Wednesday, September 2, 2026
spot_img
More
    spot_img
    HomeEntertainmentಕಾಂತಾರ 1’ ರಿಲೀಸ್‌ಗೂ ಮುನ್ನವೇ ಹೊಸ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಹಿ ಹಾಕಿದ ರಿಷಬ್ ಶೆಟ್ಟಿ

    ಕಾಂತಾರ 1’ ರಿಲೀಸ್‌ಗೂ ಮುನ್ನವೇ ಹೊಸ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಹಿ ಹಾಕಿದ ರಿಷಬ್ ಶೆಟ್ಟಿ

    ರಿಷಬ್ ಶೆಟ್ಟಿ ಮೂರನೇ ಪ್ಯಾನ್ ಇಂಡಿಯಾ ಸಿನಿಮಾಗೆ ಸಹಿ ಹಾಕಿದ್ದಾರೆ! ಅವರಿಗೆ ಈಗ ಭಾರತದ ವಿವಿಧ ಭಾಷಾ ಚಿತ್ರರಂಗಗಳಿಂದ ಭಾರಿ ಬೇಡಿಕೆ ಇದ್ದು, ಇದು ಅವರ ಸಾಮಾಜಿಕ ಪ್ರಭಾವ ಮತ್ತು ಕಲಾತ್ಮಕ ಸಾಮರ್ಥ್ಯದ ಸಾಕ್ಷಿ. ಪ್ರಸ್ತುತ ಅವರು ಬಹು ನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಈ ಚಿತ್ರ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಇದರ ಜೊತೆಗೆ, ಅವರು ಪರಭಾಷಾ ನಿರ್ಮಾಪಕರಿಗೆ ಕಾಲ್ ಶೀಟ್ ನೀಡುತ್ತಿರುವುದು ಗಮನಸೆಳೆಯುವ ಸಂಗತಿ.ಈಗಾಗಲೇ ಎರಡು ಪರಭಾಷೆ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗಿ, ಜುಲೈ 30 ರಂದು ಮತ್ತೊಂದು ಭಾರೀ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಆಗಿದೆ. ಈ ಐತಿಹಾಸಿಕ ಚಿತ್ರವನ್ನು ಎಸ್.ಎಸ್. ರಾಜಮೌಳಿ ಶಿಷ್ಯ ಅಶ್ವಿನ್ ಗಂಗರಾಜು ನಿರ್ದೇಶಿಸಲಿದ್ದಾರೆ. ‘ಸುಟ್ಟ ಭೂಮಿಯಿಂದ ಒಬ್ಬ ಬಂಡುಕೋರ ಹುಟ್ಟಿದ’ ಎಂಬ ಶಕ್ತಿಶಾಲಿ ಟ್ಯಾಗ್‌ಲೈನ್‌ ಜೊತೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.‘ಕಾಂತಾರ ಅಧ್ಯಾಯ 1’ ಬಿಡುಗಡೆಯಾಗುವ ಮೊದಲುವೇ, ರಿಷಬ್ ಶೆಟ್ಟಿ ಅವರು ಈ ತೆಲುಗು ನಿರ್ದೇಶಕನ ಹೈ-ಬಜೆಟ್ ಐತಿಹಾಸಿಕ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲಿದ್ದಾರೆ ಎಂಬುದು ಈಗ ಅಧಿಕೃತವಾಗಿದೆ.

    Advertisement

    ಈ ಚಿತ್ರವು 18ನೇ ಶತಮಾನದ ಬಂಗಾಲ ಪ್ರಾಂತ್ಯದ ಕ್ರಾಂತಿಕಾರಿ ಹೋರಾಟಗಾರನ ಜೀವನದ ಮೇಲೆ ಆಧಾರಿತವಾಗಿದ್ದು, ರಿಷಬ್ ಶೆಟ್ಟಿ ಅವರು ಈ ಬಂಡುಕೋರನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಲಿದ್ದಾರೆ ಎನ್ನಲಾಗಿದೆ.18ನೇ ಶತಮಾನದ ಬಂಗಾಲ ಪ್ರಾಂತ್ಯದ ಕ್ರಾಂತಿಕಾರಿ ಹೋರಾಟಗಾರನ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.”ಎಲ್ಲಾ ಬಂಡುಕೋರರು ಯುದ್ಧದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಕೆಲವರನ್ನು ವಿಧಿ ಆಯ್ಕೆ ಮಾಡುತ್ತದೆ ಮತ್ತು ಇದು ಬಂಡುಕೋರನ ಕಥೆ.. ನನ್ನ ಮುಂದಿನ ಚಿತ್ರ, ನಿಮ್ಮ ಆಶೀರ್ವಾದ ಎಂದಿನಂತೆ ಸದಾ ಇರಲಿ” ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದು, ಫಸ್ಟ್ ಲುಕ್ ಎಲ್ಲರ ಗಮನಸೆಳೆಯುತ್ತಿದೆ. ಅಂದಹಾಗೆ, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ಅಶ್ವಿನ್ ಗಂಗರಾಜು ಅವರು ರಾಜಮೌಳಿ ಬಳಿ ಹಲವು ವರ್ಷಗಳಿಂದ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಈಗ, ಬಾಹುಬಲಿ ಮುಂತಾದ ಸಿನಿಮಾಗಳಿಗೆ ಅಶ್ವಿನ್ ಕೆಲಸ ಮಾಡಿದ್ದಾರೆ. ಅಲ್ಲದೆ, ‘ಆಕಾಶವಾಣಿ’ ಎಂಬ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿದ್ದಾರೆ.ಈಗ ರಿಷಬ್ ಶೆಟ್ಟಿ ಅವರ ಜೊತೆಗೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ ಅಶ್ವಿನ್ ಗಂಗರಾಜು. ಇದರಲ್ಲಿ ಬೇರೆ ಯಾರೆಲ್ಲಾ ನಟಿಸಲಿದ್ದಾರೆ? ತಾಂತ್ರಿಕವರ್ಗದಲ್ಲಿ ಯಾರ್ ಯಾರು ಇದ್ದಾರೆ ಎಂಬೆಲ್ಲಾ ಮಾಹಿತಿಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಕನ್ನಡ ಅಥವಾ ತೆಲುಗಿನಲ್ಲಿ ನಿರ್ಮಾಣವಾಗುವ ಈ ಸಿನಿಮಾ ಬಹುಭಾಷೆಗಳಿಗೆ ಡಬ್ ಆಗಿ ತೆರೆಗೆ ಬರುವ ಸಾಧ್ಯತೆ ಇದೆ.

    ಲೆಮನ್‌ಗ್ರಾಸ್ ಟೀ: ದೇಹದ ಡಿಟಾಕ್ಸ್‌ಗೂ, ಆರೋಗ್ಯ ವೃದ್ಧಿಗೂ ಪ್ರತಿ ದಿನ ಕುಡಿಯಲೇಬೇಕಾದ ಡ್ರಿಂಕ್!

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading