ಕರ್ನಾಟಕ ಬಿಜೆಪಿಯ ಹಿಂದೂ ಹುಲಿ ಎಂದೇ ಕರೆಸಿಕೊಳ್ಳುವ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹೈಕಮಾಂಡ್ ಉಚ್ಚಾಟನೆಯ ಚಾಟಿ ಬೀಸಿದ್ದು, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹಾಗೂ ಕುಟುಂಬಸ್ಥರ ವಿರುದ್ಧ ಸತತವಾಗಿ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಇನ್ನು ಪಕ್ಷದಿಂದ ಹೊರಬಿದ್ದ ಬಳಿಕವೂ ಬಿಎಸ್‌ವೈ ಹಾಗೂ ವಿಜಯೇಂದ್ರ ಯಡಿಯೂರಪ್ಪ ಹರಿಹಾಯ್ದಿದ್ದು, ಯುಗಾದಿ ಹಬ್ಬದ ದಿನ ಹೊಸ ಪಕ್ಷ ಸ್ಥಾಪಿಸುವ ಮಾತುಗಳನ್ನಾಡಿದ್ದರು. ಹೀಗೆ ರೆಬೆಲ್ ಆಗಿರುವ ಯತ್ನಾಳ್‌ಗೆ ರಮೇಶ್ ಜಾರಕಿಹೊಳಿ ಬೆಂಬಲವನ್ನು ನೀಡಿದ್ದು, ಅವರು ಪಕ್ಷಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಯತ್ನಾಳ್ ಬೆಂಬಲಿಸಿ ಹೇಳಿಕೆ ನೀಡುವಂತೆ ಚಿತ್ರದುರ್ಗ ಮೂಲದ ಇಬ್ಬರು ಸ್ವಾಮೀಜಿಗಳನ್ನು ರಮೇಶ್ ಜಾರಕಿಹೊಳಿ ಸಂಪರ್ಕಿಸಿ ಮನವಿ ಮಾಡಿದ್ದು, ಇದಕ್ಕೆ ಸ್ವಾಮೀಜಿಗಳು ಗರಂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾರೀ ಯತ್ನಾಳ್ ನಾವ್ಯಾಕೆ ಅವರ ಪರ ಮಾತನಾಡಬೇಕು ಎಂದು ಸ್ವಾಮೀಜಿಗಳು ಜಾರಿಕಿಹೊಳಿ ಮನವಿಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


