimp newsNCRTC Recruitment 2025: 72 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ; ರೂ 75,850 ವರೆಗೆ ವೇತನ ಪಡೆಯುವ...

    NCRTC Recruitment 2025: 72 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ; ರೂ 75,850 ವರೆಗೆ ವೇತನ ಪಡೆಯುವ ಅವಕಾಶ!

    ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್‌ಪೋರ್ಟ್‌ ಕಾರ್ಪೋರೇಷನ್ (NCRTC) 2025 ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. NCRTC ಜೂನಿಯರ್ ಇಂಜಿನಿಯರ್, ಪ್ರೋಗ್ರಾಮಿಂಗ್ ಅಸೋಸಿಯೇಟ್, ಅಸಿಸ್ಟಂಟ್ ಮತ್ತು ಜೂನಿಯರ್ ಮೇಂಟೇನರ್ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಲಿಂಕ್ ಈಗಾಗಲೇ ಲಭ್ಯವಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ.

    Advertisement

    ಒಟ್ಟು 72 ಹುದ್ದೆಗಳನ್ನು ಈ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಅಗತ್ಯ ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

    ಉದ್ಯೋಗ ವಿವರಗಳು

    ಇಲಾಖೆ ಹೆಸರು ನೆಷನಲ್ ಕ್ಯಾಪಿಟಲ್ ರಿಜಿಯನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್ (NCRTC)

    ಹುದ್ದೆಗಳ ಹೆಸರು ವಿವಿಧ ಹುದ್ದೆಗಳು

    ಒಟ್ಟು ಹುದ್ದೆಗಳು 72

    ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online) ಆಫ್ಲೈನ್ (Offline)

    ಉದ್ಯೋಗ ಸ್ಥಳ – ಭಾರತಾದ್ಯಂತ

    ಜೂನಿಯರ್‌ ಇಂಜಿನಿಯರ್ 36

    ಪ್ರೋಗ್ರಾಮಿಂಗ್ ಅಸೋಸಿಯೇಟ್ 04

    ಅಸಿಸ್ಟಂಟ್‌ 04

    ಜೂನಿಯರ್ ಮೇಂಟೇನರ್ (ಕಿರಿಯ ನಿರ್ವಹಣಾಗಾರರು) 28

    ಶೈಕ್ಷಣಿಕ ಅರ್ಹತೆ:

    ಟೆಕ್ನೀಶಿಯನ್ ಹುದ್ದೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ITI ಪಾಸಾಗಿರಬೇಕು.

    ಸ್ಟೇಷನ್ ಕಂಟ್ರೋಲರ್/ಟ್ರೇನ್ ಆಪರೇಟರ್: ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ಅಥವಾ ಸಮಾನ ಶ್ರೇಣಿಯ ವಿದ್ಯಾರ್ಹತೆ.

    ಮೈಂಟೆನನ್ಸ್ ಅಸೋಸಿಯೇಟ್: ಸಂಬಂಧಿತ ವಿಷಯದಲ್ಲಿ ಡಿಪ್ಲೋಮಾ.

    ಜೂನಿಯರ್ ಇಂಜಿನಿಯರ್: ಡಿಪ್ಲೋಮಾ ಅಥವಾ B.Tech ಪದವಿ.

    ವಯೋಮಿತಿ:

    ಕನಿಷ್ಠ ವಯೋಮಿತಿ: 18 ವರ್ಷ

    ಗರಿಷ್ಠ ವಯೋಮಿತಿ: 28 ವರ್ಷ

    ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಯ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

    ಪ್ರಮುಖ ದಿನಾಂಕಗಳು

    ಆನ್‌ಲೈನ್ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 24-03-2025

    ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24-04-2025 ರ 23:59 ಗಂಟೆವರೆಗೆ.

    ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ (ಸಂಭಾವ್ಯ) : ಮೇ 2025

    ಹುದ್ದೆವಾರು ವೇತನ ಶ್ರೇಣಿ ವಿವರ

    ಜೂನಿಯರ್‌ ಇಂಜಿನಿಯರ್: Rs.22800-75850.

    ಪ್ರೋಗ್ರಾಮಿಂಗ್ ಅಸೋಸಿಯೇಟ್: Rs.22800-75850.

    ಅಸಿಸ್ಟಂಟ್‌: Rs.20250-65500.

    ಜೂನಿಯರ್ ಮೇಂಟೇನರ್ : Rs.18250-59200

    ಆಯ್ಕೆ ಪ್ರಕ್ರಿಯೆ:

    ಲಿಖಿತ ಪರೀಕ್ಷೆ (CBT) – ವಿಷಯ ಸಂಬಂಧಿತ ಅಬ್ಜೆಕ್ಟಿವ್ ಕ್ವಶನ್ಸ್.

    ಪ್ರಾಯೋಗಿಕ ಜ್ಞಾನ ಪರೀಕ್ಷೆ – ತಾಂತ್ರಿಕ ಹುದ್ದೆಗಳಿಗೆ ಪ್ರಾಯೋಗಿಕ ಜ್ಞಾನ ಪರೀಕ್ಷೆ.

    ವೈದ್ಯಕೀಯ ಪರೀಕ್ಷೆ – ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

    ದಾಖಲೆಗಳ ಪರಿಶೀಲನೆ – ಮೂಲ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ.

    ಅರ್ಜಿ ಶುಲ್ಕ

    ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 1000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಆದರೆ ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಉಚಿತ.

    ಅರ್ಜಿ ಸಲ್ಲಿಸುವ ವಿಧಾನ:

    ಅರ್ಹ ಮತ್ತು ಆಸಕ್ತರು http://www.ncrtc.in ವೆಬ್‌ಸೈಟ್‌ಗೆ ಭೇಟಿ ನೀಡಿ.

    ತೋರಿಸುವ ವೆಬ್‌ಪೇಜ್‌ನಲ್ಲಿ “Click Here For O & M Vacancy Notice No 13 / 2025” ಎಂಬ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

    ಬಳಿಕ, ಅರ್ಜಿ ಸಲ್ಲಿಸಲು “Apply Now” ಬಟನ್‌ ಕ್ಲಿಕ್ ಮಾಡಿ.

    ತೆರೆಯುವ ಹೊಸ ವೆಬ್‌ಪೇಜ್‌ನಲ್ಲಿ ಅಗತ್ಯ ಮಾಹಿತಿ ನಮೂದಿಸಿ, ಮೊದಲು ರಿಜಿಸ್ಟ್ರೇಷನ್‌ ಮಾಡಿ.ನಂತರ, ಲಾಗಿನ್‌ ಆಗಿ ಮತ್ತು ಅರ್ಜಿ ಸಲ್ಲಿಸಿ.

    ಅರ್ಜಿ ಸಲ್ಲಿಸುವ ಮೊದಲು ಈ ಕೆಳಕಂಡ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:

    ಆಧಾರ್ ಕಾರ್ಡ್

    ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

    ಡಿಪ್ಲೊಮಾ/ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳು

    ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)

    ಮೀಸಲಾತಿ ಸಾಬೀತುಪಡಿಸುವ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)

    ಅಭ್ಯರ್ಥಿಗಳು ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಸಮಯಕ್ಕೆ ಮುನ್ನ ಅರ್ಜಿ ಸಲ್ಲಿಸುವಂತೆ ಶಿಫಾರಸು ಮಾಡಲಾಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading