ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ತಿರುವು ಸಿಕ್ಕಿದ್ದು, ಅನಾಮಿಕ ಗುರುತಿಸಿದ್ದ ಆರನೇ ಪಾಯಿಂಟ್‌ನಲ್ಲಿ ಅಸ್ತಿಪಂಜರ ಸಿಕ್ಕಿದೆ.
ಸ್ಥಳ ಮಹಜರು ನಡೆಸಿದ ವೇಳೆ 13 ಸ್ಥಳಗಳಲ್ಲಿ ಅಸ್ತಿಪಂಜರ ಇದೆ ಎಂದು ಅನಾಮಿಕ ಗುರುತು ಮಾಡಿದ್ದ. ಅನಾಮಿಕನ ಸಲಹೆ ಮೇರೆಗೆ 13 ಸ್ಥಳಗಳನ್ನು ಗುರುತಿಸಿದ ಎಸ್‌ಐಟಿ ಅಧಿಕಾರಿಗಳು ಒಂದೊಂದಾಗಿ ಅಗೆಯಲು ಆರಂಭಿಸಿದರು. ಮೊದಲ 5 ಸ್ಥಳಗಳಲ್ಲಿ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.
ಆದರೆ ಇದೀಗ ಆರನೇ ಪಾಯಿಂಟ್‌ನಲ್ಲಿ ಅಸ್ತಿಪಂಜರದ ಅವಶೇಷ ಪತ್ತೆಯಾಗಿದೆ. ಎರಡು ಎಲುಬುಗಳು ಪತ್ತೆಯಾಗಿದ್ದು, ಸಾಕ್ಷಿ ದೂರುದಾರನ ಆರೋಪ ಈ ಮೂಲಕ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಧರ್ಮಸ್ಥಳ ಸರಣಿ ಕೊಲೆ: ಎಸ್‌ಐಟಿಗೆ ಮತ್ತೆ 9 ಮಂದಿ ಪೊಲೀಸ್ ಅಧಿಕಾರಿಗಳ ನೇಮಕ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


