ಗುವಾಹಟಿ: ನಿನ್ನೆ ( ಮಾರ್ಚ್ 30 ) ಇಲ್ಲಿನ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್‌ನ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ರನ್‌ಗಳ ಗೆಲುವನ್ನು ಕಂಡಿತು. ಈ ಗೆಲುವಿನ ಮೂಲಕ ಸತತ ಎರಡು ಸೋಲು ಕಂಡಿದ್ದ ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 183 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಮೂಲಕ ಟ್ರೋಲ್ ಆಗಿದ್ದ ಎಂಎಸ್ ಧೋನಿ ಈ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ತಂಡಕ್ಕೆ ಗೆಲ್ಲಲು 6 ಎಸೆತಗಳಲ್ಲಿ 19 ರನ್ ಬೇಕಿದ್ದಾಗ ಸಂದೀಪ್ ಶರ್ಮಾ ಎಸೆದ ಎಸೆತಕ್ಕೆ ದೊಡ್ಡ ಹೊಡೆತ ಬಾರಿಸಲು ಯತ್ನಿಸಿ ಲಾಂಗ್‌ಆನ್‌ನಲ್ಲಿದ್ದ ಶಿಮ್ರಾನ್ ಹೆಟ್ಮೇರ್‌ಗೆ ಕ್ಯಾಚ್ ನೀಡಿ ಔಟ್ ಆದರು.
ಹೀಗೆ ಎಂಎಸ್ ಧೋನಿ ಔಟ್ ಆಗಿದ್ದನ್ನು ಕ್ರಿಕೆಟ್ ಪ್ರಿಯರು ಟೀಕಿಸುತ್ತಿದ್ದು, ಈ ಹಿಂದೆ ಇದೇ ರೀತಿಯ ಕಷ್ಟಕರವಾದ ಚೇಸ್ ವಿರಾಟ್ ಕೊಹ್ಲಿಗೂ ಬಂದಿತ್ತು. ಆಗ ಕೊಹ್ಲಿ ಪಂದ್ಯವನ್ನು ಗೆಲ್ಲಿಸಿದರು ಎಂದು 2022ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ಮಾಡಿದ್ದ ಕಷ್ಟಕರ ಚೇಸ್ ಅನ್ನು ಹೋಲಿಸುತ್ತಿದ್ದಾರೆ. ಈ ಕುರಿತ ಹಲವಾರು ಪೋಸ್ಟ್‌ಗಳು ಎಕ್ಸ್‌ನಲ್ಲಿ ಪ್ರಕಟಗೊಂಡಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


