ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಇಂದು ಬೆಳಗ್ಗೆ ರಂಜಾನ್ ಪ್ರಾರ್ಥನೆ ವೇಳೆ ಪ್ಯಾಲಿಸ್ತೀನ್ ಪರ ಘೋಷಣೆ ಕೇಳಿ ಬಂದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಈಗ ಗಂಗಾವತಿ ಪೊಲೀಸರು ಕ್ರಮ ಕೈಗೊಂಡಿದ್ದು ಘೋಷಣೆ ಕೂಗಿದ ಆರು ಮಂದಿಯನ್ನು ಗುರುತಿಸಿ ಬಂದನ ಮಾಡಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಘೋಷಣೆ ಕೂಗಿದ್ದ ಗುಂಪು ಅದೇ ಸಮಯದಲ್ಲಿ ಪ್ಯಾಲೇಸ್ತೀನ್ ಪರವೂ ಘೋಷಣೆ ಕೂಗಿದ್ದರು.
ಇನ್ನು ರಾಜ್ಯದ್ಯಂತ ಸಂಭ್ರಮದಿಂದ ರಂಜಾನ್ ಆಚರಣೆ ನಡೆದಿದ್ದು ಹಲವೆಡೆ ರಾಜಕೀಯ ನಾಯಕರು ರಂಜಾನ್ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಹಾಗೂ ಇವರಿಗೆ ಸರ್ಕಾರಿ ಅಧಿಕಾರಿಗಳು ಸಾಥ್ ನೀಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


